ಕನ್ನಡಪ್ರಭ ವಾರ್ತೆ ಇಂಡಿ:
ಈ ಸಂದರ್ಭದಲ್ಲಿ ಮಾತನಾಡಿದ ಎಸಿ ಅಬೀದ ಗದ್ಯಾಳ, ಮೈಸೂರು ರಾಜ್ಯ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು 50 ವರ್ಷ ಪೊರೈಸಿದ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ-50 ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ಸಂಭ್ರಮ ಆಚರಿಸುವ ಕನ್ನಡ ಜ್ಯೋತಿ ರಥ ಯಾತ್ರೆಗೆ ಗಡಿ ತಾಲೂಕು ಇಂಡಿಯಲ್ಲಿ ಎಲ್ಲ ಕನ್ನಡ ಮನಸುಗಳು ಕೂಡಿ ಅದ್ದೂರಿಯಾಗಿ ಬರಮಾಡಿಕೊಂಡಿದ್ದು ಸಂತಸ ತಂದಿದೆ ಎಂದರು.
ಪ್ರತಿಯೊಬ್ಬರೂ ಕನ್ನಡ ಹೆಚ್ಚಾಗಿ ಬಳಸಿ, ಅನ್ಯ ಭಾಷಿಗರಿಗೂ ಕನ್ನಡವನ್ನು ಕಲಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪಿರ ವಾಲಿಕಾರ, ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಿಇಒ ಟಿ.ಎಸ್.ಆಲಗೂರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಆರ್.ವಿ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ, ಕರವೇ ಅಧ್ಯಕ್ಷ ಬಾಳು ಮುಳಜಿ, ಶಿವು ಬಡಿಗೇರ, ಸಿದ್ದಾರಾಮ ಹಳ್ಳೂರ, ಜಾವೀದ ಮೋಮಿನ, ಅಭಿಷೇಕ ಚಕ್ರವರ್ತಿ, ಎಸ್.ಐ.ಸುಗುರ, ಬಸವರಾಜ ಗೊರನಾಳ ಮೊದಲಾದವರು ಇದ್ದರು.