ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಡಿ.14ರಂದು ಸಂಜೆ ಪಟ್ಟಣದ ಪುರಸಭಾ ಮೈದಾನದಲ್ಲಿ ತಾಲೂಕಿನಲ್ಲಿ ಜನಿಸಿ ದೇಶ ಸೇವೆ ಸಲ್ಲಿಸುತ್ತಿರುವ ಯೋಧರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್ ವಹಿಸಲಿದ್ದಾರೆ. ಧ್ವಜಾರೋಹಣವನ್ನು ಶಾಸಕ ಎಚ್.ಟಿ ಮಂಜು ವಹಿಸಲಿದ್ದಾರೆ. ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ಮಾಜಿ ಶಾಸಕ ಕೆ. ಬಿ ಚಂದ್ರಶೇಖರ್, ಪುಷ್ಪಾರ್ಚನೆಯನ್ನು ಜಿಲ್ಲಾಧ್ಯಕ್ಷ ಯೋಗಣ್ಣ ಸಲ್ಲಿಸಲಿದ್ದಾರೆ ಎಂದರು.ಅತಿಥಿಗಳಾಗಿ ನಟರಾದ ಶ್ರೀಮುರಳಿ, ವಸಿಷ್ಠಸಿಂಹ, ಹಾಸ್ಯ ಕಲಾವಿದ ಟೆನಿಸ್ ಕೃಷ್ಣ, ಚಂದ್ರಪ್ರಭ, ಶೀಳನೆರೆ ಕೇಶವ, ಪ್ರಶಾಂತ್ ಚಕ್ರವರ್ತಿ, ತ್ರಿವಿಕ್ರಮ್ ಸೇರಿದಂತೆ ಅನೇಕ ನಟ ನಟಿಯರು ಹಾಸ್ಯ ಕಲಾವಿದರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಂಘಗಳ ಪದಾಧಿಕಾರಿಗಳು ಭಾಗವಹಿಸುವರು ಎಂದರು.
ಕೆ.ಅಭಿಲಾಷ್‌ಗೆ ಪಿಎಚ್.ಡಿ ಪದವಿ
ಪ್ರಸ್ತುತ ಮಂಡ್ಯದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಅಭಿಲಾಷ್ ಅವರು "Goods and Services Tax Implications on Selected FMCG Products: A Perceptual Study in Karnataka " ವಿಷಯದಲ್ಲಿ ಅವರು ಮಹಾರಾಜ ಕಾಲೇಜಿನ ಪ್ರೊ.ಆರ್.ತಿಮ್ಮರಾಯಪ್ಪರ ಮಾರ್ಗದರ್ಶನದಲ್ಲಿ ಸಂಶೋಧನೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ವಿಷಯದಡಿ ಪಿಎಚ್.ಡಿ ಪದವಿ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.