ಕನ್ನಡ ಸಾಹಿತ್ಯ ಪರಿಷತ್‌ ಉಪ್ಪಿನಂಗಡಿ ಹೋಬಳಿ ಘಟಕದ ಪದಗ್ರಹಣ

KannadaprabhaNewsNetwork | Published : Feb 20, 2024 1:47 AM

ಸಾರಾಂಶ

ಉಪ್ಪಿನಂಗಡಿ ಹೋಬಳಿ ಘಟಕದ ಪದಗ್ರಹಣ ಸಮಾರಂಭ ಹಾಗೂ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉಪ್ಪಿನಂಗಡಿಯ ಪಂಜಳದ ಮಣಿಮಂಟಪದಲ್ಲಿ ಭಾನುವಾರ ನಡೆಯಿತು. ಮಹಾಭಾರತ ಅನುಸಂಧಾನ ಎಂಬ ವಿಚಾರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ದತ್ತಿ ನಿಧಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ದ ಆಶ್ರಯದಲ್ಲಿ ಉಪ್ಪಿನಂಗಡಿ ಹೋಬಳಿ ಘಟಕದ ಪದಗ್ರಹಣ ಸಮಾರಂಭ ಹಾಗೂ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉಪ್ಪಿನಂಗಡಿಯ ಪಂಜಳದ ಮಣಿಮಂಟಪದಲ್ಲಿ ಭಾನುವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಅಧ್ಯಕ್ಷ ಎಂ.ಪಿ.ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ವಾಂಸ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರೂ ಆಗಿರುವ ತಾಳ್ತಜೆ ವಸಂತ ಕುಮಾರ ಮಾತನಾಡಿ, ಕನ್ನಡ ಸಾಹಿತ್ಯದೊಳಗಿನ ರಸಾಮೃತವನ್ನು ಸವಿಯುವ ಅವಕಾಶ ಹೆಚ್ಚು ಹೆಚ್ಚು ಲಭಿಸುವಂತಾಗಲಿ ಎಂದರು.

ಮಹಾಭಾರತ ಅನುಸಂಧಾನ ಎಂಬ ವಿಚಾರದಲ್ಲಿ ದತ್ತಿ ನಿಧಿ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರು, ಅಂತರಂಗದ ಲೋಕ ಹೇಗೆ ಇದೆಯೋ ಹಾಗೆ ನೋಡುವ ಎದೆಗಾರಿಕೆ ಇರಬೇಕಾಗಿದೆ ಎಂದರು.

ಕೃತಿ ಪರಿಚಯ ಮಾಡಿದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ದ.ಕ ಜಿಲ್ಲೆಯ ಮೂರನೇ ಸಾಹಿತಿಯಾಗಿರುವ ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತ ಅನುಸಂಧಾನ ಕೃತಿಯಲ್ಲಿ ನಾಶದ ನಡುವೆಯೂ ಒಂದು ಚಿಗುರು ಎದ್ದೇಳುವುದನ್ನು ಕಾಣಬಹುದಾಗಿದೆ ಎಂದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಉಪ್ಪಿನಂಗಡಿ ಹೋಬಳಿ ಅಧ್ಯಕ್ಷ ಕರುಣಾಕರ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಬಿ ಐತ್ತಪ್ಪ ನಾಯ್ಕ ಹಾಜರಿದ್ದರು.

ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾಗಿ ಕರುಣಾಕಾರ ಸುವರ್ಣ , ಗೌರವ ಕಾರ್ಯದರ್ಶಿಯಾಗಿ ಯು.ಎಲ್‌. ಉದಯ ಕುಮಾರ್, ಗೌರವ ಕೋಶಾಧ್ಯಕ್ಷರಾಗಿ ಡಾ. ಗೋವಿಂದಪ್ರಸಾದ್ ಕಜೆ, ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್, ಸದಸ್ಯರಾದ ಶಾಂತಾ ಕುಂಟಿನಿ, ವಿಮಲಾ ತೇಜಾಕ್ಷಿ, ಸುಂದರಿ, ಅಬ್ದುಲ್ ರಹಿಮಾನ್ ಯೂನಿಕ್, ವೀಣಾ ಪ್ರಸಾದ್, ಪದಗ್ರಹಣ ಸ್ವೀಕರಿಸಿದರು.

ಕಾರ್ಯಕ್ರಮದಲಿ ಮಣಿಲ ವಿಠಲ ಶಾಸ್ತ್ರಿ, ಡಾ. ಎ ಪಿ ಭಟ್, ಕಡೆಮಜಲು ಸುಭಾಶ್ ರೈ, ಪ್ರೀತಿ ಎಸ್ ರೈ, ಕೈಲಾರ್ ರಾಜಗೋಪಾಲ ಭಟ್, ರಾಮಚಂದ್ರ ಮಣಿಯಾಣಿ, ವಂದನಾ ಶರತ್ , ಜಯಾನಂದ ಪೆರಾಜೆ, ರವೀಂದ್ರ ದರ್ಬೆ, ಮಹಾಲಿಂಗೇಶ್ವರ ಭಟ್, ದುರ್ಗಾಮಣಿ, ರಮೇಶ್ ಕಜೆ , ಸುಲೇಖಾ ವರದರಾಜ್, ಸುಬ್ಬಪ್ಪ ಕೈಕಂಬ, ಸುಧಾಕರ ಶೆಟ್ಟಿ, ಆದೇಶ್ ಶೆಟ್ಟಿ, ಕುಸುಮಾ ಕೆ, ಶಶಿಕಲಾ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಶಶಿಧರ್ ಶೆಟ್ಟಿ, ಗೀತಾ ಲಕ್ಷ್ಮೀ ತಾಳ್ತಜೆ, ವೀಣಾಪ್ರಸಾದ್ ಕಜೆ ,ಬಾಲಕೃಷ್ಣ ಭಟ್, ಸುಧಾಪೂರ್ಣ, ಉದಯ ಕುಮಾರ್ ತೆಕ್ಕುಂಜೆ, ಅತುಲ್ ಕಶ್ಯಪ್, ಅಕ್ಷರ ಕಶ್ಯಪ್ ಮತ್ತಿತರರು ಭಾಗವಹಿಸಿದ್ದರು.

Share this article