ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2024-25ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಕನ್ನಡಪ್ರಭದ ಅಜೀಜಅಹ್ಮದ ಬಳಗಾನೂರ ಸೇರಿದಂತೆ ಹಲವು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2024-25ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಕನ್ನಡಪ್ರಭದ ಅಜೀಜಅಹ್ಮದ ಬಳಗಾನೂರ ಸೇರಿದಂತೆ ಹಲವು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜು. 27ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಅಜೀಜಅಹ್ಮದ ಬಳಗಾನೂರ, ಲಿಂ. ಮುರಿಗೆಮ್ಮಾ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಮರಿದೇವ ಹೂಗಾರ, ದಿ. ಸುಲೇಮಾನ್ ಅಬ್ದುಲ್ ಅಜೀಜಸಾಬ್ ಮುನವಳ್ಳಿ (ಪೊಲೀಸ್ ಇಲಾಖೆ) ಸ್ಮರಣಾರ್ಥ ಅತ್ಯುತ್ತಮ ಲೇಖನ ಪ್ರಶಸ್ತಿಗೆ ಸುಷ್ಮಾ ಸವಸುದ್ದಿ, ಕೃಷಿ ಲೇಖನ ಪ್ರಶಸ್ತಿಗೆ ಕಲಾವತಿ ಬೈಚಬಾಳ, ಜಿತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಪ್ರಕಾಶ ಲಮಾಣಿ, ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಸ್ಮರಣಾರ್ಥ ಅತ್ಯುತ್ತಮ ಲೇಖನ ಪ್ರಶಸ್ತಿಗೆ ವಿಜಯಕುಮಾರ ಬೆಳ್ಳೇರಿಮಠ, ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿಗೆ ಪ್ರಹ್ಲಾದಗೌಡ ಗೊಲ್ಲಗೌಡರ, ದಿ. ರಾಮು ಆರ್. ಶೆಟ್ಟಿ ಸ್ಮರಣಾರ್ಥ ಆಂಗ್ಲ ಭಾಷೆ ವರದಿಗಾರಿಕೆ ಪ್ರಶಸ್ತಿಗೆ ಸುಭಾಸಚಂದ್ರ ಎನ್.ಎಸ್, ಲೀಲಾವತಿ ವಿಶ್ವನಾಥ ಶೆಟ್ಟಿ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಹರ್ಷಾ ಕುಲಕರ್ಣಿ, ಸಾಹಿತಿ ದಿ. ಎಂ.ಡಿ. ಗೋಗೇರಿ ಸ್ಮರಣಾರ್ಥ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಗೋವಿಂದ ಜವಳಿ, ಡಾ. ಬಿ.ಎಫ್. ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಗೆ ಸಾಯಿರಾಮ ಪವಾರ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಗೆ ಆನಂದ ಭಜಂತ್ರಿ, ಲಕ್ಷ್ಮೀ ನಾರಾಯಣ ದತ್ತಿ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಗೆ ಶಾನು ಯಲಿಗಾರ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ತ್ರೀ ಸಬಲೀಕರಣ ವಿಶೇಷ ಪ್ರಶಸ್ತಿಗೆ ನೀಲಮ್ಮ ಕೊಟ್ಟೂರಶೆಟ್ಟರ ಆಯ್ಕೆಯಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.