ಕನ್ನಡಪ್ರಭ ಕನ್ನಡಿಗರ ಧ್ವನಿ, ಯುವಜನತೆಗೆ ಸ್ಫೂರ್ತಿ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Sep 20, 2026, 02:30 AM IST
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅವರು ಮಾತನಾಡಿ,  | Kannada Prabha

ಸಾರಾಂಶ

ಆರು ದಶಕಗಳಿಗೂ ಹೆಚ್ಚು ಇತಿಹಾಸವುಳ್ಳ ಕನ್ನಡಪ್ರಭ ದಿನಪತ್ರಿಕೆ ನಿಜಕ್ಕೂ ಕನ್ನಡಿಗರ ಧ್ವನಿಯಾಗಿದ್ದು ಈ ಪತ್ರಿಕೆಗಳಲ್ಲಿನ ನೈಜ ಸುದ್ದಿ ನಿಜಕ್ಕೂ ಯುವ ಮನಸ್ಸುಗಳಿಗೆ ಸ್ಫೂರ್ತಿ ಬಡವರ ಆಶೋತ್ತರಗಳಿಗೆ ಸ್ಪಂದನಾ ಮನೋಭಾವ, ಮಾನವೀಯ ನೆಲೆಗಟ್ಟಿನಲ್ಲಿ ಪತ್ರಿಕೆ ಕಾರ್ಯ ನಿರ್ವಹಣೆ ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಈ ಭಾಗದ ಶಾಸಕನಾಗಿ ನಾನು ಕನ್ನಡಪ್ರಭ ವರದಿಯಲ್ಲಿನ ನೈಜತೆ ಮನಗಂಡು ವಿಧಾನಸೌಧದಲ್ಲಿ ಪತ್ರಿಕೆ ಹಿಡಿದು ಅನೇಕ ಬಾರಿ ಸಮಸ್ಯೆಗಳ ಮೂಲಕ ಗಮನ ಸೆಳೆದಿದ್ದೆನೆ, ಆರು ದಶಕಗಳಿಗೂ ಹೆಚ್ಚು ಇತಿಹಾಸವುಳ್ಳ ಕನ್ನಡಪ್ರಭ ದಿನಪತ್ರಿಕೆ ನಿಜಕ್ಕೂ ಕನ್ನಡಿಗರ ಧ್ವನಿಯಾಗಿದ್ದು ಈ ಪತ್ರಿಕೆಗಳಲ್ಲಿನ ನೈಜ ಸುದ್ದಿ ನಿಜಕ್ಕೂ ಯುವ ಮನಸ್ಸುಗಳಿಗೆ ಸ್ಫೂರ್ತಿ ಬಡವರ ಆಶೋತ್ತರಗಳಿಗೆ ಸ್ಪಂದನಾ ಮನೋಭಾವ, ಮಾನವೀಯ ನೆಲೆಗಟ್ಟಿನಲ್ಲಿ ಪತ್ರಿಕೆ ಕಾರ್ಯ ನಿರ್ವಹಣೆ ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಆದರ್ಶ ಸಕಾರಿ ವಿದ್ಯಾಲಯದಲ್ಲಿ ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ಅಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಯುವ ಆವೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಪ್ರಭ ಕನ್ನಡಿಗರ ಪ್ರತಿಧ್ವನಿ, ಕನ್ನಡದ ಯುವ ಜನರಿಗೆ ವಿಶೇಷ ಲೇಖನಗಳು, ಉದ್ಯೋಗದ ಮಾಹಿತಿಗಳು, ಸಾಧಕರ ಯಶೋಗಾಧೆಗಳು, ಯುವ ಮನಸ್ಸುಗಳಿಗೆಸ್ಪೂರ್ತಿದಾಯಕ ಲೇಖನ ಒದಗಿಸಿ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ. ಪತ್ರಿಕೆಗಳಲ್ಲಿ ಬರುವ ವಾಸ್ತವ ವರದಿಗಳನ್ನು ಜನತೆ ನಂಬಬಹುದು. ಕೆಲ ಟಿವಿ ಚಾನಲ್‌ಗಳಲ್ಲಿ ಬರುವ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನ ನಂಬಬೇಕು ಎಂಬುದೇ ತಿಳಿಯದಾಗಿದೆ. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದೆ, ನಾನು ಅಂದುಕೊಂಡಿದ್ದೆ ಬೇರೆ ಆದದ್ದೆ ಬೇರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜಕೀಯ ಎಂಬ ಸೇವಾ ರಂಗಕ್ಕೆ ಬರಬೇಕಾಯಿತು ಎಂದರು.

ಕನ್ನಡಪ್ರಭದ ಯುವ ಆವೃತ್ತಿ ಓದಿ, ಜ್ಞಾನಾರ್ಜನೆ ಬೆಳೆಸಿಕೊಳ್ಳಿ, ಆದರ್ಶ ಸರ್ಕಾರಿ ಶಾಲೆ ಕಳೆದ ಬಾರಿ ನೂರರ ಫಲಿತಾಂಶದ ಜೊತೆ 49 ಮಂದಿ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ನಿಹಾರಿಕ ಜಿಲ್ಲಾ ಟಾಪರ್ ಆಗಿರುವುದು ಹೆಮ್ಮೆಯ ವಿಚಾರ ಎಂದರು.

ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಪಿ.ಶ್ರವ್ಯ ಎಸ್.ಆರ್., ಲಾಲಿತ್ಯ, ಕೆ.ಎಂ.ಯುಕ್ತ ಜೈಶ್ರೀ, ಪಿ.ಎಸ್.ಶ್ರೀಲಕ್ಷ್ಮಿ, ಎನ್.ನಾಗಪ್ರಜ್ವಲ್, ಟಿ.ಡಿ.ಸ್ಕಂದ, ನೈಶಾ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶಾಸಕರು ವಿತರಿಸಿದರು.

ಜಿಲ್ಲಾ ಹಂತದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಆದರ್ಶ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಪ್ರದೀಪ್ ಕುಮಾರ್, ಕನ್ನಡಪ್ರಭ ಪತ್ರಿಕಾ ಪ್ರತಿನಿಧಿ ಶಾಂತರಾಜು ಅವರನ್ನು ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್,ಪ್ರಾಂಶುಪಾಲರಾದ ಮಂಗಳಮೂರ್ತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಸ್ತಿಪುರ ಪ್ರಕಾಶ್, ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಉಪಾಧ್ಯಕ್ಷೆ ನಂದಿನಿ, ಪರಶಿವ, ಎನ್.ಕೆ.ಲತಾ , ಆಲಹಳ್ಳಿ ತೋಟೇಶ್, ನಗರಸಭೆ ಮಾಜಿ ಅದ್ಯಕ್ಷ ರಮೇಶ್, ಮಾಜಿ ಸದಸ್ಯ ಮಂಜುನಾಥ್ ಇತರರು ಹಾಜರಿದ್ದರು.

ಕನ್ನಡಪ್ರಭ ಉತ್ತಮ ಪತ್ರಿಕೆ, ಕೊಂಡು ಓದಿ: ಪ್ರಕಾಶ್

ಮಕ್ಕಳಿಗೆ ಚೈತನ್ಯ,ಸ್ಪೂರ್ತಿ ತುಂಬಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆ ಅಯೋಜಿಸಿರುವುದು ನಿಜಕ್ಕೂ ಶ್ಲಾಘನೀಯವಿಚಾರವಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಕಾಶ್ ತಿಳಿಸಿದರು.

ಈ ನಿಟ್ಟಿನಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಕನ್ನಡಪ್ರಭ ಉತ್ತಮವಾದ ಪತ್ರಿಕೆ, ಕಲುಷಿತ ಸಮಾಜದೊಳಗೆ ಪ್ರಮಾಣಿಕವಾಗಿ ಕೆಲಸ ಮಾಡುವುದು ಕಷ್ಟ, ಇದನ್ನು ಮೆಟ್ಟಿನಿಂತು ಪ್ರಮಾಣಿಕವಾಗಿ ಎಂತಹ ಸಂದರ್ಭ ಬಂದರೂ ಜಗ್ಗದೆ, ಕುಗ್ಗದೆ ನಾಗೇಂದ್ರಸ್ವಾಮಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ನಿಟ್ಟಿನಲ್ಲಿ ಪತ್ರಿಕೆ ಕೊಂಡು ಓದಿ ಎಂದು ಮನವಿ ಮಾಡಿದರು.

ತಾಯಿ ಸೇರಿ ನಾಲ್ಕು ಹುಲಿ ಮರಿ ಸಾವಿನ ಪ್ರಕರಣದ ನೈಜ ವರದಿ ನಿಜಕ್ಕೂ ಬರಲಿಲ್ಲ, ಈ ಪ್ರಕರಣದಲ್ಲಿ ನಿರಾಪರಾಧಿ ಅಧಿಕಾರಿಗಳಿಗೆ ಶಿಕ್ಷೆಯಾಯಿತು. ಆಡಳಿತ ಸರ್ಕಾರದ ಶಾಸಕನಾಗಿದ್ದರೂ ಈ ವಿಚಾರದಲ್ಲಿ ನನಗೆ ಬೇಸರವಿದೆ. ಮತ್ತೊಂದು ಹುಲಿಯನ್ನು 3 ಭಾಗ ಕತ್ತರಿಸಿದ ಪ್ರಕರಣದಲ್ಲೂ ಕಠಿಣ ಕ್ರಮ ಆಗಲಿಲ್ಲ, ಸರ್ಕಾರ ಈ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಳ್ಳಲಿಲ್ಲ. ಕಾಡುಗಳ್ಳರ ಹಾವಳಿ ನಿಗ್ರಹವಾಗಬೇಕು, ವನ್ಯಪ್ರಾಣಿ ಕೊಂದವರಿಗೆ ಪ್ರಾಮಾಣಿಕವಾಗಿ ಶಿಕ್ಷೆಯಾಗಬೇಕು.

ಎ.ಆರ್.ಕೃಷ್ಣಮೂರ್ತಿ ಶಾಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ 98ನೇ ಜನ್ಮೋತ್ಸವ
ಮುನ್ನೊಳಿ ಪಂಚಾಯಿತಿಯಲ್ಲಿ ಪ್ರಜಾಸೇವೆಗೆ ಚಾಲನೆ