ಚಿತ್ರದುರ್ಗ: ಕರುನಾಡ ವಿಜಯಸೇನೆಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.10ರಂದು ಸಂಜೆ 5.40ಕ್ಕೆ ಕನ್ನಡ ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರಿಗೆ ಕೋಟೆ ನಾಡಿನ ರಾಜಕೀಯ ಭೀಷ್ಮ, ಡಿಡಿಪಿಐ ಕೆ.ರವಿಶಂಕರ ರೆಡ್ಡಿಗೆ ಕೋಟೆನಾಡಿನ ಶಿಕ್ಷಣ ಕ್ರಾಂತಿಕಾರಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಕೋಟೆ ನಾಡಿನ ರಾಜಕೀಯ ಸುಪುತ್ರ ಬಿರುದು ನೀಡಿ ಸನ್ಮಾನಿಸಲಾಗುವುದು. ಇದಲ್ಲದೆ ಸಮಾಜದ ಕೊಳೆ ತೊಳೆಯುವವರು, ಪಾದರಕ್ಷೆ ಹೊಲಿಯುವವರು, ಕ್ಷೌರಿಕರು, ಅನಾಥ ಶವಗಳನ್ನು ಸಂಸ್ಕಾರ ಮಾಡುವವರು, ಬಟ್ಟೆ ಇಸ್ತ್ರಿ ಮಾಡುವವರು, ಪೌರ ಕಾರ್ಮಿಕರು, ಆಸ್ಪತ್ರೆಗಳಲ್ಲಿ ಶವದ ಪೋಸ್ಟ್ ಮಾರ್ಟಂ ನಡೆಸುವವರನ್ನು ಗುರುತಿಸಿ ಗೌರವಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡದ ಹಬ್ಬವನ್ನು ಸವಿಯುವಂತೆ ಕೆ.ಟಿ.ಶಿವಕುಮಾರ್ ವಿನಂತಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಅಣ್ಣಪ್ಪ, ನಿಸಾರ್ ಅಹಮದ್, ಉಪಾಧ್ಯಕ್ಷೆ ರತ್ನಮ್ಮ, ಪ್ರದೀಪ್, ಜಗದೀಶ್ ಪಿ. ಸುರೇಶ್, ವಿದ್ಯಾರ್ಥಿ ಘಟಕದ ಅಖಿಲೇಶ್, ಮಣಿಕಂಠ, ಹರೀಶ್ ಕುಮಾರ್, ಸಂತೋಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.