ವಿಜ್ಞಾನ, ಗಣಿತ ಕಲಿಕೆಗೆ ಸೈನ್ಸ್ ಮಿನಿ ಸೆಂಟರ್ ಅಗತ್ಯ: ಯೋಗೇಶ್

KannadaprabhaNewsNetwork |  
Published : Dec 13, 2025, 02:00 AM IST
12ಕೆಎಂಎನ್ ಡಿ16 | Kannada Prabha

ಸಾರಾಂಶ

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಆಧಾರಿತ ಶಿಕ್ಷಣ ನೀಡಲು ಹಾಗೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಯೋಗಿಕವಾಗಿ ವಿಜ್ಞಾನ ಮಾದರಿ ಗಣಿತ ಶಿಕ್ಷಣದ ಮುಖಾಂತರ ನಗರ ಪಟ್ಟಣದ ಶಿಕ್ಷಣದಷ್ಟೇ ಪ್ರಮುಖ ಆದ್ಯತೆ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ದೇವಲಾಪುರ

ಗ್ರಾಮೀಣ ಮಕ್ಕಳು ವಿಜ್ಞಾನ ಮತ್ತು ಗಣಿತ ಕಲಿಕೆಗೆ ಮಿನಿ ಸೈನ್ ಸೆಂಟರ್ ಪ್ರಯೋಗಾಲಯ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ತಿಳಿಸಿದರು. ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಬ್ರಿಲ್ ಮತ್ತು ಸ್ಟಿಮ್ ಆಶ್ರಯದಲ್ಲಿ ಏರ್ಪಡಿಸಿದ್ದ ಸೈನ್ಸ್ ಮಿನಿ ಸೆಂಟರ್ ಪ್ರಯೋಗಾಲಯದ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಂತರ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಹಾಗೂ ತಮ್ಮ ಪ್ರತಿಭೆಗಳ ಪ್ರೋತ್ಸಾಹದಿಂದ ತಾವೇ ಪ್ರಾಯೋಗಿಕ ವಿಜ್ಞಾನದ ಕೊಡುಗೆ ನೀಡಲು ಅನುಕೂಲವಾಗಲು ಸೈನ್ಸ್ ಮಿನಿ ಸೆಂಟರ್ ಅಗತ್ಯವಿದೆ. ಈ ಸೌಲಭ್ಯ ಬಳಸಿಕೊಳ್ಳುವಂತೆ ಕರೆ ನೀಡಿದರು.

ಫೌಂಡೇಷನ್ ಸಿಎಸ್‌ಆರ್ ದತ್ತಾತ್ತೇಯ ನಾಯಕ್ ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಆಧಾರಿತ ಶಿಕ್ಷಣ ನೀಡಲು ಹಾಗೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಯೋಗಿಕವಾಗಿ ವಿಜ್ಞಾನ ಮಾದರಿ ಗಣಿತ ಶಿಕ್ಷಣದ ಮುಖಾಂತರ ನಗರ ಪಟ್ಟಣದ ಶಿಕ್ಷಣದಷ್ಟೇ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎಂದರು.

ನಮ್ಮ ಫೌಂಡೇಶನ್ ವಿದ್ಯಾಭ್ಯಾಸದ ಪೂರಕ ಬೆಳವಣಿಗೆಗೆ ಅನೇಕ ಶಿಕ್ಷಣದ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರುವ ಮುಖಾಂತರ ಜಿಲ್ಲಾ, ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಕ್ಕಳ ಪ್ರತಿಭೆ ಗುರುತಿಸುವ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳ ಮುಖಾಂತರ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಮಾದರಿ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಪರಿಚಯ ಸಂವಾದದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜವರೇಗೌಡ, ಕ್ಷೇತ್ರ ಸಮನ್ವಯಧಿಕಾರಿಗಳಾದ ರವೀಶ್, ಅಕ್ಷಯ್ ಸಿಂಗ್, ಲಕ್ಷ್ಮಿ, ಪ್ರಾರ್ಥನಾ, ಎಚ್ ಕೆ.ನಾಗರಾಜು, ಆರು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ವಿಜ್ಞಾನ ಶಿಕ್ಷಕರು ಇದ್ದರು.

ಸಮಾರಂಭದದನ್ನು ಗಣ್ಯರನ್ನು ಮುಖ್ಯ ಶಿಕ್ಷಕ ನೂರ್ ಅಪ್ರೋಜ್ ಸ್ವಾಗತಿಸಿದರು. ಶಿಕ್ಷಕರಾದ ಎಚ್.ಎಸ್.ಉಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ಯಾಮಲಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ