ಕಮಲಹಾಸನ್ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : May 31, 2025, 12:11 AM IST
30ಕೆಕೆಆರ್1:ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಹಶೀಲ್ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ಕಮಲಹಾಸನ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ಕರವೇದವರು ಶುಕ್ರವಾರ ತಹಶೀಲ್ದಾರ ಬಸವರಾಜ ತೆನ್ನಳ್ಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕನ್ನಡ ಭಾಷೆ ಬಗ್ಗೆ ಅವಹೇಳನವಾಗಿ ಮಾತನಾಡಿದ ತಮಿಳು ನಟ ಕಮಲಹಾಸನ್ ಥಗ್‌ಲೈಫ್‌ ಚಲನಚಿತ್ರ ರಾಜ್ಯದ ಯಾವುದೇ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಬಾರದು.

ಕೊಪ್ಪಳ (ಯಲಬುರ್ಗಾ): ಬಹುಭಾಷಾ ನಟ ಕಮಲ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಕರವೇ (ಪ್ರವೀಣ ಶೆಟ್ಟಿಬಣ) ಸಂಘಟನೆ ಹಾಗೂ ವಿವಿಧ ಕನ್ನಡಪರ ಸಂಘಟನೆಯ ಹೋರಾಟಗಾರರ ನೇತೃತ್ವದಲ್ಲಿ ಯಲಬುರ್ಗಾ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕ್ರಮಕೈಗೊಳ್ಳವಂತೆ ಒತ್ತಾಯಿಸಿ ಶುಕ್ರವಾರ ತಹಸೀಲ್ದಾರ ಬಸವರಾಜ ತೆನ್ನಳ್ಳಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರವೇ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಅವಹೇಳನವಾಗಿ ಮಾತನಾಡಿದ ತಮಿಳು ನಟ ಕಮಲಹಾಸನ್ ಥಗ್‌ಲೈಫ್‌ ಚಲನಚಿತ್ರ ರಾಜ್ಯದ ಯಾವುದೇ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಬಾರದು. ಅವರ ಎಲ್ಲ ಚಲನಚಿತ್ರಗಳನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಬಂಧ ಹೇರಬೇಕು ಎಂದರು.

ಪತ್ರಕರ್ತ ಸ. ಶರಣಪ್ಪ ಪಾಟೀಲ್ ಮಾತನಾಡಿ, ಇತಿಹಾಸ ಇರುವ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಕಮಲಹಾಸನ್ ವಿವಾದಿತ ಹೇಳಿಕೆ ನೀಡಿರುವುದು ೬.೫ ಕೋಟಿ ಕನ್ನಡ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ.

ರಾಜಕೀಯ ಲಾಭಕ್ಕಾಗಿ ಈ ರೀತಿಯ ಉದ್ದೇಶದಿಂದ ಹಾಗೂ ತಮಿಳು ಜನರ ಮತಗಳ ಮೇಲೆ ಕಣ್ಣು ಇಟ್ಟಿರುವ ನಟರು ತಮ್ಮ ಹೊಸ ಚಲನಚಿತ್ರ ಥಗ್‌ಲೈಫ್ ಧ್ವನಿಸುರಳಿ ಬಿಡುಗಡೆ ಸಂದರ್ಭದಲ್ಲಿ ಅಸಬ್ಧ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು ದೇಶದಲ್ಲಿ ನಮ್ಮ ನಾಡಿಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಂತ ಏಕೈಕ ಭಾಷೆ ಅದು ಕನ್ನಡ ಭಾಷೆ ಕನ್ನಡ ಭಾಷೆಗೆ ತನ್ನದೇ ಆದ ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಅಪಮಾನ ಮಾಡಿರುವ ತಮಿಳು ನಟ ಕಮಲಹಾಸನ್ ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಕನ್ನಡಿಗರ ಕ್ಷೇಮೆ ಕೇಳದಿದ್ದಲ್ಲಿ ಜೂ. ೬ರಂದು ಥಗ್‌ಲೈಫ್ ಚಿತ್ರವನ್ನು ಯಾವುದೇ ಚಿತ್ರ ಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಭೀಮೇಶ ಬಂಡಿವಡ್ಡರ, ವಿರೇಶ ಬಳಗೇರ, ದುರಗಪ್ಪ ಮಾದರ, ರಾಮನಗೌಡ ಪಾಟೀಲ, ರವಿ ನಿಂಗೋಜಿ, ಅಮರೇಶ ಹುಬ್ಬಳ್ಳಿ, ಬಸವರಾಜ ಹಡಪದ, ದೇವಪ್ಪ ಬನ್ನಿಕೊಪ್ಪ, ಪವನ ಹಡಗಲಿ, ಕಂಠಿ ಚಂಡೂರು ಇತರರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’