ಪ್ರತಿಯೊಬ್ಬರು ಮನೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡ ಭಾಷೆಯನ್ನು ಕಲಿಸಬೇಕು, ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಹೊರಬರಬೇಕು. ನಮ್ಮ ಮಾತೃ ಭಾಷೆ ಕನ್ನಡಕ್ಕೆ ತಂದೆ ತಾಯಿಯ ಸ್ಥಾನಮಾನವನ್ನು ನೀಡಬೇಕು. ಪ್ರತಿಯೊಬ್ಬರು ಕನ್ನಡ ಭಾಷೆ ನಾಡು ನುಡಿಯ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಸಿ.ತುಮ್ಮಿನಕಟ್ಟಿ ಹೇಳಿದರು.
ರಟ್ಟಿಹಳ್ಳಿ: ಪ್ರತಿಯೊಬ್ಬರು ಮನೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡ ಭಾಷೆಯನ್ನು ಕಲಿಸಬೇಕು, ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಹೊರಬರಬೇಕು. ನಮ್ಮ ಮಾತೃ ಭಾಷೆ ಕನ್ನಡಕ್ಕೆ ತಂದೆ ತಾಯಿಯ ಸ್ಥಾನಮಾನವನ್ನು ನೀಡಬೇಕು. ಪ್ರತಿಯೊಬ್ಬರು ಕನ್ನಡ ಭಾಷೆ ನಾಡು ನುಡಿಯ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಸಿ.ತುಮ್ಮಿನಕಟ್ಟಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ಥಳೀಯ ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಜರುಗಿದ ಕನ್ನಡ ಹಬ್ಬ ಸಂಭ್ರಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಜ್ಯದ ಗಡಿಭಾಗಗಳಲ್ಲಿ ಅನ್ಯಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯನ್ನು ಹುಡುಕಬೇಕಾಗಿದೆ. ಕನ್ನಡ ನಾಡಿನಲ್ಲಿ ನಮ್ಮ ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರಗಳು, ಶಾಶ್ವತವಾಗಿ ಉಳಿಯಬೇಕು ಎಂಬುದು ಪರಿಷತ್ತಿನ ಉದ್ದೇಶವಾಗಿದೆ. ನಮ್ಮ ಮನೆಯೊಳಗೆ ಮನದೊಳಗೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಮತ್ತು ಕನ್ನಡಹ ಕಹಳೆ ಎಲ್ಲಡೆ ಮೊಳಗಬೇಕು. ಕನ್ನಡ ಶಾಲೆಗಳಿಗೆ ಮಕ್ಕಳನ್ನು ಹೆಚ್ಚು ಹೆಚ್ಚು ದಾಖಲಿಸಬೇಕು, ಈ ಶಾಲೆಗಳು ಉಳಿಯಬೇಕು. ಹಲವಾರು ವರ್ಷಗಳಿಂದ ನಮ್ಮ ಪರಿಷತ್ತಿನ ಸದಸ್ಯರ ವೈಯಕ್ತಿಕ ಹಣದಿಂದ ಪರಿಷತ್ತಿನ ಕಚೇರಿಯ ಬಾಡಿಗೆಯನ್ನು ಕಟ್ಟಲಾಗುತ್ತಿದೆ, ನಮ್ಮ ಪರಿಷತ್ತಿಗೆ ಅವಶ್ಯವಿರುವ ಕಚೇರಿ ಅಥವಾ ಕಟ್ಟಡವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ವಾಣಿಜ್ಯ ಮಳಿಗೆಗಳು ತಮ್ಮ ನಾಮಫಲಕಗಳನ್ನು ಕನ್ನಡ ಭಾಷೆಗಳಲ್ಲಿ ಅಳವಡಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಬೇಡಿಕೆಗೆ ಅನುಗುಣವಾಗಿ ೨ ತಿಂಗಳಲ್ಲಿ ಕಟ್ಟಡದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ಪ.ಪಂ.ಉಪಾಧ್ಯಕ್ಷ ಶಿವಕುಮಾರ ಉಪ್ಪಾರ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ. ಕನ್ನಡ ಭಾಷೆಗೆ ಕವಿಗಳು, ಶರಣರು, ವಚನಕಾರರು, ಸಾಹಿತಿಗಳ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದಿಂದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಾಭಿಮಾನಿಗಳು ಬೈಕ್ ರ್ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಕನ್ನಡ ಹಾಡಿಗೆ ನೃತ್ಯಗಳು ಗಮನ ಸೆಳೆದವು. ಗಣೇಶ ವೇರ್ಣಿಕರ, ಮಂಜುನಾಥ ವಾಲ್ಮೀಕ ಸಂಘಡಿಗರು ಕರೋಕೆ ಗಾಯನ ಕಾರ್ಯಕ್ರಮವನ್ನು ನೇರವೇರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ, ಪ.ಪಂ.ಸದಸ್ಯ ರವಿ ಹದಡೇರ, ಲಿಲಿತಾ ಚೆನ್ನಗೌಡ್ರ, ಶ್ರೀದೇವಿ ಭೈರಪ್ಪನವರ, ಮಂಜುಳಾ ಅಗಡಿ, ಎನ್.ಸಿ. ಕಠಾರೆ, ರಾಘವೇಂದ್ರ ಎ.ಜಿ., ಗುಡ್ಡಚಾರಿ ಕಮ್ಮಾರ, ಸುರೇಶ ಮಲ್ಲಾಡದ, ರಾಜು ಹರವಿಶೆಟ್ಟರ್, ಸಿ.ಎಸ್. ಚಕ್ರಸಾಲಿ, ಕುಸುಮಾವತಿ ಮೇಗಳಮನಿ, ಮಲ್ಲಿಕಾರ್ಜುನ ಹೇರಕರ, ಕೆ.ವಿ. ವರಹದ, ಹೇಮಂತ ನಿಂಬೆಗುಂದಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಬೀರೇಶ ಕರಡಣ್ಣನವರ, ಜೆ.ಸಿ. ಹೊಸರಾಯಪ್ಪನವರ, ಇರ್ಪಾನ್ ಜಡದಿ ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.