ಕಪಿಲೆ- ಮೂರು ಸಣ್ಣವು, ಇನ್ನೂ ಮೂರು ನೀಳ್ಗತೆಗಳು

KannadaprabhaNewsNetwork |  
Published : Feb 27, 2025, 12:34 AM IST
30 | Kannada Prabha

ಸಾರಾಂಶ

ಈ ಪೈಕಿ ಕಪಿಲೆ, ಬಟ್ಟನಾಯಿ, ಡೈನಮೊ ಸೈಕಲ್‌ - ಸಣ್ಣ ಕಥೆಗಳು, ರೂಪಸಿ, ದಿಂದಖಾನೆ, ಬಡವನ ಶವ ಸಂಸ್ಕಾರ- ನೀಳ್ಗತೆಗಳು.

ಕನ್ನಡಪ್ರಭ ವಾರ್ತೆ ಮೈಸೂರುಗುಂಡ್ಲುಪೇಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಪ್ರಸನ್ನಮೂರ್ತಿ ಗುರುವಿನಪುರ ಅವರು ''''''''ಕಪಿಲೆ'''''''' ಕಥಾ ಸಂಕಲನ ಹೊರತಂದಿದ್ದು, ಇದರಲ್ಲಿ ಒಟ್ಟು ಆರು ಕಥೆಗಳಿವೆ. ಈ ಪೈಕಿ ಕಪಿಲೆ, ಬಟ್ಟನಾಯಿ, ಡೈನಮೊ ಸೈಕಲ್‌ - ಸಣ್ಣ ಕಥೆಗಳು, ರೂಪಸಿ, ದಿಂದಖಾನೆ, ಬಡವನ ಶವ ಸಂಸ್ಕಾರ- ನೀಳ್ಗತೆಗಳು. ಮೊದಲ ಮೂರು ಬಾಲ್ಯದ ನೈಜ ಘಟನೆಗಳನ್ನು ಆಧರಿಸಿದವು. ಉಳಿದ ಮೂರು ನೈಜ ಘಟನೆಗಳ ಎಳೆಗಳನ್ನು ಹಿಡಿದು ಕಲ್ಪನೆಯನ್ನು ಸೇರಿಸಿ, ಸೃಜಿಸಿದವುಗಳಾಗಿವೆ.ಕಪಿಲೆ- ಹಸುವನ್ನು, ಬಟ್ಟನಾಯಿ- ನಾಯಿಯನ್ನು ಕುರಿತ ಕಥೆ, ಮೂರ್ತಿ ಎಂಬಾತ ತಾನು ಪ್ರೀತಿಯಿಂದ ಸಾಕಿದ ಹಸುವನ್ನು ಮಾವ ಜೂಜಾಡಲು ಮಾರಾಟ ಮಾಡಿದಾಗ ಅನುಭವಿಸುವ ನೋವನ್ನು ''''''''ಕಪಿಲೆ'''''''' ತಿಳಿಸುತ್ತದೆ. ಅದೇ ರೀತಿ ''''''''ಬಟ್ಟನಾಯಿ'''''''' ಸ್ವಾಮಿ ನಿಷ್ಠೆಗೆ ಹೆಸರಾದ ನಾಯಿಯನ್ನು ಕುರಿತದ್ದು. ಕಥಾನಾಯಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ ನಾಯಿಯನ್ನು ಊರಿನವರ ಕೊಂದ ಅಮಾನವೀಯ, ಕ್ರೌರ್ಯವನ್ನು ಬಿಂಬಿಸುತ್ತದೆ. ಅದೇ ರೀತಿ ''''''''ಡೈನಮೊ ಸೈಕಲ್‌'''''''' ನಾಗರಹಾವಿನ ಮೇಲೆ ಹರಿದಿದ್ದು, ಇದರಿಂದ ಹಾವು ಆ ಬಾಲಕ ಅತ್ತ ಬಂದಾಗ ಬುಸುಗುಡುತ್ತಾ ದ್ವೇಷ ತೀರಿಸಿಕೊಳ್ಳಲು ಯತ್ನಿಸುತ್ತಿದ್ದು, ''''''''ಹಾವಿನ ದ್ವೇಷ ಹನ್ನೆರಡು ವರ್ಷ...'''''''' ನೆನಪಿಸುತ್ತದೆ. ಅಂತಿಮವಾಗಿ ಪೂಜೆ- ಪುನಸ್ಕಾರ ಮಾಡಿದಾಗಲೂ ಪ್ರಯೋಜನವಾಗದಿದ್ದಾಗ ಹಾವಾಡಿಗನನ್ನು ಕರೆಸಿ, ಹಾವುನ್ನು ಕೊಲ್ಲಿಸಿದ ಕಥೆ,''''''''ರೂಪಸಿ'''''''' ಕಥೆ ಒಂದು ರೀತಿಯಲ್ಲಿ ಚಲನಚಿತ್ರದ ಕಥೆಯಂತೆ ಸಾಗುತ್ತದೆ. ಚಿತ್ರಕಲಾವಿದ ಅಶೋಕ, ನೈಜ ಸುಂದರಿ ಪ್ರೇಮಾಳ ನಡುವಿನ ಕಾಮ- ಪ್ರೇಮದ ಕಥೆ ಇದು. ಇಲ್ಲಿ ಸಾಕಷ್ಟು ತಿರುವುಗಳಿವೆ. ಇದು ಕಥೆಯನ್ನು ಕುತೂಹಲದಿಂದ ಓದಿಸಿಕೊಂಡು ಹೋಗಲು ಸಹಾಯಕವಾಗಿದೆ.''''''''ದಿಂದಖಾನೆ''''''''- ಶಾಸ್ತ್ರದವನ ಮಾತು ನಂಬಿ ಆಸ್ತಿಯಲ್ಲಿ ಪಾಲು ಪಡೆದು ಅತ್ತೆ- ಮಾವ, ಮೈದುನ- ನಾದಿಯನ್ನು ದೂರ ಮಾಡಿಕೊಂಡು ನಿಧಿ ಪತ್ತೆಗಾಗಿ ಮನೆಹಾಳು ಮಾಡಿಕೊಂಡ ಗಂಡ- ಹೆಂಡತಿಯ ಕಥೆ. ಕೊನೆಗೆ ವರ್ಷಾನುಗಟ್ಟಲೇ ಬಿಟ್ಟು ಆ ಶಾಸ್ತ್ರದವನ ಊರಿಗೆ ಬಂದಾಗ ಆ ವೇಳೆಗೆ ಹುಚ್ಚಿಯಾಗಿದ್ದ ಕಥಾನಾಯಕಿ ನಾಗಮ್ಮ ಆತನನ್ನು ಕೊಂದು ತಾನು ಸಾಯುತ್ತಾಳೆ. ಇಲ್ಲಿ ಭ್ರಮೆ ಮತ್ತು ವಾಸ್ತವಗಳನ್ನು ಅರಿತು ಬಾಳುವೆ ನಡೆಸಬೇಕು ಎಂಬ ಸಂದೇಶ ಇದೆ.''''''''ಬಡವನ ಶವಸಂಸ್ಕಾರ'''''''' ಕಥೆಯಲ್ಲಿ ಸಾಹುಕಾರನ ಜಮೀನಿನಲ್ಲಿ ತನ್ನ ತಾತ- ಅಪ್ಪ ಎಲ್ಲಾ ಜೀತ ಮಾಡಿದರೂ ರಾಜು ಎಂಬಾತನ ಅಪ್ಪ ಸತ್ತಾಗ ಶವಸಂಸ್ಕಾರಕ್ಕೆ ಜಾಗ ಕೊಡದೆ ಅಮಾನವೀಯತೆಯಿಂದ ನಡೆದುಕೊಳ್ಳುವ ಪ್ರಸಂಗ. ಕೊನೆಗೆ ಆ ಸಾಹುಕಾರನ ಮಗಳೇ ರಾಜುವನ್ನು ವಿವಾಹವಾಗುವ ಮೂಲಕ ಸುಖ್ಯಾಂತವಾಗುತ್ತದೆ.ಪ್ರಸನ್ನಮೂರ್ತಿ ಗುರುವಿನಪುರ ಅವರು ಈಗಾಗಲೇ ''''''''ತೆಂಕಣ ಸೀಮೆಯ ಕತೆಗಳು'''''''', ''''''''ನಮ್ಮ ಕಾಡಿನ ಕತೆಗಳು'''''''' ಕಥಾ ಸಂಕಲನ್ನು ಪ್ರಕಟಿಸಿದ್ದಾರೆ. ಗ್ರಾಮ್ಯ ಪರಿಸರದ ಆಗಾಧ ಅನುಭವ ಇವರಿಗಿರುವುದರಿಂದ ಕಥೆಗಳಲ್ಲೂ ಗ್ರಾಮೀಣ ಸೊಗಡು ಎದ್ದು ಕಾಣಿಸುತ್ತದೆ. ಚಾಮರಾಜನಗರ ಸೀಮೆಯ ಭಾಷೆಯನ್ನು ಚೆನ್ನಾಗಿ ಬಳಸಿದ್ದಾರೆ. ಈ ಕಥಾ ಸಂಕಲನವನ್ನು ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿದ್ದು, ಜೆಎಸ್ಎಸ್‌ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರಮೂರ್ತಿ ದೇವನೂರು ಮುನ್ನುಡಿ ಬರೆದಿದ್ದಾರೆ. ಆಸಕ್ತರು ಪ್ರಕಾಶಕ ಡಿ.ಎನ್‌. ಲೋಕಪ್ಪ, ಮೊ. 99026 39593, ಪ್ರಸನ್ನಮೂರ್ತಿ ಗುರುವಿನಪುರ, ಮೊ. 89711 55548 ಸಂಪರ್ಕಿಸಬಹುದು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ