ಕಾಮನ್‌ ಪುಟಕ್ಕೆಉಳುವ ಯೋಗಿಯ ನೋಡಲ್ಲಿ- ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸರಣಿ

KannadaprabhaNewsNetwork |  
Published : Jul 11, 2025, 11:48 PM IST
21 | Kannada Prabha

ಸಾರಾಂಶ

''ಬಂಗಾರದ ಮನುಷ್ಯ'''' ಚಿತ್ರವನ್ನು ನೋಡಿ ಅನೇಕರು ನಗರ ಪಟ್ಟಣಗಳನ್ನ ಬಿಟ್ಟು, ಗ್ರಾಮೀಣ ಪ್ರದೇಶಕ್ಕೆ ಬಂದು ರೈತರಾದರೆಂದು ಕೇಳಿದ್ದೇವೆ,

''''''''ಉಳುವ ನೇಗಿಲ ಯೋಗಿಯ ನೋಡಲ್ಲಿ'''''''' ಈ ರೀತಿಯಾಗಿ ಹೇಳಿ ರೈತರಿಗೆ ಆತ್ಮವಿಶ್ವಾಸವನ್ನ ತುಂಬಿದವರು ರಾಷ್ಟ್ರಕವಿ ಕುವೆಂಪು. ಅವರು ತಮ್ಮ ರೈತ ಪರವಾದ ನಿಲುವನ್ನು ಅವರ ಭೂಮಿಯ ಬಾಂಧವ್ಯ, ರೈತನ ನಿಜಭಕ್ತಿಯನ್ನು ಕವನದ ಮೂಲಕ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಒಲವು ಹತ್ತಾರು ಕಡೆಯ ಮುಖ ಮಾಡುವಾಗ. ''''''''ಕನ್ನಡಪ್ರಭ '''''''' ಮೈಸೂರು ಆವೃತ್ತಿಯಲ್ಲಿ ಸತತ 101 ದಿನಗಳು ವಿಶೇಷ ಸರಣಿ ಲೇಖನಗಳು ಪ್ರಕಟವಾದವು. ಈ ರೀತಿ ಬರೆಯುವುದು ಕೂಡ ಒಂದು ಶ್ರಮದಾಯಕವಾದದ್ದು, ಬೇರೆ ಬೇರೆ ಕ್ಷೇತ್ರದ ವಿಚಾರ ,ವ್ಯಕ್ತಿಗಳ ಬಗ್ಗೆ ಬರೆಯಬಹುದು ಹಾಗೂ ಯಾರಾದರೂ ಮಾಹಿತಿ ನೀಡುತ್ತಾರೆ. ಯಾವುದಾದರೂ ಒಂದು ರೂಪದಲ್ಲಿ ಆ ವಿಚಾರದ ಬಗ್ಗೆ ಮಾಹಿತಿ ದೊರೆಯುತ್ತದೆ. ಆದರೆ ನೇಗಿಲಯೋಗಿಯ ನಿತ್ಯ ಬದುಕಿನ ವಾಸ್ತವ ಸತ್ಯವನ್ನ ರೈತರೊಂದಿಗೆ ಮುಖಾಮುಖಿಯಾಗಿ ಆತನ ಬೆವರಿನ ಶ್ರಮವನ್ನ ಅಕ್ಷರದ ಮೂಲಕ ನೀಡುವುದು ತ್ರಾಸದಾಯ. ಡಾ ರಾಜಕುಮಾರ್ ಅಭಿನಯದ ''''''''ಬಂಗಾರದ ಮನುಷ್ಯ'''''''' ಚಿತ್ರವನ್ನು ನೋಡಿ ಅನೇಕರು ನಗರ ಪಟ್ಟಣಗಳನ್ನ ಬಿಟ್ಟು, ಗ್ರಾಮೀಣ ಪ್ರದೇಶಕ್ಕೆ ಬಂದು ರೈತರಾದರೆಂದು ಕೇಳಿದ್ದೇವೆ, ಓದಿದ್ದೇವೆ,ಚಲನಚಿತ್ರವನ್ನು ನೋಡಿದ್ದೇವೆ . ಅದರಂತೆ "ಉಳುವ ನೇಗಿಲ ಯೋಗಿಯ ನೋಡಲ್ಲಿ " ಎಂಬ ಶೀರ್ಷಿಕೆಯೊಡನೆ ’ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ ರೈತರ ಆತ್ಮಸಾಕ್ಷಿಗೆ ಕಾರಣವಾಗಿದೆ. ನಾನೊಬ್ಬ ರೈತನೆಂದು ಹೆಮ್ಮೆಪಡುವ ಕಡೆಗೆ ಲೇಖನಗಳು ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಒಬ್ಬೊಬ್ಬರ ಲೇಖನವೂ ರೈತರ ಪರಿವಾರಕ್ಕೆ ಸಾಕಷ್ಟು ಅನುಕೂಲವಾಗುವಂತಿತ್ತು. ತನ್ನ ದಿನನಿತ್ಯದ ಬದುಕಿನೊಂದಿಗೆ ಬೆವರಿನ ಮನುಷ್ಯನನ್ನು ಸಮಾಜಮುಖಿಯಾಗಿ ರೈತರ ಆದರ್ಶ ನಾಯಕನನ್ನಾಗಿ ಮಾಡುವುದು ಕಷ್ಟವೇ, ಆದರೆ ಅದನ್ನ ಪ್ರಾಮಾಣಿಕವಾಗಿ ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತಂದು ರೈತರ ಅಸ್ಮಿತೆಯ ಧೂತನಾಗಿ ನಿಂತಿದ್ದು ಕನ್ನಡಪ್ರಭ ಪತ್ರಿಕೆ. ರೈತ ಕುಟುಂಬಕ್ಕೆ ಹೆಣ್ಣು ಕೊಡಲು ಯೋಚಿಸುವಂತಹ ಈ ಯುಗದಲ್ಲಿ ಇಂತಹ ಲೇಖನಗಳನ್ನು ಓದಿದಾಗ ನಾನು ಕೂಡ ರೈತನಾಗಬೇಕು, ಇಂತಹ ಪರಿಸರದಲ್ಲಿ ನಾನೂ ಕೂಡ ಬದುಕಬೇಕು. ರೈತನೆಂದರೆ ಅನ್ನದಾತ ಇಂತಹ ಕಾಯಕ ತಪಸ್ಸಿಗಿಂತ ದೊಡ್ಡದು. ರೈತರ ಕುಟುಂಬದಲ್ಲಿ ಬದುಕುವುದು ಸಾರ್ಥಕ ಬದುಕು ಎನ್ನುವಂತೆ ಲೇಖನಗಳು ಒಡಮೂಡಿದೆ. ಇಂತಹ ವಾತಾವರಣವನ್ನು ಕಲ್ಪಿಸಿಕೊಟ್ಟ ಪತ್ರಿಕೆಗೆ ಅಭಿನಂದನೆಗಳು.

--ಡಾ. ಹರದನಹಳ್ಳಿ ನಂಜುಂಡಸ್ವಾಮಿ ಕವಿ ಹಾಗೂ ಸಹ ಪ್ರಾಧ್ಯಾಪಕರು.ಸರ್ಕಾರಿ ಮಹಿಳಾ ಕಾಲೇಜು ಹುಣಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ