ಕನ್ನಡನಾಡು, ಸಂಚಾರಿ ನಿಯಮ ಪಾಲಿಸಬೇಕು, ಪೊಲೀಸರಿಗೆ ಗೌರವ ಕೊಡಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಹಸಿರು ಉಳಿಸಿ, ಕಾಡನ್ನು ಬೆಳಸಬೇಕು. ಕನ್ನಡಿಗರಾದ ನಾವು ಈ ಕರ್ತವ್ಯ ಪಾಲಿಸಬೇಕು ಎಂದು ಜ್ಯೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಮಳಲೀಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕನ್ನಡನಾಡು, ಸಂಚಾರಿ ನಿಯಮ ಪಾಲಿಸಬೇಕು, ಪೊಲೀಸರಿಗೆ ಗೌರವ ಕೊಡಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಹಸಿರು ಉಳಿಸಿ, ಕಾಡನ್ನು ಬೆಳಸಬೇಕು. ಕನ್ನಡಿಗರಾದ ನಾವು ಈ ಕರ್ತವ್ಯ ಪಾಲಿಸಬೇಕು ಎಂದು ಜ್ಯೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಮಳಲೀಮಠ ಹೇಳಿದರು.
ತಾಲೂಕಿನಲ್ಲಿ ಮಂಗಳವಾರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಪೊಲಿಸರು ತಮ್ಮ ಪ್ರಾಣವನ್ನು ಲಕ್ಕಿಸದೆ ನಮಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆ.ಅವರಿಗೆ ನಾವು ಗೌರವಿಸುವುದು ನಮ್ಮ ಕರ್ತವ್ಯ ಎಂದ ಅವರು, ಇವತ್ತು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗಿದೆ, ಪರಸರವನ್ನು ನಾವು ಉಳಿಸಬೇಕಾದ ಜವಾಬ್ದರಿ ನಮ್ಮ ಮೇಲೆ ಇದೆ, ನಾವೆಲ್ಲರೂ ನಾಡು ನುಡಿಗೆ ಶ್ರಮಿಸೋಣ ಎಂದರು.
ಕಳೆದ ಹನ್ನೊಂದು ವರ್ಷಗಳಿಂದ ತಾನೂ ಸಹ ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದು ಹಾಗೆಯೇ ಬಹುಮುಖ್ಯವಾಗಿ ಸಂಚಾರಿ ನಿಯಮ ಪಾಲಿಸಬೇಕು ಹಾಗೂ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಸಿಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ರಟ್ಟೆಹಳ್ಳಿ ಮೂಲಕ ಹೊನ್ನಾಳಿಗೆ ಆಗಮಿಸಿದ ಜ್ಯೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಮಳಲೀಮಠ, ಹೊನ್ನಾಳಿ ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿ ಪೊಲಿಸರನ್ನು ಗೌರವಿಸಿದರು, ಮುಂದೆ ಚನ್ನಗಿರಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳಸುವುದಾಗಿ ತಿಳಿಸಿದರು
ಹೊನ್ನಾಳಿ ಠಾಣೆಯ ಪೊಲಿಸ್ ಇನ್‌ಸ್ಪೆಕ್ಟರ್ ಸುನಿಲ್‌ಕುಮಾರ್ ಮಾತನಾಡಿ, ಕನ್ನಡನಾಡು,ನುಡಿ,ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತ ಇವರು ಇಡೀ ರಾಜ್ಯಾಧ್ಯಂತ ಪ್ರವಾಸ ಮಾಡುತ್ತಿರುವುದು ಯುವಕರಿಗೆ ಪ್ರೇರಣೆ ಎಂದರು.
ಕಿರುತೆರೆಯ ಜೀ. ಟಿವಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸ್ಟಾರ್ ಸುವರ್ಣದಲ್ಲಿ ಭರ್ಜರಿ ಕಾಮಿಡಿ ಶೋ ಕಾರ್ಯಕ್ರಮದಲ್ಲಿಯೂ ಸಹ ನಾನು ನಟಿಸಿರುವುದಾಗಿ ತಿಳಿಸಿದರು.
ಕನ್ನಡದ ವಿಶೇಷ ರಥ:
ಜ್ಯೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಮಳಲೀಮಠ ಕನ್ನಡರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕನ್ನಡ ಬಾವುಟಗಳು, ಕೆಂಪು,ಹಳದಿ ಹೂವಿನೊಂದಿಗೆ ಇಡೀ ರಥವನ್ನು ಅಲಂಕರಿಸಿದ್ದರು. ರಸ್ತೆ ಸುರಕ್ಷತಾ, ಹೆಲ್ಮೆಟ್ ಕಡ್ಡಾಯ, ಕನ್ನಡ ಶಾಲೆ ಉಳಿಸಿ, ಹಸಿರು ಉಳಿಸಿ ಕಾಡು ಬೆಳಸಿ ಸೇರಿದಂತೆ ಅನೇಕ ಘೋಷವಾಕ್ಯಗಳನ್ನು ಕನ್ನಡ ರಥದಲ್ಲಿ ಬರೆಸಿದ್ದರು.
ಸಬ್ ಇನ್‌ಸ್ಪೆಕ್ಟರ್ ಕುಮಾರ್ ಸೇರಿ ಪೊಲೀಸ್ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.