ಸಂಕೀರ್ತನೆ ಯಾತ್ರೆ
ಪ್ರಕೃತಿ ಶ್ರೀ ಕಲಾ ಕುಟೀರದಿಂದ ಪಟ್ಟಣದ ವಿನಾಯಕ ನಗರದ ಗಣಪತಿ ದೇವಸ್ಥಾನದಲ್ಲಿ ನಾದಬ್ರಹ್ಮ ಸದ್ಗುರು ಶ್ರೀ ತ್ಯಾಗರಾಜರು, ಶ್ರೀ ಕನಕದಾಸ ಮತ್ತು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಅಧ್ಯಕ್ಷ ಉಮಾ ಪ್ರಕಾಶ್ ನೇತೃತ್ವದಲ್ಲಿ ನಡೆಯಿತು.ಬೆಳಗ್ಗೆ ಗಣಪತಿ ದೇವಸ್ಥಾನದಿಂದ ಸಂಕೀರ್ತನೆ ಯಾತ್ರೆಹೊರಟು ಮಕ್ಕಳು ಪಿಳ್ಳಾರಿ ಗೀತೆಗಳು, ದೇವರ ನಾಮ ಗಳನ್ನು ಹಾಡುತ್ತ ವಿನಾಯಕ ನಗರ ಬೀರಲಿಂಗೇಶ್ವರ ಬಡಾವಣೆಯಲ್ಲಿ ಸಂಕೀರ್ತನೆ ನೆರವೇರಿತು, ಆಗ ಗೃಹಿಣಿಯರು ಆರತಿ ಮಾಡಿ ದಾಸವರಣ್ಯೆರಿಗೆ ಗೌರವಿಸಿದರು.ಪ್ರಕೃತಿಶ್ರೀ ಕಲಾ ಕುಟೀರದ ವಿದ್ಯಾರ್ಥಿನಿ ಮುಕ್ತ ಶ್ರೀ ತ್ಯಾಗರಾಜರ ಕುರಿತು, ಆರ್. ಗಣಿಕ ಶ್ರೀ ಪುರಂದರ ದಾಸರ ಕೀರ್ತನಾ ಶ್ರೀ ಕನಕದಾಸರ ಬಗ್ಗೆ ಮಾತನಾಡಿದರು.ಸಂಜೆ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ. ಅಜ್ಜಂಪುರದ ಖ್ಯಾತ ಶಿಲ್ಪಿಗಳು ಮ್ಯಾನಂಡೋ ಲಿನ್ ವಾದಕ ಸಂಜಯ್ ಸಂಗೀತ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯದಲ್ಲಿ ಹಿರಿಯ ಮೃದಂಗ ಕಲಾವಿದ ವಿನೋದಚಾರ್ ಭಾಗವಹಿಸಿದ್ದರು.
ಸದಾನಂದ ಗಾಯನ ಸೇವೆ ಮಾಡಿದರು.ನಾದಬ್ರಹ್ಮ ಸಂಗೀತ ಪಾಠಶಾಲೆ ಮಕ್ಕಳು, ಕನಕಶ್ರೀ ಮಹಿಳಾ ಸಮಾಜ, ಇನ್ನರ್ ವ್ಹೀಲ್ ಕ್ಲಬ್, ಮಮತಾ ಮಹಿಳಾ ಸಮಾಜ, ವಿನಾಯಕ ಭಜನಾ ಮಂಡಳಿ, ಶ್ರೀವತ್ಸ ಭಜನಾ ಮಂಡಳಿ, ಶಾರದಾ ಸತ್ಸಂಗ, ಶ್ರೀ ಹರಿ ಭಜನಾಮಂಡಳಿ ಸದ್ಯಸ್ಯೆ ಹಂಸ ಟಿ.ಶಶಾಂಕ್, ಮಧುರ ಎಂ.ಎಸ್. ಮೇಘನಾ ಟಿ.ಎಚ್. ಭಾಗವಹಿಸಿದ್ದರು.10ಕೆಟಿಆರ್.ಕೆ.4ಃತರೀಕೆರೆಯಲ್ಲಿ ನಡದ ನಾದಬ್ರಹ್ಮ ಸದ್ಗುರು ಶ್ರೀ ತ್ಯಾಗರಾಜರು, ಹಾಗೂ ಶ್ರೀ ಕನಕದಾಸರು, ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಮಕ್ಕಳಿಂದ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.