ಮುನಿರಾಜ ರೆಂಜಾಳ, ಸುರೇಶ್ ರಾವ್, ಪ್ರಕಾಶ್ ಆಚಾರ್ಯರಿಗೆ ಕಾಂತಾವರ ದತ್ತಿ ಪ್ರಶಸ್ತಿ ಪ್ರಕಟ

KannadaprabhaNewsNetwork |  
Published : Mar 22, 2024, 01:04 AM IST
ಮುನಿರಾಜ ರೆಂಜಾಳ, ಶ್ರೀ ಸುರೇಶ್ ರಾವ್ ,ಪ್ರಕಾಶ್ ಆಚಾರ್ಯರಿಗೆ ಕಾಂತಾವರ ದತ್ತಿ ಪ್ರಶಸ್ತಿ ಪ್ರಕಟ | Kannada Prabha

ಸಾರಾಂಶ

ಮಾ. ೨೪ ರಂದು ಕಾಂತಾವರದ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ, ಈಗಾಗಲೇ ಘೋಷಣೆಯಾಗಿರುವ ೨೦೨೩ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಡಾ. ವಿ.ಎ.ಲಕ್ಷಣ ಅವರಿಗೆ ನೀಡುವುದರ ಜೊತೆಗೆ ಈ ಮೂರು ಪ್ರಶಸ್ತಿಗಳನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರದಾನ ಮಾಡಲಿದ್ದಾರೆ

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಾಂತಾವರ ಕನ್ನಡ ಸಂಘದಲ್ಲಿ ಸ್ಥಾಪಿಸಲಾಗಿರುವ ಕಾಂತಾವರ ದತ್ತಿ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ.

ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಪ್ರಸಿದ್ಧ ವಾಗ್ಮಿ ಮುನಿರಾಜ ರೆಂಜಾಳ , ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಅವರು ಸಂಘದಲ್ಲಿ ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಗಮಕಿ ಸುರೇಶ್ ರಾವ್ ಅತ್ತೂರು ಮತ್ತು ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕಾರ್ಕಳದ ಕೆ. ಶಾಮರಾಯ ಆಚಾರ್ಯ ಅವರ ದತ್ತಿನಿಧಿಯಿಂದ ಸಂಘವು ನೀಡುವ ಶಿಲ್ಪಕಲಾ ಪ್ರಶಸ್ತಿಗೆ ಲೋಹಶಿಲ್ಪಿ ಕಾರ್ಕಳ ಪ್ರಕಾಶ್ ಆಚಾರ್ಯ ಅವರು ಆಯ್ಕೆಯಾಗಿರುವುದಾಗಿ ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ.

ಮಾ. ೨೪ ರಂದು ಕಾಂತಾವರದ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ, ಈಗಾಗಲೇ ಘೋಷಣೆಯಾಗಿರುವ ೨೦೨೩ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಡಾ. ವಿ.ಎ.ಲಕ್ಷಣ ಅವರಿಗೆ ನೀಡುವುದರ ಜೊತೆಗೆ ಈ ಮೂರು ಪ್ರಶಸ್ತಿಗಳನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ. ಪ್ರತಿ ಪ್ರಶಸ್ತಿಯೂ ತಲಾ 10 ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ
ಕಡಿಮೆಯಾಗಲಿದೆ ಬೆಂಗಳೂರು - ದಾವಣರೆ ಮಧ್ಯೆ ಅಂತರ : ಎರಡೂ ಗಂಟೆ ಪ್ರಯಾಣ ಸಮಯ ಉಳಿತಾಯ