ಇನ್ನೊಮ್ಮೆ ಪರಿಸ್ಥಿತಿಯ ಒತ್ತಡದಲ್ಲಿ ವ್ಯಕ್ತಿ ಅಪರಾಧ ಎಸಗಬಹುದು. ಅಂತಹ ತಪ್ಪಿಗೆ ಕಾನೂನು ಶಿಕ್ಷೆ ವಿಧಿಸುತ್ತದೆ.
ಬಳ್ಳಾರಿ: ಸನ್ಮಾರ್ಗ ಗೆಳೆಯರ ಬಳಗ, ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸಾಮಾಜಿಕ ಮೌಲ್ಯಗಳ ಕುರಿತು ಉಪನ್ಯಾಸ, ಕನ್ನಡಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಚಾಲನೆ ನೀಡಿ ಮಾತನಾಡಿದ ಕಾರಾಗೃಹದ ಸಹಾಯಕ ಅಧೀಕ್ಷಕ ತಿಮ್ಮಣ್ಣ ಬಿ.ಭಜಂತ್ರಿ, ಮನುಷ್ಯನ ಜೀವನದಲ್ಲಿ ತಪ್ಪುಗಳು ನಡೆಯಬಹುದು. ಕೆಲವೊಮ್ಮೆ ಕೋಪದಲ್ಲಿ, ಕೆಲವೊಮ್ಮೆ ಅಜ್ಞಾನದಲ್ಲಿ, ಇನ್ನೊಮ್ಮೆ ಪರಿಸ್ಥಿತಿಯ ಒತ್ತಡದಲ್ಲಿ ವ್ಯಕ್ತಿ ಅಪರಾಧ ಎಸಗಬಹುದು. ಅಂತಹ ತಪ್ಪಿಗೆ ಕಾನೂನು ಶಿಕ್ಷೆ ವಿಧಿಸುತ್ತದೆ. ಆದರೆ, ಶಿಕ್ಷೆಯ ಉದ್ದೇಶ ಕೇವಲ ದಂಡಿಸುವುದಲ್ಲ, ವ್ಯಕ್ತಿಯನ್ನು ತಿದ್ದಿ ಸಮಾಜದ ಮುಖ್ಯವಾಹಿನಿಗೆ ಮರಳಿ ತರುವುದಾಗಿದೆ ಎಂದರು.
ಸಾಮಾಜಿಕ ಮೌಲ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಮೆಹತಾಬ್ ಕಪ್ಪಗಲ್ ಉಪನ್ಯಾಸ ನೀಡಿದರು.
ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಪ್ರಾಸ್ತಾವಿಕ ಮಾತನಾಡಿದರು. ಕಾರಾಗೃಹದ ಜೈಲರ್‌ಗಳಾದ ಅಶೋಕ್ ಹೊಸಮನಿ, ಡೊಳ್ಳಣ್ಣನವರ್, ಅಮರಪ್ಪ, ಕಾರಾಗೃಹದ ಶಿಕ್ಷಕ ಪಾಲಾಕ್ಷಗೌಡ ಹಾಗೂ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗೋವಿಂದರಾಜು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಹಾಸ್ಯ ಕಲಾವಿದ ಎ. ಎರಿಸ್ವಾಮಿ ಅವರು ವಿವಿಧ ಹಾಸ್ಯಪ್ರಸಂಗಗಳ ಮೂಲಕ ಮನರಂಜಿಸಿದರು. ಜಡೇಶ್ ಎಮ್ಮಿಗನೂರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಿದ್ದು ವೈ.ಎಂ.ಎಸ್. ಅವರು ವಿವಿಧ ಕನ್ನಡ ಗೀತೆಗಳನ್ನು ಹಾಡಿದರು.
ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ನ ಎಚ್. ತಿಪ್ಪೇಸ್ವಾಮಿ ಮುದ್ಧಟನೂರು ಕ್ಯಾಷಿಯೋ ಹಾಗೂ ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು.
ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಸನ್ಮಾರ್ಗ ಗೆಳೆಯರ ಬಳಗ ಹಾಗೂ ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಸಹಯೋಗದಲ್ಲಿ ಜರುಗಿದ ಸಾಮಾಜಿಕ ಮೌಲ್ಯಗಳು ಕುರಿತು ಉಪನ್ಯಾಸ ಹಾಗೂ ಕನ್ನಡಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಕಾರಾಗೃಹದ ಸಹಾಯಕ ಅಧೀಕ್ಷಕ ತಿಮ್ಮಣ್ಣ ಬಿ.ಭಜಂತ್ರಿ ಅವರು ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.