ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ ಮೂರು ಅವಧಿಯಲ್ಲಿ ಒಂದು ಸ್ಥಾನ ಮರಾಠಿಗರಿಗೆ ಹಾಗೂ ಇನ್ನೊಂದು ಸ್ಥಾನ ಕನ್ನಡಿಗರಿಗೆ ಹಂಚಿಕೆಯಾಗುತ್ತಿತ್ತು. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 21ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಪ್ರೀತಿ ಕಾಮಕರ ಹಾಗೂ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಸದಸ್ಯೆ 53ನೇ ವಾರ್ಡ್‌ನ ಖುರ್ಷಿದಾ ದಾದಾಪೀರ್ ಮುಲ್ಲಾ ನಾಮಪತ್ರ ಸಲ್ಲಿಸಿದರು.
ಈ ವೇಳೆ 65 ಸದಸ್ಯರ ಪೈಕಿ 59 ಮಂದಿ ಹಾಜರಿದ್ದು, 6 ಮಂದಿ ಗೈರಾಗಿದ್ದರು. ಮತದಾನದಲ್ಲಿ ಪ್ರೀತಿ ಕಾಮಕರ ಪರವಾಗಿ 39 ಮತಗಳು ಹಾಗೂ ವಿರೋಧವಾಗಿ 18 ಮತಗಳು ಚಲಾವಣೆಯಾದವು. ಖುರ್ಷಿದಾ ಪರವಾಗಿ 29 ಮತಗಳು ಹಾಗೂ ವಿರೋಧವಾಗಿ 39 ಮತಗಳು ದಾಖಲಾದವು. 10 ಮತಗಳ ಅಂತರದಿಂದ ಪ್ರೀತಿ ಕಾಮಕರ ಆಯ್ಕೆಯಾದರು. ಮೇಯರ್ ಚುನಾವಣೆಯಲ್ಲಿ ಮತದಾನ ಮಾಡದೇ ಇಬ್ಬರು ತಟಸ್ಥರಾದರು.ನಂತರ, ಉಪ ಮೇಯರ್ ಸ್ಥಾನಕ್ಕೆ 46ನೇ ವಾರ್ಡಿನ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಹಾಗೂ 12ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಮೋದಿನಸಾಬ್ ಮತವಾಲೆ ಸ್ಪರ್ಧಿಸಿದರು. ಕೊಂಗಾಲಿ ಪರವಾಗಿ 39 ಮತಗಳು ಹಾಗೂ ವಿರೋಧವಾಗಿ 20 ಮತಗಳು ಬಂದರೆ, ಮೋದಿನಸಾಬ್ ಪರವಾಗಿ 20 ಮತಗಳು ಹಾಗೂ ವಿರೋಧವಾಗಿ 39 ಮತಗಳು ಬಂದವು. 19 ಮತಗಳ ಅಂತರದಿಂದ ಹನುಮಂತ ಕೊಂಗಾಲಿ ಉಪ ಮೇಯರ್ ಆಗಿ ಆಯ್ಕೆಯಾದರು. ಉಪ ಮೇಯರ್ ಚುನಾವಣೆಯಲ್ಲಿ ಎಲ್ಲಾ ಸದಸ್ಯರೂ ಮತ ಚಲಾಯಿಸಿದರು.
---------
ಕೋಟ್.....ಇತಿಹಾಸದಲ್ಲಿ ಮೊದಲ ಬಾರಿಗೆ ನೇಕಾರ ಸಮುದಾಯಕ್ಕೆ ಮೇಯರ್ ಸ್ಥಾನ ಸಿಕ್ಕಿರುವುದು ಸಂತೋಷ ಮತ್ತು ಹೆಮ್ಮೆ ಯಾಗಿದೆ. ನಾನು ಬಡ ನೇಕಾರ ಕುಟುಂಬದ ಮಗಳು. ನನ್ನ ಮೇಲೆ ವಿಶ್ವಾಸವಿಟ್ಟು ಮೇಯರ್ ಆಗಲು ಅವಕಾಶ ನೀಡಿದ ಶಾಸಕ ಅಭಯ ಪಾಟೀಲರಿಗೆ ಧನ್ಯವಾದಗಳು. ಎಲ್ಲಾ 58 ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ವಚ್ಛ ಬೆಳಗಾವಿ ನನ್ನ ಮೊದಲ ಗುರಿಯಾಗಿದೆ.
ಪ್ರೀತಿ ಕಾಮಕರ, ನೂತನ ಮೇಯರ್-----------
ಕೋಟ್.....ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. 24 ಗಂಟೆಗಳ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜೈಪುರ ಮತ್ತು ಇಂದೋರ್ ನಗರಗಳ ಅಧ್ಯಯನ ಪ್ರವಾಸದ ಅನುಭವವನ್ನು ಬೆಳಗಾವಿಯಲ್ಲಿ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಹನುಮಂತ ಕೊಂಗಾಲಿ, ನೂತನ ಉಪ