ಕನ್ನಡ ರಾಜ್ಯೋತ್ಸವ: ಹಿರಿಯ ನಾಗರಿಕರಿಗೆ ಕವಿಗೋಷ್ಠಿ

KannadaprabhaNewsNetwork |  
Published : Oct 24, 2025, 01:00 AM IST
ಕನ್ನಡ  | Kannada Prabha

ಸಾರಾಂಶ

ಜಿಲ್ಲೆಯ ಹಿರಿಯ ನಾಗರಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿಗೋಷ್ಠಿ ಏರ್ಪಡಿಸಿದೆ.

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಹಿರಿಯ ನಾಗರಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿಗೋಷ್ಠಿ ಏರ್ಪಡಿಸಿದೆ.

ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಪಾರವಾಗಿ ಅನುಭವಿರುವ ಹಿರಿಯ ನಾಗರಿಕರು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ. ಅವರು ತಮ್ಮ ಸ್ವರಚಿತ ಕವನವನ್ನು ವಿಳಾಸಕ್ಕೆ ಕಳುಹಿಸುವುದು. ಕವನಗಳನ್ನು ಪರಿಶೀಲಿಸಿ ಆಯ್ಕೆಗೊಳಿಸಲು ಸಮಿತಿ ರಚಿಸಲಾಗುವುದು.

ಕವನ 16 ಗೆರೆಗಳನ್ನು ಮೀರಿರಬಾರದು. ಒಬ್ಬರು ಒಂದು ಕವನವನ್ನು ಮಾತ್ರ ಕಳುಹಿಸಬಹುದು. ಕನ್ನಡ ಭಾಷೆಯ ಚುಟುಕು ಕವನ(4 ಸಾಲಿನ ಗರಿಷ್ಠ 4 ಕವನ) ಗಳನ್ನೂ ಕಳುಹಿಸಬಹುದು. ಲಕೊಟೆಯ ಮೇಲೆ *ರಾಜ್ಯೋತ್ಸವ ಹಿರಿಯರ ಕವಿಗೋಷ್ಠಿ*ಗೆ ಎಂದು ಬರೆಯತಕ್ಕದ್ದು.

ಕೊಡಗು ಜಿಲ್ಲೆಯ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ. ಕವನಗಳನ್ನು ಕಳುಹಿಸಲು ಕಡೆಯ ದಿನಾಂಕ ನ. 5. ಮೊಬೈಲ್ ಗಳಿಗೆ ವಾಟ್ಸಪ್ ಮೂಲಕವೂ ಕಳುಹಿಸಬಹುದು. ಕವನದ ಜೊತೆಗೆ ಆಧಾರ್ ಕಾರ್ಡ್ ಅಥವಾ ಹಿರಿಯ ನಾಗರಿಕ ದೃಢೀಕರಣ ಪತ್ರದ ನಕಲನ್ನು ಕಳುಹಿಸಿತಕ್ಕದ್ದು.

ಕಳುಹಿಸಬೇಕಾದ ವಿಳಾಸ :

ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ ಕೇಶವ ಕಾಮತ್-94483 46276,

ಮುನೀರ್ ಅಹ್ಮದ್-9113208330, ರೇವತಿ ರಮೇಶ್- 9663254829

ನ.5 ರ ಒಳಗಾಗಿ ತಲುಪಿಸಬೇಕು ಎಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!