ವಿಶಿಷ್ಟ ವೇಷಭೂಷಣದೊಂದಿಗೆ ಅಭಿಮಾನ ಮೆರೆವ ಕನ್ನಡದ ಕಟ್ಟಾಳು ನಾಗೇಶ್

KannadaprabhaNewsNetwork | Published : Nov 1, 2024 12:12 AM

ಸಾರಾಂಶ

ತರೀಕೆರೆ, ಕನ್ನಡದ ಮನಸುಗಳು ತಮ್ಮ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಗೊಳಿಸುವ ವಿಶೇಷ ಸಂದರ್ಭ ಈ ಕನ್ನಡ ರಾಜ್ಯೋತ್ಸವ. ನಾಡು, ನುಡಿಯ ಬಗೆಗಿನ ಅಭಿಮಾನವನ್ನು ತೋರುವ ಹಲವರ ನಡುವೆ ವಿಶಿಷ್ಟವಾದವರು ತರೀಕೆರೆಯ ಶಿಕ್ಷಕ ನಾಗೇಶ್‌.

ಕನ್ನಡದ ಕೈಂಕರ್ಯದೊಂದಿಗೆ ವೇಷ ಭೂಷಣದಲ್ಲೂ ಕನ್ನಡವನ್ನೇ ವಿಜೃಂಬಿಸುವ ಹೆಗ್ಗಳಿಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡದ ಮನಸುಗಳು ತಮ್ಮ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಗೊಳಿಸುವ ವಿಶೇಷ ಸಂದರ್ಭ ಈ ಕನ್ನಡ ರಾಜ್ಯೋತ್ಸವ. ನಾಡು, ನುಡಿಯ ಬಗೆಗಿನ ಅಭಿಮಾನವನ್ನು ತೋರುವ ಹಲವರ ನಡುವೆ ವಿಶಿಷ್ಟವಾದವರು ತರೀಕೆರೆಯ ಶಿಕ್ಷಕ ನಾಗೇಶ್‌.

ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಸಭೆ ಸಮಾರಂಭಗಳು ಬಂತೆಂದರೆ ತರೀಕೆರೆ ತಾಲೂಕಿನಲ್ಲಿ ಎಲ್ಲರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರ ಇವರದೇ ಕಾರಣ ಇವರು ಕನ್ನಡದ ಕೈಂಕರ್ಯದೊಂದಿಗೆ ವೇಷ ಭೂಷಣದಲ್ಲೂ ಕನ್ನಡವನ್ನೇ ವಿಜೃಂಬಿಸುವ ಹೆಗ್ಗಳಿಕೆಯಿಂದ.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ, ಲಕ್ಕವಳ್ಳಿ ಇಂದಿರಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ನಾಗೇಶ್ ಅವರು ಕನ್ನಡ ಬಾವುಟದ ಮಾದರಿಯ ವೇಷ ತೊಡುವ ಮೂಲಕ ಕನ್ನಡತನವನ್ನು ಮೆರೆಸುವ ಇವರನ್ನು ಎಲ್ಲರೂ ಕರೆಯುವುದು ಕನ್ನಡದ ಕಟ್ಟಾಳು ಎಂದು. ಅದಕ್ಕೆ ಕಾರಣ ತರೀಕೆರೆ ತಾಲೂಕಿನಲ್ಲಿ ಯಾವುದೇ ಕನ್ನಡಪರ ಸಭೆ ಸಮಾರಂಭ, ಸಮ್ಮೇಳನಗಳು ಜರುಗಲಿ, ಅಲ್ಲಿ ಶಿಕ್ಷಕ ನಾಗೇಶ್ ಕನ್ನಡ ವೇಷಭೂಷಣ ಧರಿಸಿ ಕಾಣಿಸಿಕೊಳ್ಳುವುದು ವಿಶೇಷ.ಫಳ ಫಳ ಹೊಳೆಯುವ ಕನ್ನಡ ವೇಷಭೂಷಣ ತೊಟ್ಟು, ಪೇಟ ಧರಿಸಿ, ಕೈಯಲ್ಲಿ ಕನ್ನಡದ ಬೃಹತ್ ಗಾತ್ರದ ಭಾವುಟ ಹಿಡಿದು ಸಮಾರಂಭದಲ್ಲಿ ಕನ್ನಡ ನಾಡಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ, ಕನ್ನಡ ಭಾಷೆ, ಕನ್ನಡ ನಾಡು ನುಡಿಯ ಬಗ್ಗೆ, ಅಭಿಮಾನ ಮೆರಯುವ ಅವರು, ಕನ್ನಡದ ಕಂಪನ್ನೇ ಪಸರಿಸಿ ಎಲ್ಲರಲ್ಲೂ ಕನ್ನಡ ಅಭಿಮಾನ ಉಕ್ಕುವಂತೆ ಪ್ರೋತ್ಸಾಹಿಸು ವುದರಲ್ಲಿ ಶಿಕ್ಷಕ ನಾಗೇಶ್ ಮುಂಚೂಣಿಯಲ್ಲಿರುತ್ತಾರೆ.ಸಭೆ ಸಮಾರಂಭಗಳಲ್ಲಿ ಶಿಕ್ಷಕ ನಾಗೇಶ್ ಅವರನ್ನು ಗುರುತಿಸುವುದು ಕನ್ನಡತನವನ್ನೆ ಪ್ರತಿಬಿಂಬಿಸುವ ಅವರ ಕನ್ನಡ ವೇಷ ಭೂಷಣ ಮತ್ತು ಅವರ ಕೈಯಲ್ಲಿರುವ ಬೃಹತ್ ಕನ್ನಡದ ಬಾವುಟದಿಂದ. ಹಳ್ಳಿಯಿಂದ ಹಿಡಿದು ದೆಹಲಿ ಕೆಂಪು ಕೋಟೆವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಶಿಕ್ಷಕ ನಾಗೇಶ್ ತನ್ನ ಜೊತೆ ಜೊತೆಯಾಗಿ ಕನ್ನಡದ ಬಾವುಟವನ್ನು ಹಾರಿಸುತ್ತಾರೆ-ಆರಾಧಿಸುತ್ತಾರೆ. ಕರಿಯಮ್ಮ ಮತ್ತು ರಂಗಪ್ಪನವರ ಪುತ್ರರಾದ ಶಿಕ್ಷಕ ನಾಗೇಶ್ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಶಿಕ್ಷಣ ಸೇರಿದಂತೆ ಬಿಎ, ಎಂ.ಎ.ಹಾಗೂ ಬಿಇಡಿಯನ್ನು ಕನ್ನಡದಲ್ಲಿಯೇ ಅಭ್ಯಾಸ ಮಾಡಿದ್ದಾರೆ. ಕನ್ನಡ ತಾಯಿ ಭುವನೇಶ್ವರಿ ದೇವಿಯನ್ನು ಪೂಜಿಸುವ ಇವರು ಚಿಕ್ಕಂದಿನಿಂದಲೇ ಕನ್ನಡ ಪ್ರೇಮ ಬೆಳೆಸಿಕೊಂಡು ಬಂದಿದ್ದು ಇವರು ಹಾಡುವ ಭಕ್ತಿಗೀತೆ, ಜಾನಪದ ಮತ್ತು ಭಾವಗೀತೆಗಳಿಗೆ ಎಲ್ಲರೂ ತಲೆದೂಗಲೇ ಬೇಕು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 300ಕ್ಕೂ ಹೆಚ್ಚು ಸದಸ್ಯರನ್ನು ಆಜೀವ ಸದಸ್ಯರನ್ನಾಗಿಸುವಲ್ಲಿ ಶಿಕ್ಷಕ ನಾಗೇಶ್ ಶ್ರಮಿಸಿದ್ದಾರೆ. ಇವರ ಅಪ್ಪಟ ಕನ್ನಡ ಭಾಷಾ ಪ್ರೇಮಕ್ಕೆರಾಜ್ಯಮಟ್ಟದ ಅಕ್ಷರಸಿರಿ ಪ್ರಶಸ್ತಿ, ಜಾನಪದ ಪ್ರಶಸ್ತಿ, ಜಾನಪದ ಸಿರಿ ಪ್ರಶಸ್ತಿ, ಕನಕಪುರಂದರ ಪ್ರಶಸ್ತಿ, ಕೀರ್ತಿ ಪ್ರಕಾಶನ ಸಂಸ್ಥೆಯಿಂದ ಕನ್ನಡ ಕಣ್ಮಣಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ.

ಕನ್ನಡದ ವೇಷಭೂಷಣ ಧರಿಸಿ, ಕನ್ನಡದ ಕಟ್ಟಾಳುವಾಗಿ ಶಿಕ್ಷಕ ನಾಗೇಶ್ ಜನಪ್ರಿಯರಾಗಿದ್ದಾರೆ.--------------31ಕೆಟಿಆರ್.ಕೆ.1ಃ ಶಿಕ್ಷಕ ನಾಗೇಶ್

Share this article