ಜಿಲ್ಲೆಯಲ್ಲಿ ಶೇ 7.2ರಷ್ಟು ಅರಣ್ಯ ಇರಲು ಕಾರಣವೇ ಕಪ್ಪತಗುಡ್ಡ-ಅನ್ನದಾನೀಶ್ವರ ಸ್ವಾಮೀಜಿ

KannadaprabhaNewsNetwork |  
Published : Jun 07, 2025, 12:32 AM IST
ಕಾರ್ಯಕ್ರಮದಲ್ಲಿ ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಇದೀಗ ಪಟ್ಟಣದಲ್ಲಿ ಎಲ್ಲೆಡೆ ಹಸಿರು ಕಾಣುತ್ತಿದೆ, ಗಿಡಮರಗಳು ಹೆಚ್ಚಾಗಿವೆ. ಕಾರಣ ಇಲ್ಲಿನ ಪರಿಸರವಾದಿಗಳು ಹಲವು ದಶಕಗಳಿಂದ ಗಿಡಮರಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಇನ್ನಷ್ಟು ಗಿಡಮರಗಳನ್ನು ನಾವು ಬೆಳೆಸಲೇಬೇಕು. ಗದಗ ಜಿಲ್ಲೆಯಲ್ಲಿ ಶೇ 7.2ರಷ್ಟು ಅರಣ್ಯ ಇರಲು ಕಾರಣವೇ ಕಪ್ಪತಗುಡ್ಡ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಮುಂಡರಗಿ: ಇದೀಗ ಪಟ್ಟಣದಲ್ಲಿ ಎಲ್ಲೆಡೆ ಹಸಿರು ಕಾಣುತ್ತಿದೆ, ಗಿಡಮರಗಳು ಹೆಚ್ಚಾಗಿವೆ. ಕಾರಣ ಇಲ್ಲಿನ ಪರಿಸರವಾದಿಗಳು ಹಲವು ದಶಕಗಳಿಂದ ಗಿಡಮರಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಇನ್ನಷ್ಟು ಗಿಡಮರಗಳನ್ನು ನಾವು ಬೆಳೆಸಲೇಬೇಕು. ಗದಗ ಜಿಲ್ಲೆಯಲ್ಲಿ ಶೇ 7.2ರಷ್ಟು ಅರಣ್ಯ ಇರಲು ಕಾರಣವೇ ಕಪ್ಪತಗುಡ್ಡ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಸಸಿ ನೆಡುವ ಮತ್ತು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲ ಬಳಸಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕೇವಲ ಪ್ಲಾಸ್ಟಿಕ್‌ನಿಂದ ಅಪಾಯ ಇದೆ. ಅದನ್ನು ತ್ಯಜಿಸಿ ಎಂದು ಹೇಳುವ ಬದಲು ಸರಕಾರ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಬೇಕು. ಇದರಿಂದ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದರು.ತಹಸೀಲ್ದಾರ್ ಯರಿಸ್ವಾಮಿ.ಪಿ.ಎಸ್. ಮಾತನಾಡಿ, ಜನತೆ ಇಲಾಖೆ ಹಾಗೂ ಪರಿಸರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ನಿಮ್ಮ ಮನೆಗಳ ಮುಂದೆ ನೆಟ್ಟಿರುವ ಮರಗಳಿಗೆ ಪ್ರತಿದಿನ ಎರಡು ಕೊಡ ನೀರು ಹಾಕಿ ಬೆಳೆಸಬೇಕು. ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದರಿಂದ ತಾಲೂಕು ಆಡಳಿತದ ಪರವಾಗಿ ಎಲ್ಲರಿಗೂ ಅಭಿನಂದಿಸುವೆ ಎಂದರು.ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಪರಿಸರ ಜಾಗೃತಿ ನಿರಂತರವಾಗಿರಬೇಕು. ನಿತ್ಯ 4.5 ಟನ್ ಹಸಿ ಮತ್ತು 4.5 ಟನ್ ಒಣ ಕಸ ಸಂಗ್ರಹವಾಗುತ್ತದೆ. ಇದೆಲ್ಲ ತ್ಯಾಜ್ಯ ಘಟಕಕ್ಕೆ ಕಳಿಸಲಾಗುತ್ತದೆ. ಹೀಗಾಗಿ ಗಿಡಮರಗಳ ಜತೆಗೆ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.ಪರಿಸರವಾದಿ ಸಿ.ಎಸ್. ಮಾತನಾಡಿ, ಈ ಬಾರಿ ಉದ್ಯಾನವನ ಇತರ ಕಡೆಗೆ ಸಾವಿರ ಸಸಿ ಬೆಳೆಸುವ ಇಲಾಖೆ ಪಣ ತೊಟ್ಟಿದೆ. ಹಾಗೆ ಅಪಾಯಕಾರಿ ಪ್ಲಾಸ್ಟಿಕ್‌ ತ್ಯಜಿಸಿ ಬಟ್ಟೆ ಚೀಲ ಬಳಸುವಂತೆ ಜಾಗೃತಿ ವಹಿಸಲಾಗುತ್ತಿದೆ ಎಂದರು.ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ, ಸಿ.ಡಿ. ಪಾಟೀಲ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಮಾತನಾಡಿದರು.ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಜಿ. ಜವಳಿ, ಕರಬಸಪ್ಪ ಹಂಚಿನಾಳ, ಆರ್.ಎಲ್. ಪೊಲೀಸಪಾಟೀಲ, ಎಂ.ಜಿ. ಗಚ್ಚಣ್ಣವರ, ಎಂ.ಎಸ್. ಹೊಟ್ಟಿನ, ಸಿ.ಕೆ. ಗಣಪ್ಪನವರ, ಎನ್.ಎಫ್. ಅಕ್ಕೂರ ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಮಂಜುನಾಥ ಇಟಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ