ಬ್ಯಾಂಕ್‌ನಲ್ಲಿ ಕನ್ನಡ ರಾಜ್ಯೋತ್ಸವ ಶ್ಲಾಘನೀಯ: ಮೋಹನ್‌ ಚಂದ್ರಗುತ್ತಿ

KannadaprabhaNewsNetwork |  
Published : Nov 12, 2023, 01:03 AM IST
ಪೋಟೊ: 11ಎಸ್‌ಎಂಜಿಕೆಪಿ05ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಹಾಗೂ ಕ್ಷೇತ್ರಿಯ ಕಾರ್ಯಾಲಯ ಶಿವಮೊಗ್ಗದ ವತಿಯಿಂದ ಆಯೋಜಿಸಿದ್ದ  68ನೇ ಕನ್ನಡ ರಾಜ್ಯೋತ್ಸವವನ್ನು ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಬ್ಯಾಂಕಿನಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ: ರಾಜಮಣಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಹಾಗೂ ಕ್ಷೇತ್ರಿಯ ಕಾರ್ಯಾಲಯ ಶಿವಮೊಗ್ಗದ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಈ ಸಂದರ್ಭ ಮಾತನಾಡಿ, ಇಡೀ ಜಗತ್ತು ಕಾರ್ಪೊರೇಟ್ ಆಗುತ್ತಿರುವ ಸಂದರ್ಭದಲ್ಲಿ ಒಂದು ರಾಷ್ಟ್ರೀಯ ಬ್ಯಾಂಕ್ ಕನ್ನಡದ ನೆಲದ ಸವಿಯನ್ನು, ಅಭಿಮಾನದಿಂದ ಗೌರವದಿಂದ ರಾಜ್ಯೋತ್ಸವ ಆಚರಿಸುತ್ತಿರುವುದು ನಿಜವಾಗಲೂ ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.

ನಶ್ವರವಾದ ಈ ಬದುಕಿನಲ್ಲಿ ಸಂಭ್ರಮ ಕಾಣಬೇಕು. ಕನ್ನಡದ ದೀಪದ ಮೂಲಕ ಜ್ಞಾನವನ್ನು, ವಿವೇಕವನ್ನು ನೋಡಿಕೊಳ್ಳಬೇಕು, ಸಾಮಾನ್ಯರ ಮೂಲಕ ನಮ್ಮ ಕನ್ನಡ ನಾಡನ್ನು ಸೂಚಿಸಬೇಕು ಎಂದರು.

ಖಂಡೋಬರಾವ್ ಮಾತನಾಡಿ, ಅವರು ಕನ್ನಡ ನಾಡು ಉದಯವಾಗಿ 68 ವರ್ಷ ಪೂರೈಸಿದೆ. ಅನೇಕರ ಹೋರಾಟ ಶ್ರದ್ಧೆ ಫಲವಾಗಿ ವಿಶಾಲ ಕರ್ನಾಟಕವಾಗಿದೆ. ಕನ್ನಡ ಕೇವಲ ನುಡಿಯಲ್ಲ, ನಮ್ಮ ಜೀವ. ಮಹಾಭಾರತದ ಆದಿ ಪರ್ವದಲ್ಲೂ ಕನ್ನಡ ಪದದ ಉಲ್ಲೇಖವಿದೆ. ಕನ್ನಡ ಪ್ರಾಚೀನ ಕಾಲದಿಂದಲೂ ತನ್ನದೇ ಆದ ವೈಶಿಷ್ಟವನ್ನು ಹೊಂದಿದೆ ಎಂದರು.

ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರಾಜಮಣಿ ಮಾತನಾಡಿ, ನಮ್ಮ ಬ್ಯಾಂಕಿನಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಬ್ಯಾಂಕ್‌ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ರಸಪ್ರಶ್ನೆ, ಚಿತ್ರಕಲೆ, ವೇಷಭೂಷಣ ಸ್ಪರ್ಧೆ ಹೀಗೆ ಹಲವಾರು ಸ್ಪರ್ಧೆಗಳನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದೆ ಎಂದರು.

ಬೇರೆ ರಾಜ್ಯಗಳಿಂದ ವರ್ಗಾವಣೆಯಾಗಿ ಕರ್ನಾಟಕಕ್ಕೆ ಬಂದಂತಹ ಉದ್ಯೋಗಿಗಳಿಗೆ ನಿರಂತರವಾಗಿ ಕನ್ನಡವನ್ನು ಕಲಿಸುವ ಉದ್ದೇಶದಿಂದ ಕನ್ನಡ ತರಗತಿಯನ್ನು ಬ್ಯಾಂಕಿನಿಂದ ಆಯೋಜಿಸುತ್ತಿದ್ದೇವೆ ಎಂದರು.

ಬ್ಯಾಂಕಿನ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

- - - -11ಎಸ್‌ಎಂಜಿಕೆಪಿ05:

ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಹಾಗೂ ಕ್ಷೇತ್ರಿಯ ಕಾರ್ಯಾಲಯ ಶಿವಮೊಗ್ಗದ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವವನ್ನು ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ