ಕನ್ನಡಪ್ರಭ ವಾರ್ತೆ ಅರಸೀಕೆರೆ
ಕರವೇ ಸ್ವಾಭಿಮಾನಿ ಸೇನೆಗೆ ಹಾಸನ ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರೀಶ್ ಗೌಡ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.ಪ್ರವಾಸಿಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೀಶ್ ಗೌಡ, ರಾಜ್ಯ ಅಧ್ಯಕ್ಷ ನಿಂಗರಾಜ ಗೌಡ್ರು ಕಟ್ಟಿದಂತಹ ಸೇನೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸೇವೆ ಹಾಗೂ ಹೋರಾಟವನ್ನು ಮಾಡುತ್ತಿದೆ. ನಮಗೆ ಯಾವುದೇ ಜಾತಿ, ಧರ್ಮವಿಲ್ಲ, ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು, ತಾಯಿ ಭುವನೇಶ್ವರಿ ಮಕ್ಕಳಾದ ನಾವು ಹೋರಾಟ ಮಾಡಲು ಸದಾ ಸಿದ್ಧ. ನೂತನ ಅರಸೀಕೆರೆ ಅಧ್ಯಕ್ಷರು ಶ್ರೀಧರ್ ಮರಂಡಿ ಅವರಿಗೆ ಅಭಿನಂದನೆ ತಿಳಿಸುತ್ತಾ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಹೋರಾಟ ಮಾಡಿ ಯಾವುದೇ ವಿರೋಧಗಳಿಗೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಜೊತೆ ನಾವು ಮತ್ತು ನಮ್ಮ ಸೇನೆಯು ಇರುತ್ತದೆ ಎಂದು ಹೇಳಿ ಬಂದಿರುವ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್ ನಮ್ಮ ಸೇನೆಯ ರಾಜ್ಯ ಅಧ್ಯಕ್ಷ ನಿಂಗರಾಜು ಗೌಡ್ರು ಹೋರಾಟ, ನಾಡು, ನುಡಿ, ಹಾಗೂ ಅನ್ಯಾಯದ ವಿರುದ್ಧ ಮಾಡಿರುವಂತಹ ಹೋರಾಟವನ್ನು ತಿಳಿಸೀ, ನೂತನವಾಗಿ ಅರಸೀಕೆರೆ ತಾಲೂಕಿನ ಅಧ್ಯಕ್ಷ ಶ್ರೀಧರ್ ಅವರಿಗೆ ಅಭಿನಂದನೆ ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ಮಾತನಾಡಿದರು.ಅರಸೀಕೆರೆ ತಾಲೂಕು ನೂತನ ಅಧ್ಯಕ್ಷ ಶ್ರೀಧರ್ ಮುರುಂಡಿ ಮಾತಾಡಿ, ನನಗೆ ಅರಸೀಕೆರೆ ತಾಲೂಕಿನ ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸ್ಥಾನ ಕೊಟ್ಟಂತಹ ರಾಜ್ಯಾಧ್ಯಕ್ಷರಾದಂತಹ ನಿಂಗರಾಜ ಗೌಡ್ರು ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಗೌಡರಿಗೆ ಧನ್ಯವಾದ ಎಂದರು. ನಮ್ಮ ನಾಡು,ನುಡಿ, ನೆಲ, ಜಲ, ಭಾಷೆ ವಿಚಾರವಾಗಿ ನಮಗೆ ಅಪಾರವಾದ ಗೌರವವಿದೆ ನಾವು ಮತ್ತು ನಮ್ಮ ಸಂಘಟನೆಯು ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸದಾ ಸಿದ್ದರಾಗಿರುತ್ತೇವೆ, ಮತ್ತು ನಮ್ಮ ಸೇನೆ ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂದು ಹೇಳಿ ಸೇನೆಯ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಗಣ್ಯರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು, ಕಾರ್ಯಕ್ರಮಕ್ಕೆ ಮುನ್ನ ಕಸ್ತೂರ ಬಾ ಆಶ್ರಮಕ್ಕೆ ಆಹಾರಧಾನ್ಯ ನೀಡಿದರುನೂತನ ಪದಾಧಿಕಾರಿಗಳು ಪದಾಧಿಕಾರಿಗಳು: ಗೌರವ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಸೋಮೇಶ್ ಮತ್ತು ಸದಾನಂದ, ಕಾರ್ಯದರ್ಶಿ ಮನು, ಸಹ ಕಾರ್ಯದರ್ಶಿ ಪ್ರಜ್ವಲ್ ಎಸ್ ಜೆ, ಸಂಘಟನಾ ಕಾರ್ಯದರ್ಶಿ ನವೀನ್ ಎಂ ಜೆ, ಉಸ್ತವಾರಿ ಅಧ್ಯಕ್ಷರ ಸುಹಿಲ್, ಸಂಚಾಲಕರಾಗಿ ಮನು ಎಂ ಡಿ, ಚಂದು, ಗಣೇಶ್, ದಿನೇಶ್ ಎಮ್ ಆರ್, ತಾಲೂಕು ಘಟಕದ ಸದಸ್ಯರಾಗಿ ನಂದೀಶ್ ಎಂ ಬಿ, ದೇವರಾಜ್ ಎಂ ಎಸ್, ಯೋಗೇಶ್ ಎಂ ಎಂ, ಪ್ರದೀಪ್, ಶರತ್, ಮೊದಲಾದವರು ಉಪಸ್ಥಿತರಿದ್ದರು.