ಕಾಪು: ಸಂಘಟನೆಗಳಿಂದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

KannadaprabhaNewsNetwork |  
Published : Aug 17, 2026, 03:00 AM IST
16ರೋಟರಿ | Kannada Prabha

ಸಾರಾಂಶ

ಶಿರ್ವ ರೋಟರಿ ವತಿಯಿಂದ ಬಂಟಕಲ್ಲು ರೋಟರಿ ಭವನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರೋಟರಿ ಅಧ್ಯಕ್ಷೆ ಜೆಸಿಂತ ಡಿಸೋಜಾ ರಾಷ್ಟ್ರಧ್ವಜವನ್ನು ಅರಳಿಸಿ ಶುಭ ಹಾರೈಸಿದರು. ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮ ಸಂಯೋಜಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕಾಪು: ಶಿರ್ವ ರೋಟರಿ ವತಿಯಿಂದ ಬಂಟಕಲ್ಲು ರೋಟರಿ ಭವನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರೋಟರಿ ಅಧ್ಯಕ್ಷೆ ಜೆಸಿಂತ ಡಿಸೋಜಾ ರಾಷ್ಟ್ರಧ್ವಜವನ್ನು ಅರಳಿಸಿ ಶುಭ ಹಾರೈಸಿದರು. ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮ ಸಂಯೋಜಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಹೆರಾಲ್ಡ್ ಕುಟಿನ್ಹೋ, ವಲಯ ಸಂಯೋಜಕ ವಿಷ್ಣುಮೂರ್ತಿ ಸರಳಾಯ. ಇಂಟರ್‌ನೇಶನಲ್ ಯೂತ್ ಎಕ್ಸೇಂಜ್ ಜಿಲ್ಲಾ ಚೇರ್ಮನ್‌ ಡಾ.ವಿಠಲ್ ನಾಯಕ್, ಮಾಜಿ ಅಧ್ಯಕ್ಷ ರಘುಪತಿ ಐತಾಳ್, ರೋಟರಿ ಟ್ರಸ್ಟ್ ಅಧ್ಯಕ್ಷ ಲೂಕಾಸ್ ಡಿಸೋಜಾ, ರಿಚಾರ್ಡ್ ಪೌಲ್ ಫೆರಾವೊ, ಮೌರಿಸ್ ಕ್ವಾಡ್ರಸ್, ಪ್ರಾನ್ಸಿಸ್ ಕಸ್ತಲಿನೊ, ದಿನೇಶ್ ಕುಲಾಲ್, ಉಷಾ ಮರಾಠೆ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ವಿಲಿಯಮ್ ಮಚಾದೋ ಧನ್ಯವಾದವಿತ್ತರು.

ರಿಕ್ಷಾ ಚಾಲಕರಿಂದ ಸ್ವಾತಂತ್ರ್ಯೋತ್ಸವ: ಬಂಟಕಲ್ಲು ಬಿ.ಸಿ.ರೋಡ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ರಾಷ್ಟ್ರಧ್ವಜ ಅರಳಿಸಿ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಡಾ.ಪ್ರಕಾಶ್ ಭಟ್, ಸ್ಥಳೀಯ ಗಣ್ಯರಾದ ವಿನ್ಸೆಂಟ್ ಕಸ್ತಲಿನೊ, ವಾಲೆಟ್ ಕಸ್ತಲಿನೊ, ದೀಪಕ್ ಕುಲಾಲ್ ಉಪಸ್ಥಿತರಿದ್ದರು. ಸಂಘದ ಅದ್ಯಕ್ಷ ಥಿಯೋಡೋರ್ ಮತಾಯಸ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಲಾಲ್ ಧನ್ಯವಾದವಿತ್ತರು. ಡೆನಿಸ್ ಡಿಸೋಜ ನಿರೂಪಿಸಿದರು.

ಆಟೋ ಯೂನಿಯನ್‌ ಸ್ವಾತಂತ್ರ್ಯೋತ್ಸವ: ಬಂಟಕಲ್ಲು ರಿಕ್ಷಾ ಯೂನಿಯನ್ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷ ಹಾಗೂ ಉದ್ಯಮಿ ಮಾಧವ ಕಾಮತ್ ರಾಷ್ಟ್ರಧ್ವಜ ಅರಳಿಸಿ ಶುಭಾಶಯ ನೀಡಿದರು. ಸಂಘ ಅಧ್ಯಕ್ಷ ಸುಧಾಕರ್, ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಗ್ರಾ.ಪಂ. ಮಾಜಿ ಸದಸ್ಯೆ ವಾಲೆಟ್ ಕಸ್ತಲಿನೊ, ಉಮೇಶ್ ರಾವ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು ಸ್ವಾಗತಿಸಿದರು. ಗೋಪಾಲ ದೇವಾಡಿಗ ಧನ್ಯವಾದವಿತ್ತರು. ಶ್ರುತಿ, ಸುಚನ್ಯಾ ಪ್ರಾರ್ಥಿಸಿದರು, ಹರೀಶ್ ಹೇರೂರು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಉದ್ಯಾವರ ಎಸ್‌ಡಿಎಂ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ