ಗಣ್ಯರಿಂದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Aug 22, 2024, 12:51 AM IST
21ಕೆಎಂಎನ್ ಡಿ20 | Kannada Prabha

ಸಾರಾಂಶ

ಕನ್ನಡಾಂಬೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನೂರಾರು ಕನ್ನಡಾಭಿಮಾನಿಗಳು ನಮನ ಸಲ್ಲಿಸಿದರು. ಬಳಿಕ ರಥಯಾತ್ರೆ ಶಾಲಾ ಮಕ್ಕಳ ಬ್ಯಾಂಡ್‌ಸೆಟ್ ಸದ್ದಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಕೆನ್ನಾಳು ಮತ್ತು ರೈಲ್ವೆ ನಿಲ್ದಾಣದ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಮೂಲಕ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್ ಎಸ್.ಸಂತೋಷ್ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ಬರಮಾಡಿಕೊಂಡರು.

ಕನ್ನಡಾಂಬೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನೂರಾರು ಕನ್ನಡಾಭಿಮಾನಿಗಳು ನಮನ ಸಲ್ಲಿಸಿದರು. ಬಳಿಕ ರಥಯಾತ್ರೆ ಶಾಲಾ ಮಕ್ಕಳ ಬ್ಯಾಂಡ್‌ಸೆಟ್ ಸದ್ದಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಕೆನ್ನಾಳು ಮತ್ತು ರೈಲ್ವೆ ನಿಲ್ದಾಣದ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿತು.

ಈ ವೇಳೆ ತಹಸೀಲ್ದಾರ್ ಎಸ್,ಸಂತೋಷ್, ಶಿರಸ್ತೇದಾರ್ ಮೋಹನ್, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಅಧಿಕಾರಿಗಳಾದ ನಾಗೇಶ್, ಮಹೇಶ್, ಮಣಿಪ್ರಸಾದ್, ವನಿತಾ, ಮಂಜುಳಾ, ಯಶಸ್ವಿನಿ, ಲಕ್ಷ್ಮೀನಾರಾಯಣ, ನರಸಿಂಹ, ಕೃಷ್ಣ, ಪುರಸಭೆ ಸದಸ್ಯರಾದ ಶಿವಕುಮಾರ್, ಯಶವಂತ ಇತರರು ಇದ್ದರು. ಮೃತ ವೆಂಕಟೇಶ್ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯಜೀತದಾಳು ವೆಂಕಟೇಶ್ ಸಾವು ಪ್ರಕರಣದಲ್ಲಿ ಆತನ ಕುಟುಂಬಕ್ಕೆ ನ್ಯಾಯ ದೊರಕಿಸಲು ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.

ಮದ್ದೂರು ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಮುರಳಿ ಎಂಬಾತ ಹಂದಿ ಸಾಕಾಣಿಕಾ ಕೇಂದ್ರದಲ್ಲಿ ದಲಿತ ಕುಟುಂಬವನ್ನು ಜೀತಕ್ಕಿರಿಸಿಕೊಂಡು ಬಲವಂತವಾಗಿ ದುಡಿಸಿಕೊಂಡಿದ್ದಲ್ಲದೇ, ಸಂತ್ರಸ್ತರನ್ನು ನಿರ್ಬಂಧಿಸಿ ಅವರಿಗೆ ಊಟೋಪಚಾರವಿಲ್ಲದಂತೆ ಅನಾರೋಗ್ಯಕ್ಕೆ ದೂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಈ ಪ್ರಕರಣ ಬಯಲಾದ ಬಳಿಕ ಜೀತದಾಳು ವೆಂಕಟೇಶ್‌ನನ್ನು ಮಂಡ್ಯ ಆಸ್ಪತ್ರೆಯಲ್ಲಿ ಇರಿಸಿದ್ದ ವೇಳೆ ಆತನ ಸಾವು ಸಂಭವಿಸಿದೆ. ಪ್ರಕರಣ ಬೆಳಕಿಗೆ ಬರಲು ಕಾರಣರಾದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಗಂಭೀರ ಕ್ರಮ ವಹಿಸಿ ಸಂತ್ರಸ್ತರನ್ನು ಕೂಡಲೇ ಬಿಡುಗಡೆ ಮಾಡಿರುವ ಜಿಲ್ಲಾಡಳಿತ ಮತ್ತು ಅಧಿಕಾರಿಗಳನ್ನು ನಾವು ಅಭಿನಂದಿಸುತ್ತೇವೆ. ಪ್ರಕರಣದ ಆರೋಪಿ ಕೋಣಸಾಲೆ ಮುರಳಿ ಜೀತ ಪದ್ಧತಿಯನ್ನು ಜೀವಂತವಾಗಿರಿಸಿ ಸಂತ್ರಸ್ಥ ಮುರಳಿಯ ಕುಟುಂಬಕ್ಕೆ ನರಕಯಾತನೆ ನೀಡಿ ದೌರ್ಜನ್ಯವೆಸಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.

ಆರೋಪಿ ಮುರಳಿಯ ಆಸ್ತಿಯನ್ನು ಜಪ್ತಿ ಮಾಡಿ ವೆಂಕಟೇಶ್ ಕುಟುಂಬಕ್ಕೆ ನೀಡುವಂತೆ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದರು. ಕದಸಂಸ ಜಿಲ್ಲಾಧ್ಯಕ್ಷ ಬಿ. ಆನಂದ್, ಅನಿಲ್ ಕೆರಗೋಡು, ಸುರೇಶ್‌ಕುಮಾರ್, ಮಹದೇವು, ಎನ್.ಸಿ. ರಾಜು, ಸುರೇಶ್ ಗೋಷ್ಠಿಯಲ್ಲಿದ್ದರು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ