ಸ್ವಾಮೀಜಿಗಳ ಕ್ಷಮೆಯಾಚಿಸಲು ಅಶೋಕ್‌ ಖೇಣಿಗೆ ಕನ್ನಡ ಸಂಘಟನೆಗಳ ಆಗ್ರಹ

KannadaprabhaNewsNetwork |  
Published : Oct 03, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಅವರು ಕನ್ನಡಪರ ಸಂಘಟನೆಗಳ ನಿರ್ಣಯ ಬೆಂಬಲಿಸಿ, ಮಹಾ ತಪಸ್ವಿ ಡಾ. ಶಿವಕುಮಾರ ಸ್ವಾಮೀಜಿಗೆ ಚಿನ್ನದ ಮೋಹ ಇರಲಿಲ್ಲ. ಅವರಿಗೆ ಚಿನ್ನದಕರಡಿಗೆ ಕೊಟ್ಟೆಎಂದು ಸುಳ್ಳು ಹೇಳಿ ಸ್ವಾಮೀಜಿಗಳಿಗೆ ಹಾಗೂ ಮಠದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಿದ್ಧಗಂಗಾ ಮಠ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ನೈಸ್ ಸಂಸ್ಥೆ ಅಶೋಕ್‌ ಖೇಣಿ ವಿರುದ್ಧ ನಗರದ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಅವರ ಹೇಳಿಕೆ ಖಂಡಿಸಿದ್ದಾರೆ.

ಎರಡು ದಿನದಲ್ಲಿ ಖೇಣಿ ಸಿದ್ಧಗಂಗಾ ಮಠಕ್ಕೆ ಬಂದು ಸ್ವಾಮೀಜಿಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಖೇಣಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಕನ್ನಡ ಭವನದಲ್ಲಿ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಸಭೆ ಸೇರಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗೆ ಅಪಮಾನ ಮಾಡುವ ರೀತಿಯಲ್ಲಿ ಅಶೋಕ್‌ ಖೇಣಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಅವರ ವಿರುದ್ಧ ಹೋರಾಟ ಮಾಡುವ ನಿರ್ಣಯ ಕೈಗೊಂಡರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬದುಕು ಕಟ್ಟಿಕೊಟ್ಟ ಡಾ.ಶಿವಕುಮಾರ ಸ್ವಾಮೀಜಿಗಳ ವಿರುದ್ಧ ಖೇಣಿ ನೀಡಿರುವ ಹೇಳಿಕೆ ಲಕ್ಷಾಂತರ ಭಕ್ತರಿಗೆ ನೋವು ಉಂಟುಮಾಡಿದೆ. ಸರಳ ಬದುಕಿನ ಸೇವಾ ತಪಸ್ಸು ಮಾಡಿಕೊಂಡು ಬಂದ ಡಾ.ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಖೇಣಿ ಹಗುರವಾಗಿ ಮಾತನಾಡಿರುವುದನ್ನು ಸಹಿಸಲಾಗುವುದಿಲ್ಲ. ಪೊಲೀಸರು ಖೇಣಿ ವಿರುದ್ಧ ಕೇಸು ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು. ನೈಸ್‌ ರಸ್ತೆಯ ಟೋಲ್‌ ಗುತ್ತಿಗೆ ಅವಧಿ ಮುಗಿದಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಟೋಲ್ ಫ್ರೀ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಅವರು ಕನ್ನಡಪರ ಸಂಘಟನೆಗಳ ನಿರ್ಣಯ ಬೆಂಬಲಿಸಿ, ಮಹಾ ತಪಸ್ವಿ ಡಾ. ಶಿವಕುಮಾರ ಸ್ವಾಮೀಜಿಗೆ ಚಿನ್ನದ ಮೋಹ ಇರಲಿಲ್ಲ. ಅವರಿಗೆ ಚಿನ್ನದಕರಡಿಗೆ ಕೊಟ್ಟೆಎಂದು ಸುಳ್ಳು ಹೇಳಿ ಸ್ವಾಮೀಜಿಗಳಿಗೆ ಹಾಗೂ ಮಠದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದು ಹೇಳಿದರು. ರೈತ ಸಂಘ ರಾಜ್ಯ ಕಾರ್ಯದರ್ಶಿ ಬಸವರಾಜು, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆ ಅಧ್ಯಕ್ಷ ಮೀಸೆ ಸತೀಶ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ರಾಜ್ಯಗೌರವಾಧ್ಯಕ್ಷ ಕನ್ನಡ ಪ್ರಕಾಶ್, ಅಧ್ಯಕ್ಷ ಕಗ್ಗೆರೆ ಮಂಜುನಾಥ್, ಜಿಲ್ಲಾಧ್ಯಕ್ಷ ಬಸವರಾಜು, ರೈಲ್ವೆ ಸಲಹಾ ಮಂಡಳಿ ಸದಸ್ಯ ಲಕ್ಷ್ಮೀನಾರಾಯಣ, ದಾರಿದೀಪ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕನ್ನಡ ಸೇನೆ ನಗರ ಅಧ್ಯಕ್ಷ ಜೆ. ವಿಠಲ್, ದಿಬ್ಬೂರು ಗಿರೀಶ್, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಉಮೇಶ್‌ಕುಮಾರ್, ಸಮಾಜ ಸೇವಕ ನಟರಾಜಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎನ್. ಅರುಣ್‌ಕುಮಾರ್, ಮುಖಂಡರಾದ ರಾಜಶೇಖರ್, ಡಾ. ಸುಜೀತ್, ಮಹದೇವ್, ರಾಜಣ್ಣ, ಮಂಜುನಾಥ್ವ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧೀಜಿ ಬಗ್ಗೆ ಯುವಜನ ತಿಳಿದುಕೊಳ್ಳಬೇಕಿದೆ: ಕೆ. ಷಡಕ್ಷರಿ
ಸುಸ್ಥಿರ ಅಭಿವೃದ್ಧಿಗೆ ಗಾಂಧಿ ತತ್ವಾದರ್ಶಗಳು ಪೂರಕ