ರಾಜ್ಯದಲ್ಲಿ ಅನ್ಯ ಭಾಷಿಕರಿಗೆ ಕನ್ನಡ ಕಲಿಸಬೇಕು

KannadaprabhaNewsNetwork |  
Published : Dec 08, 2025, 01:15 AM IST
೭ಕೆಎಲ್‌ಆರ್-೭ಕೋಲಾರ ತಾಲೂಕಿನ ನರಸಾಪುರದಲ್ಲಿ ಕನ್ನಡಸೇನೆ ಕರ್ನಾಟಕದಿಂದ ೭೦ನೇಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಮಾತಾಡುವ ಮೂಲ ಜನರನ್ನು ಹುಡುಕುವ ಬದಲು ಅನ್ಯ ಭಾಷಿಕರಿಗೆ ತಿಳಿವಳಿಕೆ ಕೊಟ್ಟು ಕನ್ನಡದ ಬಗ್ಗೆ ಅಭಿಮಾನ ಗೌರವ ಕೊಡುವ ಕೆಲಸವನ್ನು ನಾವು ಎಲ್ಲರನ್ನೂ ಮಾಡಬೇಕಾಗಿದೆ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ ಅದನ್ನು ಉಳಿಸಿ ಬೆಳೆಸಬೇಕು. ಇಲ್ಲಿ ಕನ್ನಡಿಗರ ಅಭಿಮಾನಕ್ಕೆ ಯಾವುದರಲ್ಲೂ ಕಡಿಮೆ ಇಲ್ಲ

ಕನ್ನಡಪ್ರಭ ವಾರ್ತೆ ಕೋಲಾರ ರಾಜ್ಯದಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಮುಂದೊಂದು ದಿನ ಕನ್ನಡ ಹುಡುಕುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸಬೇಕಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ನರಸಾಪುರದಲ್ಲಿ ಕನ್ನಡಸೇನೆ ಕರ್ನಾಟಕದಿಂದ ೭೦ನೇಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡೇತರರಿಗೆ ಕನ್ನಡ ಕಲಿಸಿ

ಕನ್ನಡ ಮಾತಾಡುವ ಮೂಲ ಜನರನ್ನು ಹುಡುಕುವ ಬದಲು ಅನ್ಯ ಭಾಷಿಕರಿಗೆ ತಿಳಿವಳಿಕೆ ಕೊಟ್ಟು ಕನ್ನಡದ ಬಗ್ಗೆ ಅಭಿಮಾನ ಗೌರವ ಕೊಡುವ ಕೆಲಸವನ್ನು ನಾವು ಎಲ್ಲರನ್ನೂ ಮಾಡಬೇಕಾಗಿದೆ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ ಅದನ್ನು ಉಳಿಸಿ ಬೆಳೆಸಬೇಕು. ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗದಿಂದ ಕೂಡಿದ್ದು ಭಾಷೆ ಮಿಶ್ರಿತಗೊಂಡಿದೆ. ಅಲ್ಲದೇ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೊಟ್ಟ ಜಿಲ್ಲೆಯಾಗಿದೆ ಇಲ್ಲಿ ಕನ್ನಡಿಗರ ಅಭಿಮಾನಕ್ಕೆ ಯಾವುದರಲ್ಲೂ ಕಡಿಮೆ ಇಲ್ಲ ಎಂದರು.

ನರಸಾಪುರ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಈಗಾಗಲೇ ೩೫ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗದಲ್ಲಿ ಸರ್ಕಾರಿ ರಾಜಕಾಲುವೆ, ಕೆರೆ, ಜಾಗಗಳನ್ನು ಒತ್ತುವರಿಯಾಗಿ ಅನ್ಯ ಕಾರ್ಯಗಳಿಗೆ, ಸರ್ಕಾರಿ ಕಚೇರಿಗಳಿಗೆ ಜಾಗವಿಲ್ಲವಾಗಿದೆ ಸ್ಮಶಾನಕ್ಕೆ ಕೂಡಲೇ ಜಾಗ ಗುರುತಿಸಿ ಜಾಗ ಮಂಜೂರು ಮಾಡಿಸುವ ಜವಾಬ್ದಾರಿ ನಮ್ಮದು ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ವೈದ್ಯ ಡಾ.ನಾರಾಯಣಸ್ವಾಮಿ ಲಕ್ಷ್ಮೀಸಾಗರ ಸುನಿಲ್ ಕುಮಾರ್, ಮುಖಂಡರಾದ ನರಸಾಪುರ ನವೀನ್, ಜಾಲಿ ಬಾಬು, ಎಂ.ಟಿ.ಬಿ ಶ್ರೀನಿವಾಸ್, ಕನ್ನಡಸೇನೆಯ ಚಂದ್ರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ