ಕುಷ್ಟಗಿ: ಕನ್ನಡ ಒಂದು ಶಬ್ದವಲ್ಲ, ಅದು ಜೀವನ ಎಂದು ಸಾಹಿತಿ ಮೌನೇಶ ನವಲಹಳ್ಳಿ ಅಭಿಪ್ರಾಯಪಟ್ಟರು.
ಬಿಜಕಲ್ ಗ್ರಾಪಂ ಅಧ್ಯಕ್ಷ ಸಂಗಪ್ಪ ತೆಗ್ಗಿನಮನಿ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಬನ್ನಿಗೋಳ, ಮುಖ್ಯಶಿಕ್ಷಕ ಬಸವರಾಜ ಬಾಗಲಿ, ರವೀಂದ್ರ ಬಾಕಳೆ, ವಿ.ಎಸ್. ಕಾಡಗಿಮಠ, ನಿಂಗಪ್ಪ ಸಜ್ಜನ, ಶರಣಪ್ಪ ಲೈನದ್, ಮಂಜೂರಲಿ ದೋಟಿಹಾಳ, ಮನೋಹರ ಬಡಿಗೇರ, ಮಂಜುನಾಥ ಮಠಪತಿ, ಶ್ರೀಧರ ವಂಕಲಕುಂಟಿ, ಶರಣಪ್ಪ ಕೊಪ್ಪಳ, ಮಲ್ಲಿಕಾರ್ಜುನ ಕಮ್ಮಾರ, ಬಸವರಾಜ್ ಪೊಲೀಸ್ ಪಾಟೀಲ್, ಮಂಜುನಾಥ ಬೆಳಗಲ್, ಶರಣಬಸವ ಮಾದರ, ಚಂದ್ರಶೇಖರ ಅಡಿವೆಪ್ಪಗೌಡ್ರು, ಮೈಲಾರಪ್ಪ ಕೊಡಗಲಿ ಇದ್ದರು. ಶಿಕ್ಷಕ ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ದೇವರಾಜ ವಿಶ್ವಕರ್ಮ ವಂದಿಸಿದರು. ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.