ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲೂಕು ಘಟಕದಿಂದ ಕಸಾಪ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ 5ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸಾಪ ಹಮ್ಮಿಕೊಂಡಿರುವ ಸಾಹಿತ್ಯ ಸೌರಭ ಕಾರ್ಯಕ್ರಮದಿಂದ ಸ್ಥಳೀಯ ಪ್ರತಿಭೆಗಳನ್ನು ಬೆಳಕಿಗೆ ತರಲು ಅವಕಾಶವಾಗುತ್ತದೆ ಎಂದರು.
ಸುರಹೊನ್ನೆ ಗ್ರಾಮದ ಬಸವೇಶ್ವರ ಭಜನಾ ಸಂಘದ ಮೀನಾಕ್ಷಿ ಮಾತನಾಡಿ, ಭಜನೆ ಕಲಿಯುವ ರೀತಿ, ಅದರಿಂದ ಆಗುವ ಉಪಯೋಗಳ ಕುರಿತು ಭಜನೆ ಹಾಡುಗಳನ್ನು ತಿಳಿಸಿದರು. ರಾಮೇಶ್ವರದ ಯುವರೈತ ನಾಗರಾಜ ಅವರು, ಕೃಷಿಯ ವಿವಿಧ ಪ್ರಕಾರಗಳ ಬಗ್ಗೆ ತಿಳಿಸಿದರು. ಚೀಲೂರು ಗ್ರಾಮದ ನಾಟಿ ವೈದ್ಯರು ನಮ್ಮ ಪರಿಸರದ ಸುತ್ತಮುತ್ತ ಸಿಗುವ ಅನೇಕ ಗಿಡಮೂಲಿಕೆಗಳ ಉಪಯೋಗದ ಬಗ್ಗೆ ವಿವರಿಸಿದರು.ಕವಿತಾ ಬಳಿಗಾರ ರಾಮಾಯಣದ ಊರ್ಮಿಳೆಯ ಬಗ್ಗೆ ಮಾಹಿತಿ ನೀಡಿದರು. ಪಶು ಆಸ್ಪತ್ರೆ ಸೌಲಭ್ಯಗಳ ಬಗ್ಗೆ ಜಾನುವಾರು ಅಧಿಕಾರಿ ಎ.ನಾಗರಾಜಪ್ಪ ಮಾಹಿತಿ ನೀಡಿದರು. ಕೆ.ಟಿ.ಸತ್ಯನಾರಾಯಣ, ಸಾಹಿತಿ ನಾಗರಾಜಪ್ಪ ಅರ್ಕಚಾರ್, ಆರುಂಡಿ ಮಂಜಪ್ಪ, ಪುಷ್ಪಾ, ಕದಳಿ ಸಂಘದ ಅಧ್ಯಕ್ಷೆ ಅಂಬಿಕಾ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ. ಭೋಜರಾಜ, ನವೀನ, ಆಚೆಮನೆ ತಿಪ್ಪೇಸ್ವಾಮಿ, ಬಿ.ಜಿ. ಚೈತ್ರಾ, ಜಿ.ನಿಜಲಿಂಗಪ್ಪ, ಸೊಂಡೂರು ಮಹೇಶ್ವರಪ್ಪ, ಎಂ.ಬಿ. ಶಿವಯೋಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
- - - ** (ಈ ಪೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿದರು)-11ಎಚ್.ಎಲ್.ಐ1: