ಕನ್ನಡಪ್ರಭ ವಾರ್ತೆ ಉಡುಪಿ
ಭಾವಿ ಪರ್ಯಾಯ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ಅಂಗವಾಗಿ ದಕ್ಷಿಣ ಭಾರತ ಕ್ಷೇತ್ರ ಸಂಚಾರ ನಡೆಸುತ್ತಿರುವ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಕನ್ಯಾಕುಮಾರಿಯ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ, ಶುಚಿಂದ್ರದ ಬ್ರಹ್ಮವಿಷ್ಣುಮಹೇಶ್ವರ ಹಾಗೂ ಬೃಹತ್ ಆಂಜನೇಯ ಸ್ವಾಮಿಯ ದರ್ಶನ, ನಾಗರ್‌ಕೊಯಿಲ್‌ನ ಶ್ರೀ ಅನಂತಕೃಷ್ಣ ಮತ್ತು ಸ್ವಯಂಉದ್ಭವ ನಾಗರಾಜ ದರ್ಶನ ಪಡೆದರು.ಅವರನ್ನು ದೇವಳದ ಅಧಿಕಾರಿ ವರ್ಗ ಹಾಗೂ ಅರ್ಚಕರು ಆದರದಿಂದ ಬರಮಾಡಿಕೊಂಡು ಮತ್ತು ಶ್ರಿ ಪುತ್ತಿಗೆ ಪರ್ಯಾಯವು ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿ, ದೇವಳದ ಸಂಪ್ರದಾಯದಂತೆ ಗೌರವಿಸಿದರು.ದೇವರ ದರ್ಶನ ಮಾಡಿಸಿದ ಉಡುಪಿ ಇಂಟರ್‌ನ್ಯಾಷನಲ್ ಹೋಟೆಲ್‌ನ ಮಾಲಕ ವೆಂಕರಮಣ ಪೋತಿ ಅವರ ಮನೆಯಲ್ಲಿ ಶ್ರೀಗಳು ಸಂಸ್ಥಾನ ಪೂಜೆ ನಡೆಸಿ, ನೆರೆದ ಭಕ್ತರಿಗೆ ಕೋಟಿ ಗೀತಾ ಲೇಖನ ದೀಕ್ಷೆ ನೀಡಿ ಪರ್ಯಾಯಕ್ಕೆ ಆಹ್ವಾನ ನೀಡಿ ಅನುಗ್ರಹಿಸಿದರು.
ವಿಠ್ಠಲ್ ಪೋತಿ, ನಾರಾಯಣ ಪೆಜತ್ತಾಯ, ಮಠದ ಕಾರ್ಯದರ್ಶಿ ರತೀಶ್ ತಂತ್ರಿ, ಕಿರಣ್, ಪರ್ಯಾಯ ಸಂಚಾರ ವ್ಯವಸ್ಥಾಪಕ ರಮೇಶ್ ಭಟ್ ಕೆ. ಅಲ್ಲದೆ ಪುತ್ತಿಗೆ ವಿದ್ಯಾರ್ಥಿ ವೃಂದದವರು ಇದ್ದರು.