ಮೂಡುಬಿದಿರೆ: ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಲ್ಲ. ಅದು ನಮ್ಮ ಗುರುತು, ಆತ್ಮಗೌರವ ಮತ್ತು ಒಗ್ಗಟ್ಟಿನ ಸಂಕೇತ. ಇಲ್ಲಿನ ಜನರ ಸಂಸ್ಕೃತಿ, ಭಾಷೆ, ಕಲೆ ಮತ್ತು ಧರ್ಮಗಳ ವೈವಿಧ್ಯತೆಯಿಂದಾಗಿ, ಕರ್ನಾಟಕವನ್ನು ಬಹುಸಂಸ್ಕೃತಿಯ ಆಡುಂಬೊಲವನ್ನಾಗಿಸಿದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಹೆಚ್ಚಿನ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಇತರ ಕಾಲೇಜುಗಳಲ್ಲಿ ಶೇ.೮೫ ವಿದ್ಯಾರ್ಥಿಗಳು ಸ್ಥಳೀಯರಿದ್ದರೆ, ಶೇ.೧೫ ಮಂದಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬಂದಿರುತ್ತಾರೆ. ಆದರೆ ಆಳ್ವಾಸ್‌ನಲ್ಲಿ ಶೇ.೮೫ ಹೊರಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಇಂತಹ ವೈವಿಧ್ಯಮಯ ಸಹಬಾಳ್ವೆಯೇ ಆಳ್ವಾಸ್‌ನ ವೈಶಿಷ್ಟ್ಯ ಎಂದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಕಾಲೇಜಿನ ಪ್ರಾಚಾರ‍್ಯ ಡಾ.ಪೀಟರ್ ಫರ್ನಾಂಡಿಸ್, ಪಾಲಕರಾದ ಮಾಧವ, ಕನ್ನಡ ಸಂಘದ ಸಂಚಾಲಕರಾದ ಪ್ರೊ.ಗಣೇಶ್ ಎಂ.ಆರ್., ಡಾ.ಗುರುಶಾಂತ್ ಬಿ. ವಗ್ಗರ್ ಇದ್ದರು. ಪ್ರನೂಷಾ ಕಾರ‍್ಯಕ್ರಮ ನಿರೂಪಿಸಿದರು.