ಮನೆಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸಲು ಗಿಫ್ಟ್ಸ್, ಲೈಫ್‌ಸ್ಟೈಲ್‌ ಎಕ್ಸ್‌ಫೋ ಆರಂಭ

KannadaprabhaNewsNetwork |  
Published : Sep 21, 2024, 01:48 AM ISTUpdated : Sep 21, 2024, 12:11 PM IST
‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಫೋ’ ಅನ್ನು ರಾನಿ ಸಿನಿಮಾ ತಂಡದ ಸದಸ್ಯರು ಮತ್ತು ಉದ್ಯಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಮನೆಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸಲು ಅವಕಾಶ ಕಲ್ಪಿಸಲು ‘ಕಲಿಯುಗ್ ಎಂಟರ್‌ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಅತಿದೊಡ್ಡ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಫೋ’ ಶುಕ್ರವಾರ ಆರಂಭ 

 ಬೆಂಗಳೂರು :  ಮನೆಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸಲು ಅವಕಾಶ ಕಲ್ಪಿಸಲು ‘ಕಲಿಯುಗ್ ಎಂಟರ್‌ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಅತಿದೊಡ್ಡ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಫೋ’ ಶುಕ್ರವಾರ ಆರಂಭವಾಗಿದೆ.

ವಿವಿಧ ಕಂಪನಿಗಳ ಫರ್ನಿಚರ್‌ಗಳು, ಬಗೆ ಬಗೆಯ ವಸ್ತ್ರಗಳು, ಕಾರುಗಳು, ಆಭರಣ, ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ಪರ್ಫ್ಯೂಮ್‌, ಕಾರ್ಪೇಟ್‌ಗಳು, ವಿಗ್ರಹಗಳು, ಛಾಯಾಚಿತ್ರಗಳು ಸೇರಿದಂತೆ ಅನೇಕ ಮಾದರಿಯ ವಸ್ತುಗಳ ಮಾರಾಟ ಮಳಿಗೆಗಳು ಎಕ್ಸ್‌ಪೋದಲ್ಲಿವೆ.

ರಿಯಲ್ ಎಸ್ಟೇಟ್ ಕಂಪನಿಗಳು ಕೂಡ ಭಾಗವಹಿಸಿದ್ದು ಫ್ಲ್ಯಾಟ್ ಮತ್ತು ಸೈಟ್‌ಗಳ ಖರೀದಿಸುವ ಅವಕಾಶವೂ ಇದೆ. ಒಮ್ಮೆ ಒಳ ಪ್ರವೇಶಿಸಿದರೆ ಸಂಪೂರ್ಣ ಶಾಪಿಂಗ್ ಅನುಭವ ಸಿಗುತ್ತದೆ. ಶಾಪಿಂಗ್ ಸ್ಥಳದಲ್ಲೇ ಫುಡ್‌ ಕೋರ್ಟ್ ಕೂಡ ತೆರೆಯಲಾಗಿದ್ದು, ಅನೇಕ ಬಗೆಯ ಆಹಾರ ಪದಾರ್ಥಗಳನ್ನು ಸವಿಯಬಹುದಾಗಿದೆ.

ಎಕ್ಸ್‌ಪೋ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ರಾನಿ’ ಸಿನಿಮಾದ ನಟ ಕಿರಣ್ ರಾಜ್, ನಟಿಯರಾದ ಅಪೂರ್ವ, ರಾಧ್ಯಾ, ನಿರ್ದೇಶಕ ಗುರುತೇಜ್ ಶೆಟ್ಟಿ, ಉದ್ಯಮಿಗಳಾದ ಮಲ್ನಾಡ್ ಸಂತೋಷ್, ರಿಯಲ್ ಎಸ್ಟೇಟ್ ಉದ್ಯಮಿ ಚಲಪತಿ, ಸಂಜಯ್ ಗೌಡ, ಸಮೃದ್ಧ ಮಹೇಶ್ ಸೇರಿದಂತೆ ಅನೇಕರು ಭಾಗವಹಿಸಿದರು.

ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ, ಗ್ರಾಹಕರು ಯಾವುದೇ ಗಡಿ ಬಿಡಿ ಇಲ್ಲದೇ ಆರಾಮವಾಗಿ ತಮ್ಮ ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಈ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದೆ. ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಎಕ್ಸ್‌ಪೋಗೆ ಶುಭಾಶಯ ಕೋರಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಎಕ್ಸ್‌ಪೋದಲ್ಲಿ ಎಲ್ಲ ಅಗತ್ಯ ವಸ್ತುಗಳು ಲಭ್ಯವಿರುವ ಕಾರಣ ಗ್ರಾಹಕರು ಉತ್ತಮ ಶಾಪಿಂಗ್ ಅನುಭವ ಪಡೆಯಲು ಸಾಧ್ಯವಾಗುತ್ತದೆ ಎಂದರು.

ರಾನಿ ಸಿನಿಮಾ ನಟ ಕಿರಣ್ ರಾಜ್ ಮಾತನಾಡಿ, ಬೇರೆ ಕಡೆ ಶಾಪಿಂಗ್ ಮಾಡಲು ಹೋದಾಗ ಒಂದೊಂದು ವಸ್ತು ಖರೀದಿಗೆ ಒಂದೊಂದು ಅಂಗಡಿಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ರಸ್ತೆ, ಪ್ರದೇಶಗಳಿಗೆ ಹೋಗಬೇಕಾಗುತ್ತದೆ. ಅದರ ಬದಲು ಈ ಎಕ್ಸ್‌ಪೋಗೆ ಬಂದರೆ ಒಂದೇ ಸ್ಥಳದಲ್ಲಿ ಮನೆಗೆ ಅಗತ್ಯವಾಗಿರುವ ಎಲ್ಲ ವಸ್ತುಗಳನ್ನು ಖರೀದಿಸಬಹುದು. ಆರಾಮವಾದ ಶಾಪಿಂಗ್ ಅನುಭವ ಸಿಗುತ್ತದೆ. ವಾರಾಂತ್ಯದಲ್ಲಿ ಎಕ್ಸ್‌ಪೋ ನಡೆಯುತ್ತಿರುವ ಕಾರಣ ಶಾಪಿಂಗ್ ಮಾಡುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ನಟಿ ರಾಧ್ಯಾ ಮಾತನಾಡಿ, ಗಡಿ ಬಿಡಿ ಇಲ್ಲದೇ ಶಾಪಿಂಗ್ ಮಾಡುವುದು ಖುಷಿ ನೀಡುತ್ತದೆ. ಅರಮನೆ ಮೈದಾನದ ವಿಶಾಲವಾದ ಸ್ಥಳದಲ್ಲಿ ಶಾಪಿಂಗ್ ಮಾಡುವುದು ಖಂಡಿತ ಹೆಚ್ಚಿನ ಖುಷಿ ನೀಡುತ್ತದೆ ಎಂದರು.

ಸಂಸದ ಡಾ.ಸಿ.ಎನ್. ಮಂಜುನಾಥ ಅವರು ಎಕ್ಸ್‌ಪೋಗೆ ಭೇಟಿ ನೀಡಿ ಶುಭ ಹಾರೈಸಿದರು.

- ಮನೆಗೆ ಅಗತ್ಯವಾದ ಎಲ್ಲ ವಸ್ತುಗಳು ಒಂದೇ ಸೂರಿನಡಿ ಲಭ್ಯ.

- ಶಾಪಿಂಗ್ ಮಾಡುವ ಕೆಲವು ಅದೃಷ್ಟಶಾಲಿಗಳಿಗೆ ಗಿಫ್ಟ್ ಹ್ಯಾಂಪರ್

- ಎಕ್ಸ್‌ಪೋ ನಡೆಯುವ ಸ್ಥಳ : ಗ್ರ್ಯಾಂಡ್ ಕ್ಯಾಸಲ್, ಗೇಟ್ ಸಂಖ್ಯೆ 6, ಅರಮನೆ ಮೈದಾನ.

- ಎಕ್ಸ್‌ಪೋ ನಡೆಯುವ ದಿನಗಳು- ಸೆ.21, 22 ಮತ್ತು 23

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌