ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕನ್ನಡಸೇನೆ ಪ್ರತಿಭಟನೆ

KannadaprabhaNewsNetwork |  
Published : Jun 01, 2025, 03:47 AM IST
ಕನ್ನಡ ಭಾಷೆಯು ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಕನ್ನಡ ಭಾಷೆಯು ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ಭಾಷೆಯು ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಸಿನಿಮಾರಂಗ ಹಾಗೂ ರಾಜಕೀಯವಾಗಿ ಸೋತಿರುವ ಕಮಲ್‌ಹಾಸನ್ ಬಿಟ್ಟಿ ಪ್ರಚಾರಕ್ಕಾಗಿ ಕನ್ನಡವನ್ನು ತುಳಿಯುವ ಕೆಲಸ ಮಾಡಿರುವುದು ಕನ್ನಡಿಗರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ವೈಯಕ್ತಿಕ ಸಿನಿ ಲಾಭಕ್ಕಾಗಿ ಪುರಾತನ ಭಾಷೆಯನ್ನು ನಿಂದಿಸುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.ಈಗಾಗಲೇ ಕನ್ನಡಚಿತ್ರಗಳಲ್ಲಿ ನಟಿಸಿರುವ ಕಮಲ್‌ ಹಾಸನ್ ಭಾಷೆಯ ಗಂಧವೇ ಅರಿತಿಲ್ಲ. ಕನ್ನಡ ಭಾಷೆ ರಾಷ್ಟ್ರದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಭಾಷೆ. ಕವಿ ಸಂತರು, ದಾರ್ಶನಿಕರು, ಮಹಾ ಪುರುಷರು, ಕೀರ್ತನೆಗಾರರಿಂದ ಮನ್ನಣೆ ಪಡೆದುಕೊಂಡಿರುವ ಕನ್ನಡ ಭಾಷೆಗೆ ಇತರೆ ರಾಜ್ಯದವರು ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ ಎಂದರು.ಕನ್ನಡಕ್ಕೆ ಪ್ರಾಚೀನ ಲಿಪಿ ಹಾಗೂ ಸಾಹಿತ್ಯ ಪರಂಪರೆಯಿದೆ. ಸಾವಿರಾರು ವರ್ಷಗಳಿಂದ ತನ್ನ ಶ್ರೀಮಂತ ಭಾಷಾ ಸಂಸ್ಕೃತಿ ಉಳಿಸಿಕೊಂಡಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದು ಇದರ ಸ್ವಾಭಿಮಾನ ಮತ್ತು ಗೌರವಕ್ಕೆ ಅಪಮಾನಗೊಳಿಸಿ 6.5 ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ದೂರಿದರು.

ಕಮಲ್ ಹಾಸನ್ ಕ್ಷಮೆಗೂ ಮುನ್ನ ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ಕಮಲ್ ಚಿತ್ರ ಬಿಡುಗಡೆಗೆ ಮುಂದಾದರೆ ನೇರ ವಾಗಿ ಚಿತ್ರಮಂದಿರದ ಮಾಲೀಕರು ಗಲಭೆಗೆ ಕಾರಣವಾಗಲಿದ್ದು ಈ ಬಗ್ಗೆ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ, ಕನ್ನಡಿಗರಿಗೆ ಎಲ್ಲಾ ರಾಜ್ಯದವರನ್ನು ಪ್ರೀತಿಯಿಂದ ಅಪ್ಪಿ ಕೊಳ್ಳುವ ಸಂಸ್ಕೃತಿ ಯಿದೆ. ಆದರೆ ಭಾಷೆ, ನೆಲ, ಜಲದ ತಂಟೆಗೆ ಬಂದಲ್ಲಿ ಸುಮ್ಮನೆ ಕೂರುವ ಜನರಲ್ಲ. ಹೀಗಾಗಿ ನಟ ಕಮಲ್ ಕೂಡಲೇ ಹೇಳಿಕೆಗೆ ಕ್ಷಮೆಕೋರಿ ಕನ್ನಡಕ್ಕೆ ತಲೆಬಾಗಲೇಬೇಕು ಎಂದರು.ಪ್ರತಿಭಟನೆಯಲ್ಲಿ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಅನ್ವರ್, ಕಳವಾಸೆ ರವಿ, ಕಲ್ಲುದೊಡ್ಡಿ ಸತೀಶ್, ಶಂಕರೇಗೌಡ, ಪಾಲಾಕ್ಷಿ, ರಮೇಶ್, ನಿಲೇಶ್, ದಯಾನಂದ್, ಅತೀಕ್, ಚೇತನ್, ವಿನಯ್ ಹಾಗೂ ಕಾರ್ಯಕರ್ತರು ಇದ್ದರು. 31 ಕೆಸಿಕೆಎಂ 1ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ