ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ 22 ಮತ್ತು 23ರಂದು ಶಿವಮೊಗ್ಗದಲ್ಲಿ ನಡೆದ 7ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕತಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದವರಿಗೆ ನಗರದ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯಲ್ಲಿ ನಡೆದ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕರಾಟೆಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ, ಇದು ಒಂದು ಪ್ರದೇಶಕ್ಕೆ ಸಿಮೀತವಾಗಿಲ್ಲ. ಕರಾಟೆ ಒಂದು ಶಿಸ್ತು ಬದ್ಧ ಆಟ, ಕರಾಟೆ ಕಲಿಯುವುದರಿಂದ ಮನುಷ್ಯನಲ್ಲಿ ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಲು ಸಾಧ್ಯ. ಶಿಸ್ತು ಇರುವ ಮನುಷ್ಯ ಜೀವನದಲ್ಲಿ ಉತ್ತರೋತ್ತರಕ್ಕೆ ಬೆಳೆಯಬಹುದು ಎಂದು ಹೇಳಿದರು.
ಸೋಲು- ಗೆಲುವು ಕ್ರೀಡೆಯಲ್ಲಿ ಸಹಜ, ಕ್ರೀಡೆಯು ಆಟದ ಜೊತೆಗೆ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಗುಣಗಳನ್ನು ಕಲಿಸುತ್ತದೆ. ಭವಿಷ್ಯ ಉತ್ತಮವಾಗಿರಲು ಕ್ರೀಡೆ ಸಹಕಾರಿಯಾಗಲಿದೆ, ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಪ್ರತಿಯೊಬ್ಬರೂ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಹೆಣ್ಣು ಮಕ್ಕಳು ತಮ್ಮನ್ನು ತಾವು ಸಮಾಜದಲ್ಲಿ ಗಟ್ಟಿಯಾಗಿ ರಕ್ಷಿಸಿಕೊಳ್ಳಲು ಯಾವುದಾದರೂ ಒಂದು ಆಯುಧ ಇದೆ ಎಂದರೆ ಅದು ಕರಾಟೆಯಾಗಿದೆ. ಮಕ್ಕಳಲ್ಲಿ ಅನೇಕ ಕ್ರೀಡಾಸಕ್ತಿಗಳಿದ್ದು, ಅದರಲ್ಲಿ ಕರಾಟೆಯನ್ನು ಇಷ್ಟಪಡುತ್ತಾರೆ. ಪ್ರತಿ ಮಗುವಿನಲ್ಲೂ ತನ್ನದೇಯಾದ ಪ್ರತಿಭೆ ಎಂಬುದು ಇರುತ್ತದೆ. ಆದರೆ, ಆ ಪ್ರತಿಭೆಗೆ ಪ್ರೋತ್ಸಾಹ ಅಗತ್ಯವಾಗಿದೆ, ಆ ಕೆಲಸವನ್ನು ಪೋಷಕರು ಮಾಡಿಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕತಾ ಮತ್ತು ಕಮಿಟೆ ಸ್ಪರ್ಧೇಗಳಲ್ಲಿ ವಿಜೇತರ ವಿವರ:
ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಸಂಸ್ಥೆ ತರಬೇತುದಾರರಾದ ನಶ್ರಾ ಸುಲ್ತಾನ ಎ., ವಾರಿಯರ್ಸ್ ಅಕಾಡೆಮಿ ಪಧಾಧಿಕಾರಿಗಳು, ವಿಜೇತ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.