ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Nov 08, 2025, 02:00 AM IST
ಗುರುಪುರ ಗ್ರಾಮದಲ್ಲಿ ಅದ್ದೂರಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಗುರುಪುರ ಯುವ ಗೆಳೆಯರ ಬಳಗದಿಂದ ನಡೆದ ಅದ್ಧೂರಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ ಹೆಮ್ಮೆಯ ಕವಿಗಳಿದ್ದಾರೆ. ಗುರುಪುರ ಗ್ರಾಮದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿದ ಯುವಕರನ್ನು ಅಭಿನಂದಿಸಿದರು.

-ಗುರುಪುರ ಗ್ರಾಮದಲ್ಲಿ ಅದ್ಧೂರಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಗುರುಪುರ ಯುವ ಗೆಳೆಯರ ಬಳಗದಿಂದ ನಡೆದ ಅದ್ಧೂರಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ ಹೆಮ್ಮೆಯ ಕವಿಗಳಿದ್ದಾರೆ. ಗುರುಪುರ ಗ್ರಾಮದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿದ ಯುವಕರನ್ನು ಅಭಿನಂದಿಸಿದರು.ಕೆಡಿಪಿ ಸದಸ್ಯ ಎಚ್.ಎನ್.ಮಂಜುನಾಥ ಲಾಡ್ ಮಾತನಾಡಿ ಕನ್ನಡ ಭಾಷೆ ಉಳಿವಿಗೆ ಕರ್ನಾಟಕದ ಸಾಹಿತಿ, ಕವಿಗಳು ಕಾದಂಬರಿಕಾರರು ಹಾಗೂ ಕನ್ನಡ ಸಂದೇಶ ಸಾರುವ ಅಂತಹ ಉತ್ತಮ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವಿ ಕಿಶೋರ್ ಮಾತನಾಡಿ ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರು ಕನ್ನಡದಲ್ಲಿಯೇ ಮಾತನಾಡಿ ಕನ್ನಡ ಉಳಿಸಿ ಬೆಳೆಸಿ ನಾಡು ಕಟ್ಟಬೇಕೆಂದು ತಿಳಿಸಿದರು. ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ ಕನ್ನಡ ಭಾಷೆ ಬೆಳೆಸಿ ಉಳಿಸ ಬೇಕೆಂದು ಪ್ರತಿ ಹಳ್ಳಿಗಳಲ್ಲೂ ಕನ್ನಡ ಕಟ್ಟುವಂತಹ ಯುವಕರು ಮುಂದೆ ಬರಬೇಕೆಂದು ತಿಳಿಸಿದರು.ಕಸಾಪ ಲಕ್ಕವಳ್ಳಿ ಹೋಬಳಿ ಅಧ್ಯಕ್ಷ ಚಕ್ರವರ್ತಿ ಮಾತನಾಡಿ ಕನ್ನಡ ಕಟ್ಟುವಲ್ಲಿ ಮಹತ್ತರ ಪಾತ್ರವಹಿಸಿದ ಹೋರಾಟಗಾರರು ಹಾಗೂ ಸಾಹಿತಿಗಳನ್ನು ನೆನೆಸಿದರು.

ರಂಗೇನಹಳ್ಳಿ ಗ್ರಾಮದಿಂದ ಸುಮಾರು 3 ಕಿಲೋಮೀಟರ್‌ ದೂರದ ಗುರುಪುರದ ತನಕ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರು ಹಾಗೂ ಅತಿಥಿಗಳನ್ನು ಶಾಮ್ ಮತ್ತು ಆಲ್ವಿನ್, ಜೋಸೆಫ್, ಪ್ರವೀಣ್ , ಜಿಮ್ಸನ್, ಮೋಸಸ್, ಯೇಸುದಾಸ ಸನ್ಮಾನಿಸಿ ಗುರುಪುರದ ಉಳಿದಿರುವ ಸಿಸಿ ರಸ್ತೆ ಪೂರ್ಣಗೊಳಿಸಿ ಕೊಡಬೇಕಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಗೆ ಮನವಿ ಸಲ್ಲಿಸಿದರು,

ಮಹೇಶ್, ಶಾಂತಿಪುರ ರವಿ, ಗ್ರಾಮ ಪಂ ಸದಸ್ಯ ಶಿವಕುಮಾರ್, ಸತೀಶ್ ,ಪಾರ್ವತಮ್ಮ, ಕುರಿಯಾಚನ್, ಪೀಟರ್, ಅನಂದ್, ಶರಣ್ ರಾಜ್, .ಜಿಮ್ಸನ್, ಸರೋನ್ ರಾಜ್ ಭಾಗವಹಿಸಿದ್ದರು.

6ಕೆಟಿಆರ್.ಕೆ.1ಃ

ತರೀಕೆರೆಯ ಗುರುಪುರ ಗ್ರಾಮದಲ್ಲಿ ಅದ್ಧೂರಿ 70ನೇ ಕನ್ನಡ ರಾಜ್ಯೋತ್ಸವವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಕೆಡಿಪಿ ಸದಸ್ಯ ಎಚ್.ಎನ್.ಮಂಜುನಾಥ ಲಾಡ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವಿ ಕಿಶೋರ್‌ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್ ಇದ್ದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!