ನ.4ಕ್ಕೆ ಗೆಳೆಯರ ಬಳಗದಿಂದ ಕನ್ನಡ ಹಬ್ಬ: ಕನಕಲ್

KannadaprabhaNewsNetwork |  
Published : Oct 31, 2024, 12:47 AM ISTUpdated : Oct 31, 2024, 12:48 AM IST
ಸುಲ್ತಾನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನ.4ರಂದು ಪಟ್ಟಣದ ಹೊಸನಗರದ ಟಿಪ್ಪು ಸುಲ್ತಾನ ವೃತ್ತದ ಬಳಿ ರಾಜ್ಯೋತ್ಸವದ ಅಂಗವಾಗಿ ಗೆಳೆಯರ ಬಳಗದಿಂದ ಕನ್ನಡ ಹಬ್ಬ ಏರ್ಪಡಿಸಲಾಗಿದೆ ಎಂದು ಗೆಳೆಯರ ಬಳಗದ ರೆಹಮಾನ್ ಕನಕಲ್ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.4 ರಂದು ಸಂಜೆ ನಡೆಯುವ ಕನ್ನಡ ಹಬ್ಬದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಾಲೂಕಿನ ಕನ್ನಡಪರ ಸಂಘಟನೆಗಳು, ಕನ್ನಡಿಗರು ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನ.4ರಂದು ಪಟ್ಟಣದ ಹೊಸನಗರದ ಟಿಪ್ಪು ಸುಲ್ತಾನ ವೃತ್ತದ ಬಳಿ ರಾಜ್ಯೋತ್ಸವದ ಅಂಗವಾಗಿ ಗೆಳೆಯರ ಬಳಗದಿಂದ ಕನ್ನಡ ಹಬ್ಬ ಏರ್ಪಡಿಸಲಾಗಿದೆ ಎಂದು ಗೆಳೆಯರ ಬಳಗದ ರೆಹಮಾನ್ ಕನಕಲ್ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.4 ರಂದು ಸಂಜೆ ನಡೆಯುವ ಕನ್ನಡ ಹಬ್ಬದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಾಲೂಕಿನ ಕನ್ನಡಪರ ಸಂಘಟನೆಗಳು, ಕನ್ನಡಿಗರು ಪಾಲ್ಗೊಳ್ಳಬೇಕು. ಇದೇ ಸಂದರ್ಭದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ವಿಶೇಷವಾಗಿ 55 ಎಚ್‌ಪಿ ಟ್ರ್ಯಾಕ್ಟರ್‌ ಜಗ್ಗುವ ಸ್ಪರ್ಧೆ ಏರ್ಪಡಿಸಲಾಗಿದೆ. ಇದಕ್ಕೂ ಮುಂಚೆ ಡಾ.ಅಂಬೇಡ್ಕರ ವೃತ್ತದಿಂದ ಬಸ್ ನಿಲ್ದಾಣ ಮುಂದೆ ಮೊಹರೆ ವೃತ್ತದಿಂದ ತಾಳಿಕೋಟಿ ರಸ್ತೆಯ ಮೂಲಕ ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಲಿಗೆ ಮೇಳದೊಂದಿಗೆ ಶಾಲಾ ಮಕ್ಕಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರ ಜೊತೆಗೂಡಿ ಟಿಪ್ಪುಸುಲ್ತಾನ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ ನಂತರ ಬಹಿರಂಗ ಸಮಾವೇಶ ಜರುಗಲಿದೆ. ಸಂಜೆ ಸಿನಿಮಾ ಕಲಾವಿದರಿಂದ ರಸಮಂಜರಿ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಹೊಸನಗರದ ಅವುಗೇಶ್ವರ ತಪೋವನದ ಪರದೇಶಿಮಠದ ಶಿವಯೋಗೆಶ್ವರ ಸ್ವಾಮೀಜಿ ಮಾತನಾಡಿ, ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾದ ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನಾಡು ನುಡಿಗಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ಮನೆಯ ಕಾರ್ಯಕ್ರಮವಾಗಬೇಕು. ತನು ಮನ ಧನದಿಂದ ಸಹಕಾರ ನೀಡುವಂತೆ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡಾಂಬೆ ಸೇವೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಹೀದ್ ರೂಗಿ, ಸುನೀಲ್ ಕನಮಡಿ, ಅಶೋಕ ಯಾದವ, ಹಬ್ಬುಸಾಬ ಮಣೂರ, ರಾವುತ್ ಹುಮನಾಬಾದ ಸೇರಿ ಇತರರು ಇದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ