ಕನ್ನಡ ಪ್ರೀತಿಯಿಂದ ಕಲಿಯಬೇಕು, ಒತ್ತಡದಿಂದ ಅಲ್ಲ

KannadaprabhaNewsNetwork |  
Published : Nov 02, 2025, 02:45 AM IST
01ಜಿಯುಡಿ1 | Kannada Prabha

ಸಾರಾಂಶ

ಕನ್ನಡ ನಾಡಲ್ಲಿ ಹುಟ್ಟಿದ ನಾವುಗಳ ಕನ್ನಡ ಭಾಷೆಯ ಕುರಿತು ಕೀಳಿರಮೆ ಹೊಂದಿದ್ದೇವೆ. ಕೆಲವೊಂದು ಕಡೆ ಒತ್ತಡದಿಂದ ಕನ್ನಡ ಬಳಸುತ್ತಾರೆ. ಆದರೆ ಇದು ತಪ್ಪು, ಕನ್ನಡ ಭಾಷೆಯನ್ನು ನಾವೆಲ್ಲರೂ ಮನಸ್ಸಿನಿಂದ, ಪ್ರೀತಿ ಪೂರ್ವಕವಾಗಿ ಮಾತನಾಡಬೇಕು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಲ್ಲಿ ನಾವು ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ ಎಂದೇ ಭಾವಿಸಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪುರಾತನ ಭಾಷೆಯಾದ ಕನ್ನಡವನ್ನು ಎಲ್ಲರೂ ಪ್ರೀತಿಯಿಂದ ಕಲಿಯಬೇಕು, ಪ್ರೀತಿಯಿಂದ ಮಾತನಾಡಬೇಕೇ ವಿನಃ ಒತ್ತಡದಿಂದಾಗಲಿ, ಹೇರಿಕೆಯಿಂದಾಗಲಿ ಕಲಿಯಬಾರದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಾಡಲ್ಲಿ ಹುಟ್ಟಿದ ನಾವುಗಳ ಕನ್ನಡ ಭಾಷೆಯ ಕುರಿತು ಕೀಳಿರಮೆ ಹೊಂದಿದ್ದೇವೆ. ಕೆಲವೊಂದು ಕಡೆ ಒತ್ತಡದಿಂದ ಕನ್ನಡ ಬಳಸುತ್ತಾರೆ. ಆದರೆ ಇದು ತಪ್ಪು, ಕನ್ನಡ ಭಾಷೆಯನ್ನು ನಾವೆಲ್ಲರೂ ಮನಸ್ಸಿನಿಂದ, ಪ್ರೀತಿ ಪೂರ್ವಕವಾಗಿ ಮಾತನಾಡಬೇಕು ಎಂದರು.

ರಾಜ್ಯದಲ್ಲಿ ಹುಟ್ಟಿದ್ದು ಅದೃಷ್ಟ

ಶಿಕ್ಷಕ ರಾಜಾರೆಡ್ಡಿ ಮಾತನಾಡಿ, ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಾದ ಕೆಲಸ ಆಗಬೇಕಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಲ್ಲಿ ನಾವು ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ ಎಂದೇ ಭಾವಿಸಬೇಕು. ಇಂಗ್ಲೀಷ್ ಭಾಷೆಗೂ ಕನ್ನಡ ಭಾಷೆಗೂ ತುಂಬಾನೆ ವ್ಯತ್ಯಾಸವಿದೆ. ಕನ್ನಡ ಭಾಷೆ ಸುಲಭವಾದ ಹಾಗೂ ಅರ್ಥಪೂರ್ಣವಾದ ಭಾಷೆಯಾಗಿದೆ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು, ಕನ್ನಡ ಭಾಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕನ್ನಡಾಂಭೆಯ ರಥದೊಂಧಿಗೆ ಮೆರವಣಿಗೆ ನಡೆಸಲಾಯಿತು.

ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ತಾಪಂ ಇಒ ನಾಗಮಣಿ, ಪಪಂ ಸದಸ್ಯೆ ವೀಣಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕೃಷಿ ಇಲಾಖೆಯ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ದಿವಾಕರ್, ರೇಷ್ಮೆ ಇಲಾಖೆಯ ನಟರಾಜ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮತ್ತಿತರರು ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ