ಕನ್ನಡಪ್ರಭ ವಾರ್ತೆ ಶಿರಾ
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 6ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಸಾಹಿತ್ಯದ ಮೂಲಕ ಜನರ ಜೀವನ ವಿಕಾಸ ಆಗಬೇಕು ಆಗ ಸಾಹಿತ್ಯ ಮತ್ತು ಕಲೆ ಜೀವಂತವಾಗಿರುತ್ತದೆ. ಸಾಹಿತ್ಯ ಮನರಂಜನೆಗಷ್ಟೆ ಸೀಮಿತವಾಗದೆ, ಸಮಾಜದ ಪ್ರತಿಬಿಂಬವೂ, ಗತಿಬಿಂಬವೂ ಆಗಿರಬೇಕು. ಸಮಾಜದ ತಳಸ್ತರದ ಜನರ ನೋವು-ಅವಮಾನಗಳಿಗೆ ಧ್ವನಿಯಾಗಬೇಕು. ಬರಗೂರು ರಾಮಚಂದ್ರಪ್ಪ ಮತ್ತು ಸಿದ್ದಲಿಂಗಯ್ಯ ಅವರು ಶಿರಾ ಸೀಮೆ ಕನ್ನಡ ಸಾಹಿತ್ಯ ಮತ್ತು ಸಿನಿಮಾಕ್ಕೆ ಕನ್ನಡ ವಿವೇಕ ಪರಂಪರೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಇವರು ಶಿರಾ ತಾಲೂಕಿನ ಹೆಮ್ಮೆ ಎಂದರು.
ಸಿದ್ದಲಿಂಗಯ್ಯ ಅವರು ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯ ಸಿನಿಮಾಗಳ ಮೂಲಕ ಗ್ರಾಮಭಾರತವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಮತ್ತೊಂದು ಹೇಮಾವತಿ ಸಿನಿಮಾ ಪ್ರಸ್ತುತ ದಿನದ ವಿವೇಕಕ್ಕೆ ದೊಡ್ಡ ಮಾದರಿಯಾಗಿತ್ತು ಎಂದರು.ಬರದ ಕಾರಣ ನೀಡಿ ಸರ್ಕಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಿದೆ. ನನ್ನ ಅಭಿಪ್ರಾಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಭ್ರಮ ಕಾಲದ ಚಟುವಟಿಕೆಗಳಾಗಬಾರದು, ವಿಚಾರವಂತಿಕೆಯುಳ್ಳ ಅರ್ಥಪೂರ್ಣ ಸಮ್ಮೇಳನಗಳಾಗಬೇಕು ಎಂದರು.
ಶಾಸಕ ಟಿ.ಬಿ. ಜಯಚಂದರ ಮಾತನಾಡಿ, ಶಿರಾ ತಾಲೂಕು ಆಂಧ್ರದ ಗಡಿಯಲ್ಲಿದ್ದು, ಈ ಭಾಗದಲ್ಲಿ ಕನ್ನಡ ನಾಡು ನುಡಿಗೆ ಬೆಳವಣಿಗೆಗೆ ಅವಿರತ ಶ್ರಮ ಆಡಳಿತದಿಂದ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷರ ಮೆರಗಣಿಗೆ: ಶಿರಾದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಚ.ಹ.ರಘುನಾಥ ಅವರನ್ನು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ತಾಳ ಮದ್ದಳೆಗಳಿಂದ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷೆ ಪೂಜಾ, ತಹಶೀಲ್ದಾರ್ ದತ್ತಾತ್ರೇಯ ಗಾದ, ಸಹಾಯಕ ಕೃಷಿ ನಿರ್ದೇಶಕ ಡಾ.ಹೆಚ್.ನಾಗರಾಜು, ಪೌರಾಯುಕ್ತ ರುದ್ರೇಶ್, ತಾ.ಪಂ. ಇಓ. ಅನಂತರಾಜು, ಪಿ.ಹೆಚ್.ಮಹೇಂದ್ರಪ್ಪ, ವೈ.ನರೇಶ್ ಬಾಬು, ಕಸಾಪ ಗೌರವ ಕಾರ್ಯದರ್ಶಿ ಪರಮೇಶ್ ಗೌಡ, ಕೋಶಾಧ್ಯಕ್ಷ ಹಿಮಂತರಾಜು, ರೇಣುಕಮ್ಮ, ಹೆಂದೊರೆ ಶಿವಣ್ಣ, ಜಯರಾಮಕೃಷ್ಣ, ನರಸಿಂಹರಾಜು, ಸಕ್ರ ನಾಗರಾಜು, ಪ.ನಾ.ಹಳ್ಳಿ ಹರೀಶ್‌ಕುಮಾರ್, ಬ.ಹ.ಓಂಕಾರ್, ರಮೇಶ್.ಎಸ್.ಎಲ್., ಅಶ್ವಿನಿ, ಆರ್.ಸಿ.ರಾಮಚಂದ್ರಪ್ಪ, ರಶ್ಮಿಕುಮಾರ್, ಮಂಜುಳ.ಬಿ.ಕೆ. ಸೇರಿದಂತೆ ಹಲವರು ಹಾಜರಿದ್ದರು.