ನಾಡಿನ ನಿರ್ಮಾತ ನಾಲ್ವಡಿ ಕೃಷ್ಣರಾಜ ಒಡೆಯರ್

KannadaprabhaNewsNetwork |  
Published : Jun 07, 2025, 12:30 AM IST
ಕೆ ಕೆ ಪಿ ಸುದ್ದಿ 01: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜಯಂತಿ ಆಚರಣೆ | Kannada Prabha

ಸಾರಾಂಶ

ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿರುವ ಕೊಡುಗೆ ಅಪಾರವಾಗಿದ್ದು ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ನಿಜಾಂಶವನ್ನು ಮರೆಮಾಚಿದ ಫಲವಾಗಿ ಇಂದು ವಿದ್ಯಾರ್ಥಿಗಳಿಗೆ ಸತ್ಯದ ಅರಿವು ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಕನ್ನಡ ನಾಡಿನ ಹೆಮ್ಮೆಯ ಅಣೆಕಟ್ಟಾಗಿರುವ ಕನ್ನಂಬಾಡಿ ನಿರ್ಮಾಣ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಸತ್ಯವನ್ನು ಆಳುವ ಸರ್ಕಾರಗಳು ಪಠ್ಯಪುಸ್ತಕದಿಂದ ಮರೆಮಾಚಿ ಈ ನಾಡಿಗೆ ದ್ರೋಹ ಬಗೆದಿವೆ ಎಂದು ಧಮ್ಮದಿವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿರುವ ಕೊಡುಗೆ ಅಪಾರವಾಗಿದ್ದು ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ನಿಜಾಂಶವನ್ನು ಮರೆಮಾಚಿದ ಫಲವಾಗಿ ಇಂದು ವಿದ್ಯಾರ್ಥಿಗಳಿಗೆ ಸತ್ಯದ ಅರಿವು ಇಲ್ಲದಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತನ್ನ ದ್ವಂದ್ವ ನೀತಿಯನ್ನು ಬಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡಿ ಗಲ್ಲದೆ ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿ ರುವುದನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತೆ ಆಗ್ರಹಿಸಿದರು.

ಬಿಜೆಪಿ ಮುಖಂಡ ಆನಂದ್ ಪೈ ಮಾತನಾಡಿ, ದೇಶದಲ್ಲಿ ಪ್ರಪ್ರಥಮವಾಗಿ ಮೀಸಲಾತಿ ಜಾರಿಗೆ ತಂದ ಕೀರ್ತಿ ನಾಲ್ವಡಿಯವರದಾಗಿದೆ, ರಾಜರ ಆಳ್ವಿಕೆ ಮುಗಿದು ಪ್ರಜಾಪ್ರಭುತ್ವ ಆಡಳಿತವನ್ನು ಒಪ್ಪಿ ಆಡಳಿತ ನಡೆಸಿದ ಮೊದಲಿಗರಾದ ನಾಲ್ವಡಿ ಮಹಾರಾಜರು ತಮ್ಮ ಅಲ್ಪ ಅವಧಿಯ ಆಡಳಿತದ ಅವಧಿಯಲ್ಲಿ ರಸ್ತೆ, ಸಾರಿಗೆ, ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಅವಕಾಶ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಶಿರಸ್ತೇದಾರ್ ರಘು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್, ತಾಲೂಕು ಸಮಾಜಮುಖಿ ಸಂಘಟನೆಯ ಮುಖಂಡರಾದ ಕೆ.ಆರ್. ಸುರೇಶ್, ನಲ್ಲಹಳ್ಳಿ ಶ್ರೀನಿವಾಸ್, ಜಯಕರ್ನಾಟಕ ಜನಪರ ವೇದಿಕೆಯ ಕುಮಾರ್ ಸ್ವಾಮಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01: ತಾಲೂಕು ಕಚೇರಿ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜಯಂತಿ ಆಚರಿಸಲಾಯಿತು.

PREV

Latest Stories

ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸ್ ಇಲಾಖೆಗೆ ಸಹಕರಿಸಿ
ಕಾರವಾರ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಲೈಸೆನ್ಸ್‌ ರದ್ದು
ಗ್ಯಾರಂಟಿ ಯೋಜನೆ ಸಹಿಸದೇ ಪ್ರತಿಪಕ್ಷಗಳ ಟೀಕೆ