ಆಯುರ್ವೇದ ಪದ್ದತಿಯಿಂದ ಆರೋಗ್ಯ ವೃದ್ದಿ: ಶ್ರೀ ಸರ್ಪಭೂಷಣಸ್ವಾಮೀಜಿ

KannadaprabhaNewsNetwork |  
Published : Jul 11, 2025, 11:48 PM IST
ಪರಂಪರಿಕೆಯ ಅಯುರ್ವೇದ ಪದ್ದತಿಯಿಂದ ಆರೋಗ್ಯ ವೃದ್ದಿ  | Kannada Prabha

ಸಾರಾಂಶ

ನಮ್ಮ ಭಾರತೀಯ ಆಯುರ್ವೇದ ಪದ್ದತಿ ಹಾಗೂ ದೇಹಕ್ಕೆ ಯಾವುದೇ ರೀತಿಯ ದುಷ್ಪರಿಣಾಮಗಳು ಇಲ್ಲದ ಪರಂಪರಿಕ, ನೈಸರ್ಗಿಕ ಔಷಧಿಗಳನ್ನು ಸೇವಿಸಿ, ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಮ್ಮ ಭಾರತೀಯ ಆಯುರ್ವೇದ ಪದ್ದತಿ ಹಾಗೂ ದೇಹಕ್ಕೆ ಯಾವುದೇ ರೀತಿಯ ದುಷ್ಪರಿಣಾಮಗಳು ಇಲ್ಲದ ಪರಂಪರಿಕ, ನೈಸರ್ಗಿಕ ಔಷಧಿಗಳನ್ನು ಸೇವಿಸಿ, ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು. ತಾಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆಯ ಅವರಣದಲ್ಲಿ ನಂಜನಗೂಡಿನ ಬಿ.ವಿ. ಪಂಡಿತ್ ಆಯುರ್ವೇದ ಪಂಚಕರ್ಮ ಆಸ್ಪತ್ರೆ, ಹರವೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನದಲ್ಲಿ ನಡೆದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಯುರ್ವೇದ ಔಷಧಿ ಪದ್ದತಿಯು ಗಿಡಮೂಲಿಕೆಗಳು ಹಾಗೂ ನಮ್ಮ ಹತ್ತಿರದಲ್ಲಿಯೇ ದೊರೆಯುವ ಔಷಧಿ ಗುಣಗಳವುಳ್ಳ ಸಸಿಗಳು ಹಾಗು ಇತರೇ ಪದಾರ್ಥಗಳಿಂದ ತಯಾರು ಮಾಡಲಾಗುತ್ತದೆ. ನಮ್ಮ ಋಷಿ ಮುನಿಗಳು, ಅಸ್ಥಾನಿಕ ನಾಡಿ ವೈದ್ಯರು, ಯೋಗಿಗಳು, ಸಾಧು ಸಂತರು ಇಂಥ ಆಯುರ್ವೇದ ಪದ್ದತಿಯನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದರು. ನಂಜನಗೂಡಿನ ಬಿ.ಪಿ. ಪಂಡಿತರು ಸಹ ಆಯುರ್ವೇದ ಔಷಧಿಯನ್ನು ತಯಾರು ಮಾಡಿ ಜನರ ಆರೋಗ್ಯ ಕಾಪಾಡುಲ್ಲಿ ಸಿದ್ದ ಹಸ್ತರಾಗಿದ್ದರು. ಇಂಥ ೧೩೫ ವರ್ಷಗಳ ಇತಿಹಾಸಯುಳ್ಳ ಸಂಸ್ಥೆಯು ನಮ್ಮ ಗ್ರಾಮದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದರು. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ಬಳಿಕ ೩೦೦ಕ್ಕು ಹೆಚ್ಚು ಮಂದಿಗೆ ಬಿ.ಪಿ. ಪಂಡಿತ್ ಆಯುರ್ವೇದ ಅಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗೀತಾ, ಡಾ. ಕೃಷ್ಣಾ, ಡಾ. ಸುಷ್ಮಾ, ಡಾ. ಸುಮಿತಾ, ನೇತೃತ್ವದ ತಂಡ ತಪಾಸಣೆ ಮಾಡಿ, ಔಷಧೋಪಚಾರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಹರವೆ ಗ್ರಾ.ಪಂ. ಅಧ್ಯಕ್ಷ ಚಿಕ್ಕನಾಗಪ್ಪ, ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್. ಗಿರೀಶ್, ಸರ್ಕಾರಿ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್, ಸಂಯೋಜಕಿ ಪುಷ್ಪಾ, ಮೊದಲಾದವರು ಇದ್ದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ