ರಾಜ್ಯೋತ್ಸವ ಪ್ರಯುಕ್ತ ಬಸ್ಸಿನಲ್ಲಿ ಕನ್ನಡ ಗೀತಗಾಯನದ ಕಂಪು

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ಕನ್ನಡಪ್ರಭ ವಾರ್ತೆ ಕುಕನೂರುಪಟ್ಟಣದಿಂದ ಹುಬ್ಬಳಿಗೆ ತೆರಳಿದ ಕುಕನೂರು ಸಾರಿಗೆ ಘಟಕದ ಬಸ್ಸಿನಲ್ಲಿ ಕಂಡಕ್ಟರ್ ಅಶೋಕ ಭಂಗಿ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಗೀತಗಾಯನ ಮಾಡಿ ಪ್ರಯಾಣಿಕರಿಗೆ ಕನ್ನಡದ ಕಂಪು ಕೇಳಿಸಿದ್ದಾರೆ.ಬಸ್ಸನ್ನು ಸ್ವಂತ ಖರ್ಚಿನಲ್ಲಿ ಕನ್ನಡಮಯ ಮಾಡಿದ ಕಂಡಕ್ಟರ್ ಅಶೋಕ ಅವರು, ಬಸ್ಸಿನಲ್ಲಿ ಕನ್ನಡಾಂಬೆ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿದರು. ನಂತರ ಬಸ್ ನಿಲ್ದಾಣದಿಂದ ಬಸ್ ಹೊರಡುವ ವೇಳೆ ಬಸ್ಸಿಗೆ ಹತ್ತುವ ಪ್ರಯಾಣಿಕರಿಗೆಲ್ಲ ಕನ್ನಡದ ಶಾಲು ಹೊದಿಸಿ ರಾಜ್ಯೋತ್ಸವ ಶುಭಾಶಯ ತಿಳಿಸಿ ಸ್ವಾಗತಿಸಿಕೊಂಡರು. ನಂತರ ಸಿಹಿ ಹಂಚಿದರು.
ಕನ್ನಡಪ್ರಭ ವಾರ್ತೆ ಕುಕನೂರು ಪಟ್ಟಣದಿಂದ ಹುಬ್ಬಳಿಗೆ ತೆರಳಿದ ಕುಕನೂರು ಸಾರಿಗೆ ಘಟಕದ ಬಸ್ಸಿನಲ್ಲಿ ಕಂಡಕ್ಟರ್ ಅಶೋಕ ಭಂಗಿ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಗೀತಗಾಯನ ಮಾಡಿ ಪ್ರಯಾಣಿಕರಿಗೆ ಕನ್ನಡದ ಕಂಪು ಕೇಳಿಸಿದ್ದಾರೆ. ಬಸ್ಸನ್ನು ಸ್ವಂತ ಖರ್ಚಿನಲ್ಲಿ ಕನ್ನಡಮಯ ಮಾಡಿದ ಕಂಡಕ್ಟರ್ ಅಶೋಕ ಅವರು, ಬಸ್ಸಿನಲ್ಲಿ ಕನ್ನಡಾಂಬೆ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿದರು. ನಂತರ ಬಸ್ ನಿಲ್ದಾಣದಿಂದ ಬಸ್ ಹೊರಡುವ ವೇಳೆ ಬಸ್ಸಿಗೆ ಹತ್ತುವ ಪ್ರಯಾಣಿಕರಿಗೆಲ್ಲ ಕನ್ನಡದ ಶಾಲು ಹೊದಿಸಿ ರಾಜ್ಯೋತ್ಸವ ಶುಭಾಶಯ ತಿಳಿಸಿ ಸ್ವಾಗತಿಸಿಕೊಂಡರು. ನಂತರ ಸಿಹಿ ಹಂಚಿದರು. ಹೂವು, ಕನ್ನಡ ಶಾಲುಗಳಿಂದ ಶೃಂಗಾರಗೊಂಡ ಬಸ್ ಕನ್ನಡಮಯವಾಗಿತ್ತು. ಪ್ರಯಾಣಿಕರೆಲ್ಲರೂ ಶೃಂಗಾರಗೊಂಡ ಬಸ್ಸನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಬಸ್ ಹತ್ತುವ ವೇಳೆ ಎಲ್ಲ ಪ್ರಯಾಣಿಕರಿಗೆ ಕನ್ನಡದ ಶಾಲು ಹೊದಿಸಿ ಸ್ವಾಗತಿಸಿದ್ದು,ಮತ್ತಷ್ಟು ಮೆರುಗು ನೀಡಿತು. ಸರ್ಕಾರ ನಾನಾ ವಿಶೇಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಕ್ರಮ ತೆಗೆದುಕೊಳ್ಳುತ್ತದೆ. ಈ ಮಧ್ಯೆ ಈ ಬಸ್ ಕಂಡಕ್ಟರ್ ಸ್ವ ಪ್ರೇಮದಲ್ಲಿ ಬಸ್ ಶೃಂಗರಿಸಿ ಕನ್ನಡ ಶಾಲು ಹೊದಿಸಿ ಪ್ರಯಾಣಿಕರನ್ನು ಸ್ವಾಗತಿಸಿದ್ದು ಇದು ನಿಜಕ್ಕೂ ಮಾದರಿ ಆಚರಣೆ ಆಗಿದೆ. ಕನ್ನಡ ಗೀತಗಾಯನದ ಕಂಪು: ನಿರ್ವಾಹಕ ಅಶೋಕ ಭಂಗಿ ಮೂಲತಃ ಹವ್ಯಾಸಿ ಹಾಡುಗಾರರು. ಹಾಡುತ್ತಾ ಹಾಡುತ್ತಾ ರಾಗ ಎಂಬಂತೆ ಸದ್ಯ ಉತ್ತಮ ಗಾಯಕರಾಗಿಯೂ ಹೊರಹೊಮ್ಮಿದ್ದಾರೆ. ಬಸ್ ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಗೀತೆಗಳನ್ನು ದಾರಿಯೂದ್ದಕ್ಕೂ ಹಾಡುತ್ತಾ ತೆರಳಿದರು. ಜಿಲ್ಲಾಡಳಿತ, ಸರ್ಕಾರ ಐದು ಕನ್ನಡ ಗೀತೆ ಹಾಡಿ ಕನ್ನಡಕ್ಕೆ ಗೀತನಮನ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು, ಆದರೆ ಅದು ಬಸ್ ನಲ್ಲಿ ಸಹ ಕನ್ನಡ ಕಂಪು ಹರಡಿದೆ. ಕೊಟ್1: ನಾವು ಊರಿಗೆ ಹೋಗಬೇಕು ಎಂದು ಬಸ್ ಹತ್ತಿದಾಗ ಕನ್ನಡದ ಶಾಲು ಹೊದಿಸಿ ಸ್ವಾಗತ ಮಾಡಿದ್ದು ನಮಗೆ ನಿಜಕ್ಕೂ ಸಂತೋಷ ನೀಡಿತು.ಕರ್ನಾಟಕ ರಾಜ್ಯೋತ್ಸವ ಮನೆ ಮನ ಹಬ್ಬ ಆಗಲು ಈ ರೀತಿ ಕಾರ್ಯಗಳು ಸಹ ಜರುಗಬೇಕು. ಬಸ್ ಪ್ರಯಾಣಿಕರು.

Share this article