ಕಲೆ, ಕಲಾವಿದರ ಸಂರಕ್ಷಣೆಗೆ ಹುಟ್ಟಿದ್ದೇ ಕನ್ನಡ ಜಾನಪದ ಪರಿಷತ್

KannadaprabhaNewsNetwork |  
Published : Feb 26, 2025, 01:02 AM IST
ಕನ್ನಡ ಜಾನಪದ ಪರಿಷತ್  ಹೋಬಳಿ ಮಹಿಳಾ ಘಟಕದ ಉದ್ಗಾಟನೆ | Kannada Prabha

ಸಾರಾಂಶ

ತರೀಕೆರೆ, ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗೋಸ್ಕರ ಹುಟ್ಟಿಕೊಂಡಂತ ಸಂಸ್ಥೆ ಎಂದು ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಹೇಳಿದ್ದಾರೆ.

ಹೋಬಳಿ ಮಹಿಳಾ ಘಟಕದ ಉದ್ಘಾಟನೆಯಲ್ಲಿ : ಎಂ.ಎಸ್ ವಿಶಾಲಾಕ್ಷಮ್ಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗೋಸ್ಕರ ಹುಟ್ಟಿಕೊಂಡಂತ ಸಂಸ್ಥೆ ಎಂದು ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಹೇಳಿದ್ದಾರೆ. ಕನ್ನಡ ಜಾನಪದ ಪರಿಷತ್‌ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದಿಂದ ಎಂ.ಸಿ.ಹಳ್ಳಿ ಗ್ರಾಮ ಪಂಚಾಯಿತಿ ಹೊಸ ಕಟ್ಟಡದಲ್ಲಿ ನಡೆದ ಹೋಬಳಿ ಮಹಿಳಾ ಘಟಕ ಮತ್ತು ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಮೌಖಿಕ ಪರಂಪರೆ ಹಾಗು ಪ್ರದರ್ಶನ ಕಲೆಗಳನ್ನು ಹಳೆ ತಲೆಮಾರಿಯಿಂದ ಹೊಸ ತಲೆಮಾರಿಗೆ ದಾಖಲಿಕರಣ, ತರಬೇತಿ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಶಾಲೆ ಯಿಂದ ವಿಶ್ವವಿದ್ಯಾಲಯದವರೆಗೂ ಸಂಘಟಿಸಲಾಗುತ್ತಿದೆ ಎಂದು ವಿವರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮೇಗೌಡ ಮಾತನಾಡಿ ಜಾನಪದ ಸಮುದ್ರ ಇದ್ದಹಾಗೆ ಅದಕ್ಕೆ ಇತಿ ಮಿತಿ ಇಲ್ಲ ಎಲ್ಲ ಕಡೆ ಹರಡಿದೆ ಸ್ವತಃ ಜಾನಪದದಲ್ಲಿ ಎಂ.ಎ. ಪದವಿ ಪಡೆದ ನಾನು ನನಗೆ ತುಂಬಾ ಹೆಮ್ಮೆ ಅನಿಸುತ್ತೆ, ಮುಂದಿನ ದಿನ ಗಳಲ್ಲಿ ತರೀಕೆರೆ ತಾಲೂಕು ಸಮ್ಮೇಳನವನ್ನು ತಾಲೂಕಿನ ಎಲ್ಲ ಕಲಾ ತಂಡ ಮತ್ತು ಕಲಾವಿದರನ್ನು ಗುರುತಿಸುವ ಮುಖೇನ ಅದ್ಬುತ ಕಾರ್ಯಕ್ರಮವಾಗಿ ಮಾಡೋಣ ಎಂದು ಹೇಳಿದರು. ಹೋಬಳಿ ಘಟಕದ ಅಧ್ಯಕ್ಷರಾಗಿ ಪದವಿ ಸ್ವೀಕಾರ ಮಾಡಿದ ದಾಕ್ಷಾಯಿಣಿ ಬಾಯಿ ಮಾತನಾಡಿ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿಕೊಂಡು ಜಾನಪದ ಉಳಿಸಿ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯುವ ಕೆಲಸ ಮಾಡುವೆ. ತಂಡದ ಕಲಾವಿದರು ಜೊತೆ ಸದಾ ಜಾನಪದ ಸೇವೆ ಮಾಡುತ್ತೇನೆ ಗ್ರಾಮಘಟಕ ಮಾಡುವ ಮುಖೇನ ಜನಮಾನಸದಲ್ಲಿ ಉಳಿಯುವಂತೆ ಮಾಡುವುದಾಗಿ ಹೇಳಿದರುಅಜ್ಜಂಪುರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಕುಮಾರಿ ಮಾತನಾಡಿದರು. ದಾಕ್ಷಾಯಿಣಿ ಬಾಯಿ ಪದವಿ ಸ್ವೀಕರಿಸಿದರು. ಜಾನಪದ ಕಲಾವಿದೆ ಸುಶೀಲಾಬಾಯಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಕಲಾ ಮಾಲತೇಶ್, ಪ್ರಧಾನ ಕಾರ್ಯದರ್ಶಿ ಸವಿತಾ ಗ್ರಾಪಂ ಸದಸ್ಯರಾದ ರಂಗಸ್ವಾಮಿ, ರೇಣುಕಾ, ರತ್ನಮ್ಮ ಪ್ರೇಮ ಸೌಮ್ಯ ಸವಿತಾಬಾಯಿ, ರೂಪ ಮಾಲತೇಶ್, ಕೃಷಿ ಸಖಿ ಮುನಿರತ್ನ ಮತ್ತಿತರು ಭಾಗವಹಿಸಿದ್ದರು.

24ಕೆಟಿಆರ್.ಕೆ.05ಃ

ತರೀಕೆರೆ ಸಮೀಪದ ಎಂ.ಸಿ.ಹಳ್ಳಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ

ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಹೋಬಳಿ ಮಹಿಳಾ ಘಟಕ, ಪದವಿ ಪ್ರಧಾನ ಸಮಾರಂಭದ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ರಾಮೇಗೌಡ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಕಲಾ ಮಾಲತೇಶ್ ಮತ್ತಿತರರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?