ಫೆ.೨೧ರಿಂದ ಕನ್ನಡ ಸಂಶೋಧನಾ ಕಮ್ಮಟ: ಪ್ರೊ. ಜಯಪ್ರಕಾಶಗೌಡ

KannadaprabhaNewsNetwork |  
Published : Feb 18, 2026, 01:30 AM IST
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ  | Kannada Prabha

ಸಾರಾಂಶ

ಫೆ.೨೧ರಂದು ಬೆಳಗ್ಗೆ ೧೦ ಗಂಟೆಗೆ ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ ನಡೆಯಲಿದ್ದು, ವಿದ್ವಾಂಸ ಡಾ. ರಾಗೌ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸುವರು. ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ನಗರದ ಕೆ.ವಿ.ಎಸ್. ಭವನದಲ್ಲಿ ಫೆ.೨೧, ೨೨ರಂದು ಎರಡು ದಿನಗಳ ಕನ್ನಡ ಸಂಶೋಧನಾ ಕಮ್ಮಟ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ತಿಳಿಸಿದರು.

ಫೆ.೨೧ರಂದು ಬೆಳಗ್ಗೆ ೧೦ ಗಂಟೆಗೆ ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ ನಡೆಯಲಿದ್ದು, ವಿದ್ವಾಂಸ ಡಾ. ರಾಗೌ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸುವರು. ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಮಧ್ಯಾಹ್ನ ೨ ಗಂಟೆಗೆ ಸಂಶೋಧನೆ ತಾತ್ವಿಕತೆ, ಸ್ವರೂಪ ಕುರಿತು ಗೋಷ್ಠಿ ನಡೆಯಲಿದ್ದು, ಹಿರಿಯ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತನಾಯಕ, ತುಮಕೂರು ವಿವಿ ಕುಲಸಚಿವ ಪ್ರೊ. ಮೋಹನ ಚಂದ್ರಗುತ್ತಿ ವಿಷಯ ಮಂಡಿಸುವರು. ಪ್ರಾಧ್ಯಾಪಕಿ ಪ್ರೊ.ತ್ರಿವೇಣಿ ಸಮನ್ವಯ ನಿರ್ವಹಿಸುವರು ಎಂದರು.

ನಂತರ ಕನ್ನಡ ಸಂಶೋಧನೆ ಹಿನ್ನೋಟ ಗೋಷ್ಠಿ-೨ರಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್.ಆರ್.ಲಲಿತಾಂಬ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ವಿಷಯ ಮಂಡಿಸುವರು. ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಸಮನ್ವಯ ನಿರ್ವಹಿಸುವರು ಎಂದರು.

ಫೆ.೨೨ರಂದು ಬೆಳಗ್ಗೆ ೧೦ ಗಂಟೆಗೆ ಕನ್ನಡ ಸಂಶೋಧನೆ ಗೋಷ್ಠಿ ೩ ನಡೆಯಲಿದ್ದು, ತುಮಕೂರು ವಿವಿ ಸಹ ಪ್ರಾಧ್ಯಪಕಿ ಡಾ. ಜ್ಯೋತಿ, ಶರಾವತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಆರಡಿ ಮಲ್ಲಯ್ಯ ಕಟ್ಟೀರ ಅವರು ವಿಷಯ ಮಂಡಿಸುವರು. ಸಹಾಯಕ ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ ಸಮನ್ವಯ ನಿರ್ವಹಿಸುವರು.

ಗೋಷ್ಠಿ-೪ರಲ್ಲಿ ದೃಶ್ಯ ಮಾನವಶಾಸ್ತ್ರಜ್ಞ ಡಾ.ಸಿರಿಗಂಧ ಶ್ರೀನಿವಾಸಮೂರ್ತಿ, ಸಹಾಯಕ ಪ್ರಾಧ್ಯಾಪಕ ಡಾ. ಸುಭಾಷ್ ರಾಜಮಾನೆ ಅವರು ವಿಷಯ ಮಂಡಿಸುವರು. ಪ್ರಾಧ್ಯಾಪಕಿ ಪ್ರೊ. ಎಚ್.ಪಿ. ಗೀತಾ ಸಮನ್ವಯ ನಿರ್ವಹಿಸುವರು ಎಂದರು.

ಸಂಶೋಧನಾ ಬರಹ: ತಾಂತ್ರಿಕ ಸಂಗತಿಗಳು ಕುರಿತ ಗೋಷ್ಠಿ -೫ ನಡೆಯಲಿದ್ದು, ಪ್ರಾಧ್ಯಾಪಕ ಪ್ರೊ.ಪಿ. ಬೆಟ್ಟೇಗೌಡ, ಕನ್ನಡ ಪ್ರಾಧ್ಯಾಪಕ ಡಾ. ಬಾಜಿ ದೇವೇಂದ್ರಪ್ಪ ವಿಷಯ ಮಂಡಿಸುವರು. ಸಹಾಯಕ ಪ್ರಾಧ್ಯಾಪಕ ಡಾ. ಎನ್.ವೈ. ಶ್ರೀನಿವಾಸಯ್ಯ ಸಮನ್ವಯ ನಿರ್ವಹಿಸುವರು ಎಂದರು.

ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಸಮಾರೋಪ ಭಾಷಣ ಮಾಡುವರು. ಸಂಸ್ಕೃತಿ ಚಿಂತಕ ಡಾ. ತುಕಾರಾಂ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ವರದಿ
ಕಲಬುರಗಿ ಜೈಲ್‌ ಬ್ರೇಕ್‌ಗೆ ಬನಿಯನ್‌, ಜಮಖಾನ ಬಳಕೆ!