ಕನ್ನಡಪ್ರಭ ವಾರ್ತೆ ಹಾಸನ ಎಲ್ಲಾ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲು ಆಗ್ರಹ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಡೀಸಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪ್ರತಿಭಟನೆ ಮಂಗಳವಾರ 2ನೇ ದಿನವು ಮುಂದುವರಿಯಿತು. ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನು ಕುಮಾರ್ ಮತ್ತು ಹಿರಿಯ ಪತ್ರಕರ್ತರಾದ ವೆಂಕಟೇಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಸಂಪೂರ್ಣ ಮಳೆ ಕೊರತೆ ಆಗಿದ್ದು, ಜಿಲ್ಲೆಯ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಜಿಲ್ಲೆಯ ಕೆಲವು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿರುವುದು ತಪ್ಪು ನಿರ್ಧಾರ ಮಾಡಿದೆ ಎಂದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಜಿಲ್ಲಾಡಳಿತ ಕೂಡಲೇ ಮಳೆ ಕೊರತೆ ಬಗ್ಗೆ ಮರುಪರಿಶೀಲನೆ ನಡೆಸಿ ಸರಿಯಾದ ವರದಿ ನೀಡುವ ಮೂಲಕ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಗೆ ಬಾರದೆ ಇರುವುದು ವಿಪರ್ಯಾಸ. ಅಲ್ಲದೆ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಇದ್ದು ಅವುಗಳ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದ್ದು, ಘೋಷಣೆ ಮಾಡದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಕರವೇ ಪ್ರತಿಭಟನೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಜೊತೆಗೂಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು. 2ನೇ ದಿನದ ಹೋರಾಟಕ್ಕೆ ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಂ, ವಿನೋದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ , ಸಾಮಾಜಿಕ ಜಾಲತಾಣದ ಅಬ್ದುಲ್ ಖಾದರ್, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಅಭಿ ಗೌಡ, ವಿದ್ಯಾರ್ಥಿ ಘಟಕದ ಪ್ರೀತಂ ರಾಜ್, ಶಿವಣ್ಣ ಗೌಡ, ರೇಖಾ ಮಂಜುನಾಥ್, ದೇವಿಕ ಮದು, ಪದ್ಮಮ್ಮ, ಯಡೆಹಳ್ಳಿ ಆರ್ ಮಂಜುನಾಥ್, ದೇವರಾಜ್, ದಿನೇಶ್ ಬಾಳ್ಳುಪೇಟೆ ಕಿರಣ್ ಅರಸೀಕೆರೆ ಕರಿಬೀರೇಶ್ವರ ಹಾರ್ಡ್ವೇರ್ ಹಾಗೂ ಮಾರ್ಬಲ್ಸ್ ನ ಕುಮಾರ್ , ಪಾಂಡ್ಯ, ಓಹಿಲೇಶ್, ಗಣೇಶ ಗೌಡ ಹಾಗೂ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಕರವೇ ಕಾರ್ಯಕರ್ತರು ಹಾಜರಿದ್ದರು.