ಜಗತ್ತಿನ ಹಲವಾರು ಭಾಷೆಗಳಲ್ಲಿ ಕನ್ನಡ ಶ್ರೀಮಂತ ಭಾಷೆ: ಸೂರಿ

KannadaprabhaNewsNetwork |  
Published : Feb 27, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಜಗತ್ತಿನ ಹಲವಾರು ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಹಾಗೂ ಸುಂದರವಾದುದು ಕನ್ನಡ ಭಾಷೆ. ಈ ಭಾಷೆಯ ಅಳಿವು ಸಾಧ್ಯವಿಲ್ಲ. ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿದು ಕೊಳ್ಳಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಗತ್ತಿನ ಹಲವಾರು ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಹಾಗೂ ಸುಂದರವಾದುದು ಕನ್ನಡ ಭಾಷೆ. ಈ ಭಾಷೆಯ ಅಳಿವು ಸಾಧ್ಯವಿಲ್ಲ. ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿದು ಕೊಳ್ಳಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕಾಫಿಲ್ಯಾಂಡ್ ಆಯೋಜಿಸಿದ್ಧ ಕಲ್ಲೇಗೌಡ ಮತ್ತು ನಾಗಲಕ್ಷ್ಮಿ ಅವರ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸದ ಕನ್ನಡಭಾಷೆಯನ್ನು ಕನ್ನಡಿಗರು ಎತ್ತಿಹಿಡಿಯಬೇಕು. ಒಂದು ಭಾಷೆ ಅವನತಿಯಾದರೆ, ತನ್ನ ಸಂಸ್ಕೃತಿ, ಪರಂಪರೆ ಕಳೆದು ಕೊಳ್ಳಲಿದೆ. ಆದ್ದರಿಂದ ಎಲ್ಲಾ ಭಾಷೆಗಳನ್ನು ಉಳಿಸಿಕೊಳ್ಳಬೇಕು. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಭಾಷೆ ಜಗತ್ತಿನಲ್ಲೇ ಶ್ರೀಮಂತವಾಗಿದೆ ಎಂದು ತಿಳಿಸಿದರು.ಕಸಾಪ ನಗರಾಧ್ಯಕ್ಷೆ ರೂಪನಾಯ್ಕ್ ದತ್ತಿ ಉಪನ್ಯಾಸ ನೀಡಿದ ಅವರು, ಮಹಿಳೆಯರಿಗೆ ವಿಶೇಷ ಸ್ಥಾನಮಾನ ಲಭಿಸಿದ್ದು 12 ನೇ ಶತಮಾನದಲ್ಲಿ. ಆನಂತರ ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಸಂವಿಧಾನದಲ್ಲಿ ಮಹಿಳೆಗೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾನ ಅವಕಾಶ ಸಿಕ್ಕಿದೆ ಎಂದರು.ತಾಳ್ಮೆಗೆ ಮತ್ತೊಂದು ಹೆಸರೇ ಮಹಿಳೆ. ಕೌಟುಂಬಿಕ ನಿರ್ವಹಣೆ ಹೆಣ್ಣಿನ ಹೆಗಲ ಮೇಲಿದೆ. ಕುಟುಂಬದ ಸಂಸ್ಕೃತಿ, ಸಾಮಾಜಿಕ ಮತ್ತು ಕೌಟುಂಬಿಕವಾಗಿ ಉಳಿಸುವ ಹೊಣೆಗಾರಿಕೆ ಮಹಿಳೆಯದ್ದಾಗಿದೆ. ಉತ್ತಮ ಸಂಸ್ಕೃತಿ ಪಸರಿಸುವಲ್ಲಿ ಮಹಿಳೆ ಪಾತ್ರ ಹಿರಿದಾಗಿದೆ ಎಂದು ತಿಳಿಸಿದರು.ಇದೇ ವೇಳೆ ದತ್ತಿ ದಾನಿಗಳಾದ ಕೆ.ಎಸ್.ಕಲ್ಲೇಗೌಡ, ಕೆ.ಮೋಹನ್ ಮತ್ತು ಶ್ರೀಮತಿ ಎಂ.ಜೆ ನಾಗ ಲಕ್ಷ್ಮಿ ಅಭಿನಂದಿಸಿ ಗೌರವಿಸಲಾಯಿತು. ರೋಟರಿ ಕ್ಲಬ್‌ನ ಅಧ್ಯಕ್ಷ ನಾಗೇಶ್ ಕೆಂಜಿಗೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎಚ್.ಡಿ. ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಸಾಪ ನಗರ ಸಂಚಾಲಕಿ ಜಯಂತಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಸ್‌ ಕೋರ್ಸ್‌ ಸ್ಥಳಾಂತರಕ್ಕೆ ಪ್ರಭಲ ವಿರೋಧ
ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು