ಉಮ್ರಾ ಯಾತ್ರೆಗೆ ಜಮೀರ್ ಟ್ರಸ್ಟ್‌ನಿಂದ ಆರ್ಥಿಕ ನೆರವು

KannadaprabhaNewsNetwork |  
Published : Nov 18, 2026, 02:30 AM IST
ಹಗರಿಬೊಮ್ಮನಹಳ್ಳಿ ಸಮೀಪದ ಬಂಡೀಹಳ್ಳಿಯ ತೋಟದ ಮನೆಯಲ್ಲಿ ಭಾನುವಾರ ಜಿಲ್ಲೆಯ ನಾನಾ ತಾಲೂಕುಗಳ ಉಮ್ರಾ ಯಾತ್ರಾ ಆಕಾಂಕ್ಷಿ ಮುಸ್ಲಿಂ ಧರ್ಮಗುರುಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಮಾಜಿ ಶಾಸಕ ಸಿರಾಜ್ ಶೇಖ್ ಮಾತನಾಡಿದರು.  | Kannada Prabha

ಸಾರಾಂಶ

ಹಣಕಾಸಿನ ಮುಗ್ಗಟ್ಟಿನಿಂದಾಗಿ ರಾಜ್ಯದ ಬಹುತೇಕ ಬಡ ಮುಸ್ಲಿಂ ಧರ್ಮ ಗುರುಗಳಿಗೆ ಉಮ್ರಾ ಯಾತ್ರೆ ಕನಸಿನ ಮಾತಾಗಿತ್ತು.

ಹಗರಿಬೊಮ್ಮನಹಳ್ಳಿ: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಟ್ರಸ್ಟ್‌ನ ವೈಯಕ್ತಿಕ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯ ನಾನಾ ಮಸೀದಿಗಳಲ್ಲಿ ನಮಾಜ್ ಬೋಧಿಸುವ ಮೌಲಾನಾಗಳ ಮತ್ತು ಅಜಾನ್ ಕೂಗುವ ಮೌಜಾನಾಗಳ ಹಜ್ ಮತ್ತು ಉಮ್ರಾ ಯಾತ್ರೆಗಳನ್ನು ಸಂಪನ್ನಗೊಳಿಸಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಪ್ರಕಟಿಸಿದರು.

ಪಟ್ಟಣದ ಸಮೀಪದ ಬಂಡಿಹಳ್ಳಿಯ ಅವರ ತೋಟದ ಮನೆಯಲ್ಲಿ ಭಾನುವಾರ ಸಂಜೆ ಮುಸ್ಲಿಂ ಧರ್ಮ ಗುರುಗಳ ಹಜ್ ಹಾಗೂ ಉಮ್ರಾ ಯಾತ್ರೆಯ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಣಕಾಸಿನ ಮುಗ್ಗಟ್ಟಿನಿಂದಾಗಿ ರಾಜ್ಯದ ಬಹುತೇಕ ಬಡ ಮುಸ್ಲಿಂ ಧರ್ಮ ಗುರುಗಳಿಗೆ ಉಮ್ರಾ ಯಾತ್ರೆ ಕನಸಿನ ಮಾತಾಗಿತ್ತು. ಆದರೆ ಸಚಿವರಾದ ಜಮೀರ್ ಅಹಮದ್ ಖಾನ್‌ ಅವರ ಕಾಳಜಿಯಿಂದ ಅವರೆಲ್ಲರ ಉಮ್ರಾ ಯಾತ್ರೆ ಸಂಪನ್ನಗೊಳ್ಳುವ ಹೊಸ್ತಿಲಲ್ಲಿದೆ. ಯಾತ್ರೆ ಕೈಗೊಳ್ಳಲು ಧನಸಹಾಯ ಹಸ್ತ ಚಾಚಿರುವ ಸಚಿವರ ಆರೋಗ್ಯ ಮತ್ತು ಲೋಕ ಕಲ್ಯಾಣಕ್ಕಾಗಿ ಯಾತ್ರಾರ್ಥಿಗಳು ಮಕ್ಕಾದಲ್ಲಿ ಪ್ರಾರ್ಥಿಸಿ ಎಂದು ಕೋರಿದರು. ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಕಂಪ್ಲಿ ತಾಲೂಕುಗಳು ಸೇರಿದಂತೆ ವಿಜಯನಗರ ಜಿಲ್ಲೆಯ ೬ ತಾಲೂಕಿಗಳಿಂದ ಒಟ್ಟು ನೂರಕ್ಕೂ ಹೆಚ್ಚು ಯಾತ್ರಾ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಸ್ಥಳಿಯ ಮಸೀದಿಗಳ ಕಮೀಟಿಗಳ ವಿಶ್ವಾಸ ಮತ್ತು ಸಹಯೋಗದಲ್ಲಿ ಆದ್ಯತೆಯ ಮೂಲಕ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಬಹುತೇಕ ಮುಸ್ಲಿಂ ಧರ್ಮಗುರುಗಳಿಗೆ ಅವರ ಟ್ರಸ್ಟ್‌ ಮೂಲಕ ತಲಾ ₹೧ ಲಕ್ಷಕ್ಕೂ ಹೆಚ್ಚಿನ ವೈಯಕ್ತಿಕ ಧನಸಹಾಯ ಒದಗಿಸಿ, ಉಮ್ರಾ ಯಾತ್ರೆಯ ಕನಸನ್ನು ನನಸು ಮಾಡಲಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹರಪನಹಳ್ಳಿ ಸೇರಿದಂತೆ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕಂಪ್ಲಿ, ಹಡಗಲಿ, ಹೊಸಪೇಟೆ ತಾಲೂಕುಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಧರ್ಮಗುರುಗಳು ಯಾತ್ರೆಯ ಸೌಲಭ್ಯಕ್ಕಾಗಿ ಸಭೆಯಲ್ಲಿ ಅರ್ಜಿ ಸಲ್ಲಿಸಿದರು.

ಪಟ್ಟಣದ ಜಾಮಿಯಾ ಮಸೀದಿಯ ಶೋಯಬ್ ಆಲಂ, ಹರಪನಹಳ್ಳಿಯ ದಾದಾಪೀರ್ ಲಾಟಿ, ಕಂಪ್ಲಿಯ ಜಾಫರ್ ಸಾಹೇಬ್, ಸಂಡೂರಿನ ಹಾಜಿ ಜಮೀರ್ ಸಾಬ್, ಹಡಗಲಿಯ ದಾವಲ್ ಮಲಿಕ್, ಮರಿಯಮ್ಮನಹಳ್ಳಿಯ ಇಮಾಮ್ ಸಾಹೇಬ್, ಹೊಸಪೇಟೆಯ ದಾದಾ ಖಲಂದರ್, ಸದ್ದಾಮ್, ಪಟ್ಟಣದ ನೋಬಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಪೀಜ್ ಶೇಖ್, ಹಾಜೀ ಯೂಸೂಫ್ ಸಾಬ್, ಮುಖಂಡರಾದ ಸುರೇಶ್ ರಾಠೋಡ್, ಹುಡೇದ ಗುರುಬಸವರಾಜ್, ಎಣ್ಣಿ ಬಾಷಾ, ಸಿ. ಗಾಳೆಪ್ಪ ಹಾಗೂ ಮೆಹಬೂಬ್ ಬಾಷಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆನೀರು ಕಾಲುವೆಗೆ ಸಿಎಂ ಶಂಕುಸ್ಥಾಪನೆ
ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ