Competition organized under Save Wildlife campaign on Children's Day. More than 300 students expected to participate
- ಮಕ್ಕಳ ದಿನಾಚರಣೆ ಪ್ರಯುಕ್ತ ಸೇವ್ ವೈಲ್ಡ್ ಲೈಫ್ ಅಭಿಯಾನದಡಿ ಸ್ಪರ್ಧೆ ಆಯೋಜನೆ । 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ
ಕನ್ನಡಪ್ರಭ ವಾರ್ತೆ ರಾಯಚೂರುಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಷ್ಠಿತ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಡಿ.18 ಗುರುವಾರ ಬೆಳಗ್ಗೆ 10 ರಿಂದ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸೇವ್ ವೈಲ್ಡ್ ಲೈಫ್ ಅಭಿಯಾನದಂಗವಾಗಿ, ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಪ್ರೌಢ ಶಾಲೆಗಳ 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಅರಣ್ಯ ಮತ್ತು ವನ್ಯ ಜೀವ ವಿಷಯದ ಕುರಿತ ಈ ಸ್ಪರ್ಧೆಯ ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ನೆರವೇರಿಸಲಿದ್ದು, ಹಿರಿಯ ಚಿತ್ರಕಲಾವಿದ, ಲಲಿತಕಲಾ ಮ್ಯಾದರ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಚ್.ಎಚ್.ಮ್ಯಾದವರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ರಾಯಚೂರು ಮಗಾನಗರ ಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಜಯಣ್ಣ,ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು.ಎಸ್, ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಶೈಲಜಾ ವಿ. ಅಮೀನಗಡ ಅವರು ಭಾಗವಹಿಸಲಿದ್ದಾರೆ.ಇದರೊಟ್ಟಿಗೆ ವಿಶೇಷ ಆಹ್ವಾನಿತರಾಗಿ ನವೋದಯ ಮೆಡಿಕಲ್ ಕಾಲೇಜಿನ ಮೆಡಿಸಿಯನ್ ವಿಭಾಗದ ಪ್ರೊಫೆಸರ್, ಖ್ಯಾತ ವೈದ್ಯ ಡಾ.ರಾಮಕೃಷ್ಣ ಎಂ.ಆರ್., ರಾಯಚೂರು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ರಾಜಾ ಶ್ರೀನಿವಾಸ, ವಿಜ್ಞಾನ ರೆಸಿಡೆನ್ಸಿ ಸ್ಕೂಲ್ ಅಧ್ಯಕ್ಷ ಎಂ.ವೆಂಕಟೇಶ, ಡಿಡಿಪಿಐ ಕೆ.ಡಿ.ಬರಿಗೇರ,ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಈರಣ್ಣ ಕೋಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಸರ್ಕಾರಿ, ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರು, ಚಿತ್ರಕಾಲ ಶಿಕ್ಷಕರು,ವಿದ್ಯಾರ್ಥಿನಿಯರು, ವಿದ್ಯಾರ್ಥಗಳು ಪಾಲ್ಗೊಳ್ಳುತ್ತಿದ್ದಾರೆ.ಪ್ರೌಢ ಶಾಲೆಯ ಮಕ್ಕಳಲ್ಲಿ ಕರ್ನಾಕ ಅರಣ್ಯ ಮತ್ತು ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ರೂಪಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಿಂದ ಸುಮಾರು 300 ಕ್ಕು ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಒಟ್ಟು ಮೂರು ವಿಭಾಗಗಳಾದ 8,9 ಮತ್ತು 10 ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕವಾಗಿ ಜರುಗಲಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಅರಣ್ಯ ಇಲ್ಲವೇ ವನ್ಯಜೀವಿ ವಿಷಯದ ಮೇಲೆ, ಎರಡು ತಾಸಿನಲ್ಲಿ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಬಿಡಿಸಬೇಕಾಗುತ್ತದೆ. ಪ್ರತಿ ವಿಭಾಗದಲ್ಲಿ 3 ವಿಜೇತರಂತೆ ಒಟ್ಟು 9 ವಿಜೇತರನ್ನು ಪ್ರಕಟಿಸಿ, ಬಹುಮಾನ, ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ.------------------ಸರ್ ಚಿತ್ರಗಳನ್ನು ನಂತರ ಕಳುಹಿಸಲಾಗುವುದು.
17ಕೆಪಿಆರ್‌ಸಿಆರ್ 01ಮತ್ತು02: ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಿ.18 ಶನಿವಾರ ಪ್ರತಿಷ್ಠಿತ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.