ಕನ್ನಡ ರಾಜ್ಯೋತ್ಸವ ನಮ್ಮ ಹೆಮ್ಮೆಯ ಹಬ್ಬ

KannadaprabhaNewsNetwork |  
Published : Nov 02, 2025, 02:15 AM IST
ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಗೀತೆಗಳು ಮತ್ತು ವಂದೇ ಮಾತರಂ ಘೋಷಣೆಗಳ ನಡುವೆ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಬಣ್ಣ ತುಂಬಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕನ್ನಡ ರಾಜ್ಯೋತ್ಸವ ನಮ್ಮ ಹೆಮ್ಮೆಯ ಹಬ್ಬ. ನಮ್ಮ ಮಾತೃಭಾಷೆ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯ ಪ್ರತೀಕ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಕನ್ನಡದ ಗೌರವವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪಸರಿಸುವುದು, ಕನ್ನಡ ಭಾಷೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಸರಳತೆ ಮತ್ತು ಸೌಂದರ್ಯವನ್ನು ಅರಿತು, ಅದರ ಶ್ರೇಷ್ಠತೆಯನ್ನು ಕಾಪಾಡೋಣ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಯಾವ ಭಾಷೆಯಾನ್ನಾದರೂ ಮಾತನಾಡಿ ಆದರೆ ಮಾತೃಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

ನಗರದ ಓಲ್ಡ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಗೀತೆಗಳು ಮತ್ತು ವಂದೇ ಮಾತರಂ ಘೋಷಣೆಗಳ ನಡುವೆ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಬಣ್ಣ ತುಂಬಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕನ್ನಡ ರಾಜ್ಯೋತ್ಸವ ನಮ್ಮ ಹೆಮ್ಮೆಯ ಹಬ್ಬ. ನಮ್ಮ ಮಾತೃಭಾಷೆ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯ ಪ್ರತೀಕ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಕನ್ನಡದ ಗೌರವವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪಸರಿಸುವುದು, ಕನ್ನಡ ಭಾಷೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಸರಳತೆ ಮತ್ತು ಸೌಂದರ್ಯವನ್ನು ಅರಿತು, ಅದರ ಶ್ರೇಷ್ಠತೆಯನ್ನು ಕಾಪಾಡೋಣ ಎಂದರು.ಕನ್ನಡ ಭಾಷೆ ಇಡೀ ದೇಶ ಮತ್ತು ಜಗತ್ತಿನ ಉದ್ದಗಲಕ್ಕೂ ಕೀರ್ತಿಯನ್ನು ತಂದಿದೆ. ಮಹಾನ್ ಕವಿಗಳು, ಲೇಖಕರು, ಮತ್ತು ಚಿಂತಕರು ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಕಾವ್ಯ ಮತ್ತು ಕೃತಿಗಳು ನಮ್ಮ ನಾಡಿನ ಅಸ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಇಂದಿನ ದಿನಗಳಲ್ಲಿ ಅಮೆರಿಕಾದಂತಹ ದೇಶಗಳಲ್ಲಿಯೂ ಕನ್ನಡ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಅಂತಹ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಕನ್ನಡ ನಾಡು, ಗುಡ್ಡ, ಬೆಟ್ಟ, ನದಿ, ಅರಣ್ಯ ಸೇರಿದಂತೆ ಅಪಾರ ಸಂಪತ್ತುಗಳಿಂದ ಕೂಡಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರೂ ಸೇರಿ ಬದುಕೋಣ, ಕನ್ನಡ ನಾಡಿನ ಹಿರಿಮೆ ಹೆಚ್ಚಿಸೋಣ. ಆರ್ಥಿಕವಾಗಿ ಬಲವಾಗುವತ್ತ ನಾವು ಹೆಜ್ಜೆ ಇಡಬೇಕು. ಎಲ್ಲರನ್ನೂ ಸಮಾನವಾಗಿ ಕಾಣುವುದು ನಿಜವಾದ ಕನ್ನಡಿಗನ ಗುಣ ಎಂದು ಕರೆ ನೀಡಿದರು.ತಾಲೂಕು ಅಭಿವೃದ್ಧಿಯ ದಿಕ್ಕಿನಲ್ಲಿ ಮುಂದುವರಿಯುತ್ತಿದೆ. ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಕಣಕಟ್ಟೆ ಸುತ್ತ 10 ಕೆರೆಗಳು ತುಂಬಲ್ಪಟ್ಟಿವೆ. ಹೀಗೆ ಗ್ರಾಮೀಣ ಪ್ರದೇಶಕ್ಕೂ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ, ಎಂದರು. ಮಕ್ಕಳು ಕನ್ನಡ ನಾಡಗೀತೆ, ಜನಪದ ನೃತ್ಯ ಹಾಗೂ ಕವಿ ಭಾವಗೀತೆಗಳ ಮೂಲಕ ಕನ್ನಡದ ಸೌಂದರ್ಯವನ್ನು ಮೆರೆದರು. ಕಾರ್ಯಕ್ರಮದ ಅಂತ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಸಮಿವುಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್‌, ಗ್ಯಾರಂಟಿ ಯೋಜನೆ ಅಧ್ಯಕ್ಷ ಧರ್ಮಶೇಖರ್‌, ಉಪಾಧ್ಯಕ್ಷ ಮನೋಹರ್, ಇ.ಒ ಗಂಗಣ್ಣ, ಆರಕ್ಷಕ ಉಪಅಧೀಕ್ಷಕರಾದ ಗೋಪಿ ಬಿ.ಆರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ