ದೊಡ್ಡಬಳ್ಳಾಪುರ: ನಗರ ಮಧ್ಯ ಭಾಗದಲ್ಲಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಅನುಮತಿ ನೀಡಿರುವ ಪ್ರಕ್ರಿಯೆ ಖಂಡನೀಯ, ಈ ಬಸ್ ನಿಲ್ದಾಣ ಪ್ರದೇಶವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ದಿನದಿಂದ ದಿನಕ್ಕೆ ಈ ನಮ್ಮ ನಗರವು ಅತಿವೇಗದಲ್ಲಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ಕ್ವಿನ್ ಸಿಟಿ ಅಂತಹ ಯೋಜನೆಗಳು ನಮ್ಮ ನಗರದ ಮೌಲ್ಯವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ನಗರದ ಮಧ್ಯ ಭಾಗದಲ್ಲಿರುವ ಈ ಹೊಸ ಬಸ್ ನಿಲ್ದಾಣವನ್ನು ನಮ್ಮ ಬಳಕೆಗೆ ಬರುವಂತೆ ಯೋಚಿಸಿ, ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಂಚಾರ ದಟ್ಟಣೆಯು ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಧ್ಯಭಾಗದಲ್ಲಿರುವ ಡಿಪೋವನ್ನು ಹೊರವಲಯಕ್ಕೆ ಸ್ಥಳಾಂತರಿಸಿ, ಇರುವ ಜಾಗದ ಸಂಪೂರ್ಣ ಉಪಯೋಗವನ್ನು ಬಸ್ ನಿಲ್ದಾಣದ ಉದ್ದೇಶಕ್ಕಾಗಿ ಬಳಸಿಕೊಂಡು, ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣವನ್ನಾಗಿಸಿಕೊಂಡು ಜನಸಾಮಾನ್ಯರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶ ಎಂದರು.
ರಾಜ್ಯ ಮುಖಂಡರಾದ ಪಿ ವಾಸು, ನರೇಂದ್ರ, ಅರವಿಂದಪ್ಪ, ರಮೇಶ್, ತಾ.ಕಾರ್ಯಧ್ಯಕ್ಷ ಪ್ರದೀಪ್, ಕಾರ್ಮಿಕ ಘಟಕದ ಶಿವ ಶಂಕರ್ ರೆಡ್ಡಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ರಾಧಾ ಮಣಿ, ತಾಯೇ ಗೌಡ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ಉಪಸ್ಥಿತರಿದ್ದರು.16ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಚಂದ್ರಶೇಖರ್ ಮಾತನಾಡಿದರು.