ಕುಂದಗೋಳ:
ಪಟ್ಟಣದ ಜೆಎಸ್‌ಎಸ್ ವಿದ್ಯಾಪೀಠದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ 71ನೇ ಕರ್ನಾಟಕ ರಾಜ್ಯೋತ್ಸವದ ತಿಂಗಳ ನಾಡಹಬ್ಬದ ಅಂಗವಾಗಿ ಆಯೋಜಿಸಿದ್ದ "ಹಚ್ಚೇವು ಕನ್ನಡದ ದೀಪ " ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಕನ್ನಡಿಗರು ಪರಸ್ಪರ ಭೇದ-ಭಾವ ಮರೆತು ನಾಡಿನ ಅಭ್ಯುದಯಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು. ಜಡತ್ವ ತೊರೆದು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ನಾಡಿನ ಗಡಿಗಳಾಚೆಗೂ ಪಸರಿಸುವ ಕೆಲಸವಾಗಬೇಕು. ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಹರ್ಲಾಪುರದ ಶಂಭಯ್ಯ ಹಿರೇಮಠ ಮಾತನಾಡಿ, ಕನ್ನಡ ಸೃಜನಶೀಲ ಹಾಗೂ ಸುಮಧುರ ಭಾಷೆಯಾಗಿದೆ. ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಸಂದರ್ಭದಲ್ಲಿ 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದ್ದು, ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಯಲ್ಲಪ್ಪ ಮೇಗುಂಡಿ ಉಪಸ್ಥಿತರಿದ್ದರು. ಹರ್ಲಾಪುರದ ಸಿವೈಸಿಡಿ ಕಲಾತಂಡದ ಈಶ್ವರ ಅರಳಿ ಹಾಗೂ ಸಂಗಡಿಗರು ಕನ್ನಡ ನಾಡು-ನುಡಿ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಎಸ್.ವಿ. ಕುನ್ನೂರ ಸ್ವಾಗತಿಸಿದರು. ಎಂ.ಸಿ. ಶಿಗ್ಲಿ ನಿರೂಪಿಸಿದರು. ಎ.ವಿ. ರಾಟಿ ವಂದಿಸಿದರು.