ಕನ್ನಡ ನಾಡು-ನುಡಿಗೆ ಋಣಿಯಾಗಿರಿ

KannadaprabhaNewsNetwork |  
Published : Apr 17, 2026, 02:00 AM IST
ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆಯಲ್ಲಿ ವಿನ್ನರ್‌ ಆಗಿ ಹೊರಹೊಮ್ಮಿದ ಕೆಎಲ್‌ಇ ಬಿಬಿಎ ಕಾಲೇಜಿನ ಅಭಿಷೇಕ್ ಗೊಂಬಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸ್ಪರ್ಧಾತ್ಮಕ ಯುಗದಲ್ಲಿ ಸಮೂಹ ನೃತ್ಯ, ವೈಯಕ್ತಿಕ ಗೀತೆ, ಜಾಣರ ಜಗಲಿ ಡಿಬೆಟ್, ರಂಗೋಲಿ, ಬುಕ್ ಟಾಕ್, ಮೆಹಂದಿ, ಪೋಟೋಗ್ರಾಫಿ, ವೀಡಿಯೋ ಗ್ರಫಿ ಸೇರಿದಂತೆ 12 ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿರುವುದು ನಾಡಿನ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಹುಬ್ಬಳ್ಳಿ:

ಕನ್ನಡ ನಾಡು- ನುಡಿಗೆ ಋಣಿಯಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಬಿ. ಮಟೋಳ್ಳಿ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸಮೂಹ ನೃತ್ಯ, ವೈಯಕ್ತಿಕ ಗೀತೆ, ಜಾಣರ ಜಗಲಿ ಡಿಬೆಟ್, ರಂಗೋಲಿ, ಬುಕ್ ಟಾಕ್, ಮೆಹಂದಿ, ಪೋಟೋಗ್ರಾಫಿ, ವೀಡಿಯೋ ಗ್ರಫಿ ಸೇರಿದಂತೆ 12 ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿರುವುದು ನಾಡಿನ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಮುನವಳ್ಳಿ, ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಯ ಮಹತ್ವ ತಿಳಿಸುವ ಜತೆಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗುವಂತೆ ಕರೆ ನೀಡಿದರು.

ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನೇತ್ರಾವತಿ ಗಬ್ಬೂರ ಮಾತನಾಡಿದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ 30 ಮಹಾವಿದ್ಯಾಲಯಗಳ 330 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾಚಾರ್ಯ ದತ್ತು ವಾಗ್ಮೋಡೆ, ಐಕ್ಯೂಎಸಿ ಸಂಯೋಜಕ ಡಾ. ಗುಣಿತ್ ಎನ್. ಎಸ್, ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿ ಪ್ರತಿನಿಧಿ ರಚನಾ ಸೇರಿದಂತೆ ಹಲವರಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಹುಬ್ಬಳ್ಳಿ ಪರಿಚಯಿಸಿದರು. ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಪೂಜಾ ನಲವಡಿ ನಿರೂಪಿಸಿದರು. ಪಿ.ಜಿ ವಿಭಾಗದ ಸಂಯೋಜಕಿ ಪ್ರೊ. ಸುನಿತಾ ಗೋನಾಳ ವಂದಿಸಿದರು. ಬಾಕ್ಸ್‌...

ಸ್ಪರ್ಧೆ ವಿಜೇತರು...

ಚರ್ಚಾ ಸ್ಪರ್ಧೆಯಲ್ಲಿ ಕೆಎಲ್‌ಇ ಬಿಬಿಎ ಕಾಲೇಜಿನ ಅಭಿಷೇಕ್ ಗೊಂಬಿ ವಿನ್ನರ್, ಚೇತನ ಬಿಸಿನೆಸ್‌ ಸ್ಕೂಲ್‌ನ ಕಾವೇರಿ ಎನ್. ಕುಲಕರ್ಣಿ ರನ್ನರ್‌ ಅಪ್‌, ಪೊಯಟ್ರಿ ಸ್ಲ್ಯಾಮ್‌ನಲ್ಲಿ ಬೆಳಗಾವಿ ಲಿಂಗರಾಜ ಕಾಲೇಜಿನ ಸಮತಾ ಕಡೇಚಿ ವಿನ್ನರ್‌, ಹುಬ್ಬಳ್ಳಿಯ ಬ್ರೈಟ್‌ ಬಿಸಿನೆಸ್‌ ಸ್ಕೂಲ್‌ನ ಅನಿಷ್ಕಾ ಬಿರಾದಾರ್ ರನ್ನರ್‌ ಅಪ್‌, ಗುಂಪು ನೃತ್ಯದಲ್ಲಿ ಹುಬ್ಬಳ್ಳಿ ಕೆಎಲ್‌ಇ ವಾಣಿಜ್ಯ ಕಾಲೇಜಿನ ಕನಿಷ್ಕಾ ತಂಡ ವಿನ್ನರ್, ಜೈನ್‌ ಪದವಿ ಕಾಲೇಜಿನ ಸ್ನೇಹಾ ತಂಡ ರನ್ನರ್‌ ಅಪ್‌, ಸ್ಪಾಟ್ ಫೋಟೋಗ್ರಫಿಯಲ್ಲಿ ಕೆಎಲ್‌ಇ ಬಿಸಿಎ ಕಾಲೇಜಿನ ದೀಪಕ್ ಗೋಸಾವಿ ವಿನ್ನರ್‌, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರೀಶ್ ಸೊಪ್ಪಿನ್ ರನ್ನರ್‌ ಅಪ್‌ ಪ್ರಶಸ್ತಿ ಪಡೆದರು. ಮೆಹಿಂದಿ ಸ್ಪರ್ಧೆಯಲ್ಲಿ ಕೆಎಲ್‌ಇ ಬಿಸಿಎ ಕಾಲೇಜಿನ ಮಹಿಮಾ ವಿನ್ನರ್, ಹುಬ್ಬಳ್ಳಿ ಸನಾ ಶಾಹೀನ್‌ ಕಾಲೇಜಿನ ಸಿಮ್ರನ್ ರನ್ನರ್‌ಅಪ್‌, ಏಕವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ ಸಿಎಸ್‌ಐ ಕಾಲೇಜಿನ ರಕ್ಷಾ ಜೋಶಿ ವಿನ್ನರ್‌, ಕಿಟೆಲ್‌ ಕಲಾ ಕಾಲೇಜಿನ ರಾಹುಲ್ ರನ್ನರ್‌ ಅಪ್‌, ಫ್ಲ್ಯಾಶ್ ಥಿಯೇಟರ್ ಸ್ಪರ್ಧೆಯಲ್ಲಿ ಗದಗ ಎ.ಎಸ್‌.ಎಸ್‌. ಕಾಲೇಜಿನ ಭರತಸ್ವಾಮಿ ಮತ್ತು ತಂಡ ವಿನ್ನರ್, ಕೆಎಲ್‌ಇ ಪಿ.ಸಿ. ಬಾಜಿನ್‌ ಕಾಲೇಜಿನ ಅನುಶೀ ಮತ್ತು ತಂಡ ರನ್ನರ್‌ಅಪ್‌, ಮೆಮೊರಿಕ್ವೆಸ್ಟ್ ಗೇಮ್‌ನಲ್ಲಿ ಧಾರವಾಡ ಜೆಎಸ್‌ಎಸ್‌-ಎಸ್‌ಎಂಟಿಯ ರಶ್ಮೀ ಮತ್ತು ತಂಡ ವಿನ್ನರ್‌, ಬೆಳಗಾವಿ ಆರ್‌.ಎಲ್‌.ಎಸ್‌ ಕಾಲೇಜಿನ ಕುಷಿ ಮತ್ತು ತಂಡ ರನ್ನರ್‌ಅಪ್‌ ಆಗಿ ಹೊರಹೊಮ್ಮಿದರು.

ಪುಸ್ತಕ ಸಂವಾದ ಸ್ಪರ್ಧೆಯಲ್ಲಿ ಕೆಎಲ್‌ಇ ಬಿವಿಬಿ ಕಾಲೇಜಿನ ಅಖಲೇಶ ಜಾಲಿ ವಿನ್ನರ್, ಕೆಎಲ್‌ಇ ಪಿ.ಸಿ. ಜಾಬಿನ್‌ ಕಾಲೇಜಿನ ಸಿಂಚನಾ ಕುಲಕರ್ಣಿ ರನ್ನರ್‌ಅಪ್‌, ವೀಡಿಯೋಗ್ರಫಿಯಲ್ಲಿ ಕೆಎಲ್‌ಇ ಬಿಬಿಎ ಕಾಲೇಜಿನ ವಿಕ್ರಮ್ ಮೊಗರ್ ವಿನ್ನರ್, ಬಿಬಿಎ ಕಾಲೇಜಿನ ನಿಯೋಲ್ ಜೋಷ ರನ್ನರ್, ಪೆನ್ಸಿನ್ ಸ್ಕೆಚ್‌ನಲ್ಲಿ ಬಿಬಿಎ ಕಾಲೇಜಿನ ನಂದಿತಾ ಮಿಸ್ಕಿನ್ ವಿನ್ನರ್‌, ಜಿ.ಕೆ. ಕಾನೂನು ಕಾಲೇಜಿನ ಸರಸ್ವತಿ ರನ್ನರ್‌ ಅಪ್‌, ರಂಗೋಲಿ ಸ್ಪರ್ಧೆಯಲ್ಲಿ ದಾಂಡೇಲಿಯ ಬಿಎನ್‌ಡಿಸಿ ಕಾಲೇಜಿನ ಮಮತಾ ವಿನ್ನರ್‌, ಧಾರವಾಡ ಕೆಎಲ್‌ಇ ಬಿಸಿಎ ಕಾಲೇಜಿನ ಸವಿತಾ ಕೊಟಬಾಗಿ ರನ್ನರ್‌ಅಪ್‌ ಪ್ರಶಸ್ತಿ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿನ ಸಮಸ್ಯೆಗೆ ಗುತ್ತಿಗೆದಾರರೇ ಕಾರಣ-ಸಚಿವ ಶಿವಾನಂದ ಪಾಟೀಲ
ವಿಬಿ-ಜಿ ರಾಮ್‌ಜಿ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ