ಕನ್ನಡ ಭಾಷೆ, ನೆಲ, ಜಲ ಕಾಪಾಡುವ ಕಸಾಪ: ಬೋರ್ಕರ್

KannadaprabhaNewsNetwork |  
Published : May 13, 2025, 01:16 AM IST
ಮುಂಡಗೋಡ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಎಸ್.ಕೆ ಬೋರ್ಕರ್ ಉದ್ಘಾಟಿಸಿದರು | Kannada Prabha

ಸಾರಾಂಶ

ನೆಲ, ಜಲ ಕಾಪಾಡುವುದು ಮತ್ತು ಸಾಹಿತ್ಯವನ್ನು ಬೆಳೆಸುವುದು ಕನ್ನಡ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ

ಮುಂಡಗೋಡ: ಕನ್ನಡ ಭಾಷೆ, ನೆಲ, ಜಲ ಕಾಪಾಡುವುದು ಮತ್ತು ಸಾಹಿತ್ಯವನ್ನು ಬೆಳೆಸುವುದು ಕನ್ನಡ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ ಎಂದು ಸಾಮಾಜಿಕ ಧುರೀಣ ಎಸ್.ಕೆ. ಬೋರ್ಕರ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಇಂದು ಜನಸಾಮಾನ್ಯರ ಪರಿಷತ್ ಆಗಿ ಹೊರಹೊಮ್ಮಿದೆ. ನೂರಾರು ಸಮ್ಮೇಳನಗಳನ್ನು ಮತ್ತು ವಿವಿಧ ಕನ್ನಡ ಭಾಷೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮ ಮಾಡುತ್ತಾ ಕರ್ನಾಟಕ ರಾಜ್ಯದ ಪ್ರತೀಕವಾಗಿದೆ ಹಾಗಾಗಿ ಸಾಹಿತ್ಯ ಪರಿಷತ್ತನ್ನು ಬಹಳ ಗೌರವದಿಂದ ಗೌರವಿಸಿ ಅದರ ಗೌರವವನ್ನು ಹೆಚ್ಚಿಸುವ ಕೆಲಸ ನಾವೆಲ್ಲ ಮಾಡಬೇಕು ಎಂದು ಹೇಳಿದರು.

ಸಾಹಿತಿ ಬಾಲಚಂದ್ರ ಹೆಗಡೆ ಮಾತನಾಡಿ, ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡುತ್ತಾ ಕನ್ನಡ ಹಲವಾರು ವೈವಿಧ್ಯತೆಯಲ್ಲಿ ಏಕದಿನ ಕಂಡಂತೆ ಅತ್ಯಂತ ಹಳೆಯ ಭಾಷೆ ಇದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ ರಿಂದ ೨೦೨೫ ವರೆಗೆ ಯಾವ ರೀತಿ ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಾ ರಾಜ್ಯದ್ಯಂತ ಮತ್ತು ಬೇರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಎನ್ನುವ ಸಂಗತಿಯನ್ನು ತಮ್ಮ ಉಪನ್ಯಾಸಕ ಮೂಲಕ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ವಸಂತ ಕೋಣಸಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡಗೋಡ ತಾಲೂಕಿನಲ್ಲಿ ಇಲ್ಲಿವರೆಗೂ ೭ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ ಹೆಮ್ಮೆ ನಮ್ಮ ಘಟಕಕ್ಕೆ ಇದೆ ಎಂದರು.

ಉದ್ಯಮಿ ಶಿವಾನಂದ ವಾಲಿಶೆಟ್ಟರ್ ಮಾತನಾಡಿದರು. ಮಾಜಿ ಕಸಾಪ ಅಧ್ಯಕ್ಷ ಡಾ. ಪಿ.ಪಿ. ಛಬ್ಬಿ, ರಾಜಶೇಖರ್ ನಾಯಕ್, ಆನಂದ್ ಹೊಸೂರ್, ರಾಮಣ್ಣ ಬೆಳ್ಳನವರ, ಗೌರಮ್ಮ ಕೊಳ್ಳಾನೂರ, ಮಲ್ಲಮ್ಮ ನೀರಲಗಿ, ಎಚ್.ಎನ್. ತಪೇಲಿ, ಸುರೇಶ್ ಓಣಿಕೇರಿ, ಎಸ್.ಎಸ್. ರೇವಣಕರ ಮುಂತಾದವರು ಉಪಸ್ಥಿತರಿದ್ದರು.

ಎನ್.ಎಸ್. ಸುರಕೋಡ ಪ್ರಾರ್ಥಿಸಿದರು. ಎಸ್.ಬಿ. ಹೂಗಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ ನಿರೂಪಿಸಿದರು. ಖಜಾಂಚಿ ನಾಗರಾಜ್ ಅರ್ಕಸಾಲಿ ವಂದಿಸಿದರು.

PREV

Recommended Stories

ರಾಜ್ಯದಲ್ಲಿ ಇಂದು, ನಾಳೆ ವ್ಯಾಪಕ ಮಳೆಯ ನಿರೀಕ್ಷೆ
ಭಾರೀ ಮಳೆಗೆ ಡ್ಯಾಂಗಳು ಭರ್ತಿ - ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ